ಮರ ಮುರಿದು ಬಿದ್ದು ಲೈನ್ ಮನೆ ಹಾನಿ

| Published : Jul 28 2024, 02:10 AM IST

ಸಾರಾಂಶ

ಬಿರುಸಿನ ಮಳೆ ಗಾಳಿಯಿಂದ ಹಾನಿ ಸಂಭವಿಸಿದೆ. ಬಿರುಸಿನ ಮಳೆ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಬಿರುಸಿನ ಮಳೆ ಗಾಳಿಯಿಂದ ಅಲ್ಲಲ್ಲಿ ಹಾನಿ ಸಂಭವಿಸಿದೆ. ಸಮೀಪದ ಚೋನಕೆರೆಯ ಕುಂಬಂಡ ಆನಂದ ಮತ್ತು ತಿಮ್ಮಯ್ಯ ಅವರ ತೋಟದ ಲೈನ್ ಮನೆಗೆ ಪಕ್ಕದ ತೋಟದಲ್ಲಿದ್ದ ಭಾರಿ ಗಾತ್ರದ ಮರ ಒಂದು ಮುರಿದು ಬಿದ್ದು ಹಾನಿ ಸಂಭವಿಸಿದೆ.

ಶನಿವಾರ ಬೆಳಗಿನ ಜಾವ ಮರ ಬಿದ್ದು ಲೈನ್ ಮನೆಯ ಗೋಡೆ ಹಾಗೂ ಶೀಟ್ ಗಳಿಗೆ ಹಾನಿ ಸಂಭವಿಸಿದೆ. ಲೈನ್ ಮನೆಯಲ್ಲಿ ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತದಿಂದ ಪಾರಾಗಿದೆ. ಕೂರುಳಿ- ಎಮ್ಮೆಮಾಡು ರಸ್ತೆಯು ಸ್ವಲ್ಪ ಅಡಚಣೆ ಉಂಟಾಗಿತ್ತು. ಗ್ರಾಮ ಪಂಚಾಯಿತಿ ಸದಸ್ಯ ಪ್ರತೀಪ ಬಿ. ಎಂ. ಹಾಗೂ ಸ್ಥಳೀಯರ ನೆರವಿನಿಂದ ಮರವನ್ನು ಕಟ್ಟಿಂಗ್ ಮಿಷನ್ ನಿಂದ ತುಂಡರಿಸಿ ತೆರವುಗೊಳಿಸುವುದರ ಮೂಲಕ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾದರು.