ಕಿತ್ತೂರು ರಾಣಿ ಚೆನ್ನಮ್ಮ ಅವರ ದೇಶಪ್ರೇಮ, ಶೌರ್ಯ, ತ್ಯಾಗ ಇಂದಿನ ಯುವ ಪೀಳಿಗೆಗೆ ಆದರ್ಶವಾಗಿದೆ ಎಂದು ಉಪ ವಿಭಾಗಾಧಿಕಾರಿ ಸಮೀರಪ್ರಕಾಶ ಕೋಡೆ ಹೇಳಿದರು.

ಸವಣೂರ: ಕಿತ್ತೂರು ರಾಣಿ ಚೆನ್ನಮ್ಮ ಅವರ ದೇಶಪ್ರೇಮ, ಶೌರ್ಯ, ತ್ಯಾಗ ಇಂದಿನ ಯುವ ಪೀಳಿಗೆಗೆ ಆದರ್ಶವಾಗಿದೆ ಎಂದು ಉಪ ವಿಭಾಗಾಧಿಕಾರಿ ಸಮೀರಪ್ರಕಾಶ ಕೋಡೆ ಹೇಳಿದರು.

ಪಟ್ಟಣದ ಡಾ. ವಿ.ಕೃ. ಗೋಕಾಕ ಸಭಾ ಭವನದಲ್ಲಿ ಶುಕ್ರವಾರ ಸಾಂಕೇತಿಕವಾಗಿ ತಾಲೂಕು ಆಡಳಿತ ವ್ಯವಸ್ಥೆ ವತಿಯಿಂದ ಏರ್ಪಡಿಸಿದ್ದ ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ತಹಸೀಲ್ದಾರ್ ರವಿಕುಮಾರ ಕೊರವರ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಣಿ ಚೆನ್ನಮ್ಮ ಅವರ ಹೋರಾಟದ ಚರಿತ್ರೆಯನ್ನು ಸ್ಮರಿಸಿ, ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದರು.ಪ್ರಮುಖರಾದ ಬಿ.ಎಂ. ಪಾಟೀಲ, ಎಸ್.ವಿ. ಪಾಟೀಲ, ಬಸವರಾಜ ಇಂಗಳಗಿ, ರಾಜೇಶ್ವರಿ ಬುಶೆಟ್ಟಿ, ಬಸವರಾಜ ಸವೂರ, ವೀರಣ್ಣ ಪ್ರಧಾನ, ಬಂಗಾರಿಗೌಡ ಚನ್ನವೀರಗೌಡ್ರ, ನವೀನ ಬೆಂಡಿಗೇರಿ, ಧರಿಯಪ್ಪಗೌಡ ಪಾಟೀಲ, ಗಂಗಾಧರ ಬಾಣದ, ಲಕ್ಷ್ಮಣ ಕನವಳ್ಳಿ, ರಾಮಣ್ಣ ಅಗಸರ, ನೂರಅಹ್ಮದ ಮತ್ತೆಸಾಬನವರ, ಮುಜಾಹೀದ್ದಿನ್ ದಿವಾನಸಾಬನವರ, ಪೂರ್ಣೇಶ ಪೂಜಾರ, ವಿನಯ ಬುಶೆಟ್ಟಿ, ಹಾಗೂ ಇತರರು ಪಾಲ್ಗೊಂಡಿದ್ದರು.