ಬಸ್ಸಿನಲ್ಲಿ ಬಿಟ್ಟಿದ್ದ ಹಣ, ಬಂಗಾರ ಹಿಂದಿರುಗಿಸಿದ ಸಾರಿಗೆ ಸಿಬ್ಬಂದಿ

| Published : May 02 2024, 12:18 AM IST

ಬಸ್ಸಿನಲ್ಲಿ ಬಿಟ್ಟಿದ್ದ ಹಣ, ಬಂಗಾರ ಹಿಂದಿರುಗಿಸಿದ ಸಾರಿಗೆ ಸಿಬ್ಬಂದಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾಲ್ಕಿ ಪಟ್ಟಣದ ಬಸ್ ಡಿಪೋದಲ್ಲಿ ಹಣ ಮತ್ತು ಬಂಗಾರ ಬಿಟ್ಟುಹೋದ ಪ್ರಯಾಣಿಕರಿಗೆ ಹಿಂದಿರುಗಿಸಿದ ಚಾಲಕ ಮತ್ತು ನಿರ್ವಾಹಕರಿಗೆ ಡಿಪೋ ಸಿಬ್ಬಂದಿ ಸನ್ಮಾನಿಸಿದರು.

ಭಾಲ್ಕಿ:

ತಾಲೂಕಿನ ಆತನೂರದಿಂದ ಭಾಲ್ಕಿಗೆ ಬರುವ ಬಸ್ಸಿನಲ್ಲಿ, ಪ್ರಯಾಣಿಕೆಯೊಬ್ಬರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದ 50 ಸಾವಿರ ರು. ಮತ್ತು 10 ಗ್ರಾಂ. ಬಂಗಾರವನ್ನು ಸಾರಿಗೆ ಸಂಸ್ಥೆ ಬಸ್ ಚಾಲಕ ಮಾಣಿಕ ಮತ್ತು ನಿರ್ವಾಹಕ ಮಂಜಲಿಸಾಬ್ ಪ್ರಯಾಣಿಕರಿಗೆ ಹಿಂದಿರುಗಿಸಿ ಪ್ರಮಾಣಿಕತೆ ಮೆರೆದಿದ್ದಾರೆ.

ಭಾಲ್ಕಿ ಬಸ್ ಡಿಪೋಗೆ ಸೇರಿದ ಬಸ್ ಬುಧವಾರ ಆತನೂರಿನಿಂದ ಭಾಲ್ಕಿಗೆ ಬಂದಿದೆ, ಭಾಲ್ಕಿ ಭೀಮನಗರ ನಿವಾಸಿ ಛಾಯಾ ಶಾಮರಾವಗೆ ಸೇರಿದ ಬ್ಯಾಗ್‌ನಲ್ಲಿ 50 ಸಾವಿರ ರು. ಹಣ ಮತ್ತು 10.ಗ್ರಾಂ ಬಂಗಾರ ಮತ್ತು ಪ್ರಯಾಣಿಕರ ಆಧಾರ ಕಾರ್ಡ ಬಸ್‌ನಲ್ಲಿಯೇ ಬಿಟ್ಟು ಹೋಗಿದ್ದಾರೆ.

ನಿರ್ವಾಹಕ ಮಂಜಲಿ ಸಾಬ್ ಮತ್ತು ಚಾಲಕ ಮಾಣಿಕ ಅವರು ತಕ್ಷಣ ಘಟಕದ ವ್ಯವಸ್ಥಾಪಕರಿಗೆ ತಿಳಿಸಿ, ಇವುಗಳನ್ನು ಬಿಟ್ಟುಹೋದ ಪ್ರಯಾಣಿಕರನ್ನು ಪತ್ತೆ ಹಚ್ಚಿ, ಹಣ ಮತ್ತು ಬಂಗಾರ ಹಿಂದಿರುಗಿಸಿ ಮಾನವೀಯತೆ ಮರೆದಿದ್ದಾರೆ.

ನಿರ್ವಾಹಕ ಮಂಜಲಿಸಾಬ್ ಅವರು ಈ ಹಿಂದೆಯೂ ಕೂಡ ಉದಗೀರನಿಂದ ಭಾಲ್ಕಿಗೆ ಬರುವ ಬಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವಾಗ ಪ್ರಯಾಣಿಕರೊಬ್ಬರ 10 ಸಾವಿರ ರು. ಮತ್ತು 10.ಗ್ರಾಂ ಬೆಳ್ಳಿ ಹಿಂದಿರುಗಿಸಿ ಮಾನವೀಯತೆ ಮರೆದಿದ್ದರು.

ಸಾರಿಗೆ ಸಿಬ್ಬಂದಿ ಮಂಜಲಿಸಾಬ್ ಮತ್ತು ಮಾಣೀಕ ಪ್ರಮಾಣಿಕತೆಗೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕರು ಅಭಿನಂದನೆ ಸಲ್ಲಿಸಿದ್ದಾರೆ.