ವಚನಕಾರರು ಕೌಶಲ್ಯತೆಯನ್ನು ಪಡೆದುಕೊಂಡು ಕಾಯಕ ಯೋಗಿಗಳಾಗಿದ್ದರು: ಡಾ.ಎಸ್. ನರೇಂದ್ರ ಕುಮಾರ್

| Published : Mar 07 2025, 11:47 PM IST

ವಚನಕಾರರು ಕೌಶಲ್ಯತೆಯನ್ನು ಪಡೆದುಕೊಂಡು ಕಾಯಕ ಯೋಗಿಗಳಾಗಿದ್ದರು: ಡಾ.ಎಸ್. ನರೇಂದ್ರ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಬೋಧನೆಯ ಹತ್ತಾರು ವಿಷಯ ಹಾಗೂ ಚರ್ಚೆಗೆ ವಚನಗಳು ಸೇತುವೆಯಂತೆ ವಚನಕಾರರು ಕೌಶಲ್ಯತೆಯನ್ನು ಪಡೆದುಕೊಂಡು ಕಾಯಕ ಯೋಗಿಗಳಾಗಿದ್ದರು ಎಂದು ಮೈಸೂರಿನ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಸ್. ನರೇಂದ್ರ ಕುಮಾರ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹುಣಸೂರು

ಬೋಧನೆಯ ಹತ್ತಾರು ವಿಷಯ ಹಾಗೂ ಚರ್ಚೆಗೆ ವಚನಗಳು ಸೇತುವೆಯಂತೆ ವಚನಕಾರರು ಕೌಶಲ್ಯತೆಯನ್ನು ಪಡೆದುಕೊಂಡು ಕಾಯಕ ಯೋಗಿಗಳಾಗಿದ್ದರು ಎಂದು ಮೈಸೂರಿನ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಸ್. ನರೇಂದ್ರ ಕುಮಾರ್ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ ಸಂಶೋಧನೆ ಅಧ್ಯಯನ ಕೇಂದ್ರದ ವತಿಯಿಂದ ಆಯೋಜನೆಗೊಂಡಿದ್ದ ಸರಣಿ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಚನ ಚಳುವಳಿಯನ್ನು ಭಕ್ತಿ ಚಳುವಳಿ ಎಂದು ಕೂಡ ಅಧ್ಯಯನ ಮಾಡಿದ್ದಾರೆ. ಆದರೆ ವಚನಚಳುವಳಿ ಭಕ್ತಿಯನ್ನು ಮೀರಿ ಆರ್ಥಿಕ, ಧಾರ್ಮಿಕ, ರಾಜಕೀಯ, ಸಾಮಾಜಿಕ ನೆಲೆಗಳಲ್ಲಿ ನಡೆದ ಕರ್ನಾಟಕದ ಏಕೈಕ ಚಳವಳಿ ಹಾಗೂ ಮಾನವರಾಗಲು ಅರಿವನ್ನು ಕೊಟ್ಟ ಚಳವಳಿಯಾಗಿದೆ. ವಚನ ಚಳುವಳಿ ಮಾನವೀಯತೆಗೆ ಧ್ವನಿಯಾದ ಚಳವಳಿಯಾಗಿದೆ ಎಂದರು.

ವಿಭಾಗದ ಮುಖ್ಯಸ್ಥ ಎಂ.ಆರ್. ಬಸವಲಿಂಗಸ್ವಾಮಿ ಮಾತನಾಡಿದರು. ಉಪನ್ಯಾಸ ಮಾಲಿಕೆಯ ಮಹತ್ವ ಮತ್ತು ವಚನ ಚಳುವಳಿಗಾರರ ಹೋರಾಟದ ನೆಲೆಯನ್ನು ಜಾನಪದ ವಿದ್ವಾಂಸ ಮೈಲಹಳ್ಳಿ ರೇವಣ್ಣ ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಮಂಜು ಮಾತನಾಡಿ, ಇಂತಹ ಉಪನ್ಯಾಸವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಅಲೆಮಾರಿ ಬದುಕು ಕರ್ತೃ ಕೊಪ್ಪೆ ನಾಗರಾಜು, ಕಾಲೇಜಿನ ಅಧ್ಯಾಪಕರಾದ ಕುಮಾರಸ್ವಾಮಿ, ನಂಜುಂಡಸ್ವಾಮಿ, ಕೆ.ಪಿ.ಪ್ರಸನ್ನ ಮತ್ತು ವಿದ್ಯಾರ್ಥಿನಿಯರು ಇದ್ದರು.