ಪ್ರಸ್ತುತ ನೇಕಾರರ ಕುಲ ಕಸುಬು ನೇಕಾರಿಕೆ ಕಡಿಮೆಯಾಗುತ್ತಿದ್ದು, ಕೆಲವು ಉರುಗಳಲ್ಲಿ ಸಂಪೂರ್ಣ ನಿಂತಿದೆ ಎಂದು ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಹೇಳಿದರು.

ರಾಣಿಬೆನ್ನೂರು: ಪ್ರಸ್ತುತ ನೇಕಾರರ ಕುಲ ಕಸುಬು ನೇಕಾರಿಕೆ ಕಡಿಮೆಯಾಗುತ್ತಿದ್ದು, ಕೆಲವು ಉರುಗಳಲ್ಲಿ ಸಂಪೂರ್ಣ ನಿಂತಿದೆ ಎಂದು ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಹೇಳಿದರು. ನಗರದ ಕಾಕಿ ಜನಸೇವಾ ಸಂಸ್ಥೆ ಗಣೇಶೋತ್ಸವ ಅರಮನೆಯಲ್ಲಿ ಗುರುವಾರ ಜಿಲ್ಲಾ ದೇವಾಂಗ ಸಮಾಜದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ವಯೋವೃದ್ಧರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನೇಕಾರರು ಬದುಕು ನಡೆಸಲು ಪರ್ಯಾಯ ಉದ್ಯೋಗ ಕಂಡುಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ನಾವು ನಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವದು ಅನಿವಾರ್ಯವಾಗಿದೆ. ಕೈಮಗ್ಗ, ಪವರ್ ಲೂಮ್ ಮುಂತಾದ ಎಲ್ಲ ಉದ್ಯೋಗಗಳು ಸ್ಪರ್ಧಾತ್ಮಕ ಹಂತ ತಲುಪಿದ್ದು ನಮ್ಮ ಸಮಾಜ ಬಾಂಧವರು ಶಿಕ್ಷಣದ ಜೊತೆಗೆ ಇನ್ನಿತರ ಉದ್ಯೋಗಗಳ ಕೌಶಲ್ಯದ ಪರಿಣತಿ ಪಡೆದು ಆ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು. ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ದೇವಾಂಗ ಸಮಾಜ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ನನ್ಮ ಜೊತೆಗಿದೆ. ನಾನು ಸಹ ದೇವಾಂಗ ಸಮಾಜದ ಜನರಲ್ಲಿ ಒಬ್ಬನಾಗಿ ಅವರೊಂದಿಗಿದ್ದೇನೆ. ಅವರಿಗೆ ಎಲ್ಲ ಸಮಯದಲ್ಲೂ ನಾನು ಸ್ಪಂದಿಸುತ್ತೇನೆ ಎಂದರು. ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಪ್ರಕಾಶಾನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಬಸವರಾಜ ಮೈಲಾರ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ, ಡಾ. ಚಂದ್ರಶೇಖರ ಕೇಲಗಾರ, ರಾಜ್ಯ ಕಾರ್ಯದರ್ಶಿ ರಾಜೇಶ, ರಾಜ್ಯ ಕಮಿಟಿ ಸದಸ್ಯರುಗಳಾದ ನಾರಾಯಣಪ್ಪ ಮಂಡಕ್ಕಿ, ವಸಂತ ಕುಂಚೂರ, ಈರನಗೌಡ ಗುಡಿಸಾಗರ, ಲಕ್ಷ್ಮಿಕಾಂತ ಹುಲಗೂರ, ಬಸವರಾಜ ಬೆಂಡಿಗೇರಿ, ಗಣೇಶ ಹಾವನೂರ, ಚಿದಂಬರ ಕುದರಿ ಮತ್ತಿತರರಿದ್ದರು.