ಮಕ್ಕಳ ಜೀವಕ್ಕೆ ಮಾರಕವಾಗುವ 12 ರೋಗಗಳಿಗೆ ಲಸಿಕೆ ಕೊಡಿಸದೇ ಇದ್ದಲ್ಲಿ ಮಕ್ಕಳ ಜೀವಕ್ಕೆ ಯಾವ ಸಮಯದಲ್ಲಾದರೂ ಮಾರಕವಾಗಿ ಪರಿಣಮಿಸಬಹುದು.

ಮಕ್ಕಳಿಗೆ ವಿವಿಧ ಲಸಿಕಾ ಅಭಿಯಾನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ರೋಣ

ಮಕ್ಕಳ ಜೀವಕ್ಕೆ ಮಾರಕವಾಗುವ 12 ರೋಗಗಳಿಗೆ ಲಸಿಕೆ ಕೊಡಿಸದೇ ಇದ್ದಲ್ಲಿ ಮಕ್ಕಳ ಜೀವಕ್ಕೆ ಯಾವ ಸಮಯದಲ್ಲಾದರೂ ಮಾರಕವಾಗಿ ಪರಿಣಮಿಸಬಹುದು. ಆದ್ದರಿಂದ ನಿಗದಿತ ಸಮಯದಲ್ಲಿ ಮಕ್ಕಳಿಗೆ ಲಸಿಕೆ ಹಾಕಿಸಿವವದು ಅತೀ ಮುಖ್ಯವಾಗಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಹೇಳಿದರು.

ತಾಲೂಕಿನ ಹಿರೇಹಾಳ ಗ್ರಾಪಂ ಆವರಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಹಾಳ ಹಾಗೂ ಗ್ರಾಪಂ ಹಿರೇಹಾಳ ಆಶ್ರಯದಲ್ಲಿ ಜರುಗಿದ ಮಕ್ಕಳಿಗೆ ವಿವಿಧ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೀರೋದಿಂದ ಎರಡು ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ, ಬಾಲಕ್ಷಯ, ರೋಟ ಹೆಪಟೈಟಿಸ್ ಬಿ, ಗಂಟಲು ಮಾರಿ, ನಾಯಿ ಕೆಮ್ಮು, ಧನುರ್ವಾಯು, ಹಿಮೋಫಿಲಸ್ ಇನ್ಫ್ಲುಎನ್ಜಾ ಬಿ ನಿಮೊಕೊಕಲ್, ಕಾಂಜೂ ಗೇಟಿವ್ ವೈರಸ್, ಇನ್ಫ್ಲುಎನ್ಜಾ ದಡರಾ, ರುಬೆಲ್ಲಾ, ಮೆದುಳು ಜ್ವರ ಇಂತಹ 12 ಮಾರಕ ರೋಗಗಳು ಮಕ್ಕಳಿಗೆ ಮಾರಕವಾಗಿ ಪರಿಣಮಿಸಲಿದ್ದು, ಕೊಲ್ಲುವ ರೋಗಗಳಿಗಿಂತ ಮಕ್ಕಳ ಜೀವ ಕಾಯುವ ಲಸಿಕೆ ಮಹತ್ತರವಾದದ್ದು, ಆದ್ದರಿಂದ ಲಸಿಕೆ ಹಾಕಿಸಿ ಜಾಣರಾಗಿರಿ ಎಂದು ಪಾಲಕರಿಗೆ ಜಾಗೃತಿ ಮೂಡಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಶಾಂತಾದೇವಿ ದೇಸಾಯಿ ಮಾತನಾಡಿ, ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಕನಿಷ್ಠ ಪಕ್ಷ ತಾಯಿ ಮೂರು ವರ್ಷಗಳ ಅಂತರ ಕಾಯ್ದುಕೊಳ್ಳಬೇಕು. ಆರೋಗ್ಯ ಇಲಾಖೆಯಲ್ಲಿ ವಿಫಲವಾಗಿ ಲಭ್ಯವಿರುವ ತಾತ್ಕಾಲಿಕ ಕುಟುಂಬ ಕಲ್ಯಾಣ ಯೋಜನಾ ವಿಧಾನಗಳನ್ನು ಅಳವಡಿಸಿಕೊಂಡು ಮಗುವಿನಿಂದ ಮಗುವಿಗೆ ಕನಿಷ್ಠ ಮೂರು ವರ್ಷ ಅಂತರ ಕಾಪಾಡಿಕೊಂಡಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ ಚೆನ್ನಾಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಆಶಾ ಕಾರ್ಯಕರ್ತರು, ಗ್ರಾಪಂ ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.