ಸಾರಾಂಶ
ಮಾಜಿ ಸಚಿವ ಸಾ ರಾ ಮಹೇಶ್ ಧರ್ಮಸ್ಥಳಕ್ಕೆ ಸುಮಾರು 500ಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ತೆರಳಿದರು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಮಾಜಿ ಸಚಿವ ಸಾ ರಾ ಮಹೇಶ್ ಧರ್ಮಸ್ಥಳ ಕ್ಕೆ ಸುಮಾರು 500ಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ತೆರಳಿದರು.ತೆರಳುವ ಮಾರ್ಗ ಮಧ್ಯೆ ಶನಿವಾರಸಂತೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳ ಪುಣ್ಯ ಸ್ಥಳ ಈ ದೇವಾಲಯದ ಬಗ್ಗೆ ಯಾರೇ ಷಡ್ಯಂತ್ರ ನಡೆಸಿದರು ಅದು ನಡೆಯುವುದಿಲ್ಲ. ಈ ಚಿನ್ನಯ್ಯನ ಹಿಂದೆ ಯಾರು ಯಾರು ಇದ್ದಾರೆ ಎಂದು ತನಿಖೆ ಮುಂದುವರಿಯಬೇಕು. ಎಸ್ ಐ ಟಿ ರಚನೆ ಮಾಡುವವರೆಗೆ ಯಾರು ಮಾತನಾಡಿಲ್ಲ ಎಂಬ ಆರೋಪ ಮಾಡುತ್ತಿದ್ದಾರೆ. ಆದರೆ ಈ ರಚನೆ ಮಾಡಿದ್ದರಿಂದ ಎಲ್ಲಾ ಸತ್ಯಾ ಸತ್ಯತೆ ಹೊರ ಬರುತ್ತಿದೆ ಎಂದು ಹೇಳಿದರು.
ನಾನು ಧರ್ಮಸ್ಥಳದ ಭಕ್ತ. ಹಾಗೂ ಒಬ್ಬ ಜನಪ್ರತಿನಿಧಿಯಾಗಿ ಈ ಪುಣ್ಯ ಕ್ಷೇತ್ರಕ್ಕೆ ಹೋಗುತ್ತಿದ್ದೇನೆ. ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಶನಿವಾರಸಂತೆ ಜೆಡಿಎಸ್ ಪ್ರಮುಖರಾದ ಹರೀಶ್, ಮೋಹನ್ ಧರ್ಮಪ್ಪ, ಮಹಮ್ಮದ್ ಮುಂತಾದವರಿದ್ದರು.