ಇನ್ನೂ ಬಗೆಹರಿಯದ ಕುರ್ಚಿಗಾಗಿ ಕಿತ್ತಾಟ

| Published : Jan 15 2025, 12:47 AM IST / Updated: Jan 15 2025, 12:48 AM IST

ಸಾರಾಂಶ

ತಾಲೂಕಿಗೆ ತಹಸೀಲ್ದಾರ್ ಆಗಿ ಎಸ್.ವೆಂಕಟೇಶಪ್ಪ ೫ ತಿಂಗಳ ಹಿಂದೆ ವರ್ಗಾವಣೆಗೊಂಡಿದ್ದರು. ಅವರ ಸ್ಥಾನಕ್ಕೆ ಮುಜರಾಯಿ ತಹಸೀಲ್ದಾರ್ ಕೆ.ಎನ್ ಸುಜಾತ ರವರನ್ನು ನೇಮಕ ಮಾಡಲಾಯಿತು. ಇದನ್ನು ಪ್ರಶ್ನಿಸಿ ತಹಸೀಲ್ದಾರ್ ಎಸ್.ವೆಂಕಟೇಶಪ್ಪ ಕೆಇಟಿಗೆ ಮೊರೆ ಹೋಗಿ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರಿಂದ ಸಮಸ್ಯೆ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಕುರ್ಚಿಗಾಗಿ ಹಗ್ಗಾಜಗ್ಗಾಟ ಮುಂದುವರೆದಿದ್ದು, ಸೋಮವಾರ ವೆಂಕಟೇಶಪ್ಪ ಹಾಗೂ ಮಂಗಳವಾರ ಸುಜಾತ ಕಚೇರಿಗೆ ಹಾಜರಾಗಿದ್ದಾರೆ.ಬಂಗಾರಪೇಟೆ ಪಟ್ಟಣದ ತಾಲೂಕು ಕಚೇರಿಯಲ್ಲಿ ಒಬ್ಬರು ತಹಸೀಲ್ದಾರರ ನಡುವಿನ ಕಾನೂನು ಸಮರಕ್ಕೆ ೧೦ ದಿನ ಕಳೆದಿದ್ದು, ಇಂದಿಗೂ ಸಹ ಯಾರು ಕಾಯಂ ತಹಸೀಲ್ದಾರರು ಎಂಬುದು ಗೊತ್ತಾಗದೇ ತಾಲೂಕಿನ ಜನತೆ ಕಂಗಾಲಾಗಿದ್ದಾರೆ. ವರ್ಗಾವಣೆ ಆದೇಶಕ್ಕೆ ತಡೆ

ತಾಲೂಕಿಗೆ ತಹಸೀಲ್ದಾರ್ ಆಗಿ ಎಸ್.ವೆಂಕಟೇಶಪ್ಪ ೫ ತಿಂಗಳ ಹಿಂದೆ ವರ್ಗಾವಣೆಗೊಂಡಿದ್ದರು. ಅವರ ಸ್ಥಾನಕ್ಕೆ ಮುಜರಾಯಿ ತಹಸೀಲ್ದಾರ್ ಕೆ.ಎನ್ ಸುಜಾತ ರವರನ್ನು ನೇಮಕ ಮಾಡಲಾಯಿತು. ಇದನ್ನು ಪ್ರಶ್ನಿಸಿ ತಹಸೀಲ್ದಾರ್ ಎಸ್.ವೆಂಕಟೇಶಪ್ಪ ಕೆಇಟಿಗೆ ಮೊರೆ ಹೋಗಿ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು.

ಮಂಗಳವಾರ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಕೆ.ಎನ್.ಸುಜಾತ ಹಾಜರಾಗಿ ತಹಸೀಲ್ದಾರ್ ಕುರ್ಚಿಯಲ್ಲಿ ಕೂರುವ ಮೂಲಕ ಅವರೇ ಇಲ್ಲಿ ತಹಸೀಲ್ದಾರ್ ಎಂಬುದನ್ನು ಸಾಬೀತುಪಡಿಸಿದ್ದಾರೆ.

ತಹಸೀಲ್ದಾರ್ ವೆಂಕಟೇಶಪ್ಪ ವರ್ಗಾವಣೆಗೆ ಕೆಇಟಿ ತಡೆಯಾಜ್ಞೆ ನೀಡಿರುವ ಬಗ್ಗೆ ಮಾರ್ಗದರ್ಶನ ನೀಡಲು ಕೋರಿ ಜ.೪ ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿ ಡಾ.ರವಿ ಪತ್ರ ಬರೆದು ಉತ್ತರದ ನಿರೀಕ್ಷೆಯಲ್ಲಿದ್ದಾರೆ. ಸೋಮವಾರ ವೆಂಕಟೇಶಪ್ಪ ಕಚೇರಿಗೆ ಹಾಜರಾಗಿ ಹೋಗಿರುವುದು ಕುತೂಹಲ ಉಂಟು ಮಾಡಿದೆ.ಕೋಟ್

ಕೆಇಟಿಯಲ್ಲಿ ವರ್ಗಾವಣೆ ಆದೇಶ ರದ್ದು ಮಾಡಿರುವ ಕಾರಣ ರಿಲಿವಿಂಗ್ ಪತ್ರದ ಪ್ರಶ್ನೆಯೇ ಬರುವುದಿಲ್ಲ. ಮೇಲಾಧಿಕಾರಿಗಳ ನಿರ್ದೇಶನದಂತೆ ಸೋಮವಾರ ಕಚೇರಿಗೆ ಹಾಜರಾಗಿ ಕೆಲಸವನ್ನು ನಿರ್ವಹಿಸಿದ್ದೇನೆ. ಬುಧವಾರ ಕೋರ್ಟ್‌ಗೆ ಹೋಗಬೇಕಾದ ಕಾರಣ ಅದರ ತಯಾರಿಗೆ ಮಂಗಳವಾರ ರಜೆ ಹಾಕಿದ್ದೇನೆ. ಕೋರ್ಟ್‌ನ ಆದೇಶದಂತೆ ಮುಂದಿನ ಕ್ರಮವನ್ನು ಕೈಗೊಳ್ಳಲಾಗುತ್ತದೆ.- ಎಸ್.ವೆಂಕಟೇಶಪ್ಪ, ತಹಸೀಲ್ದಾರ್.

ಕೋಟ್ತಹಸೀಲ್ದಾರ್ ವೆಂಕಟೇಶಪ್ಪನವರ ಕೆಇಟಿ ಆದೇಶದ ಬಗ್ಗೆ ಜಿಲ್ಲಾಧಿಕಾರಿ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮಾರ್ಗದರ್ಶನ ಕೋರಿದ್ದಾರೆ. ಡಿಸಿಯಿಂದ ಯಾವುದೇ ಮೂಮೆಂಟ್ ಪತ್ರ ಬಂದಿಲ್ಲ. ಆದ್ದರಿಂದ ಸರ್ಕಾರದ ಆದೇಶದಂತೆ ನಾನು ನನ್ನ ಕೆಲಸವನ್ನು ಮಾಡುತ್ತಿದ್ದೇನೆ. ನಮ್ಮ ಮಧ್ಯೆ ಯಾವುದೇ ವೈಯಕ್ತಿಕ ದ್ವೇಶ ಇಲ್ಲ. ಸರ್ಕಾರದ ಆದೇಶ ಪಾಲನೆ ಮಾಡುತ್ತಿದ್ದೇನೆ.- ಕೆ.ಎನ್.ಸುಜಾತ, ತಹಸೀಲ್ದಾರ್.