ರಾಮಾಯಣದ ಮೌಲ್ಯ ಜೀವನಕ್ಕೆ ದಾರಿದೀಪ

| Published : Oct 18 2024, 12:17 AM IST

ಸಾರಾಂಶ

ರಾಮಾಯಣದಲ್ಲಿ ರಾಮನಿಗೆ ಎಷ್ಟು ಮಹತ್ವ ಇದೆಯೋ ಮಹರ್ಷಿ ವಾಲ್ಮೀಕಿ ಅವರಿಗೂ ಅಷ್ಟೇ ಮಹತ್ವವಿದೆ. ಅವರು ಮಹಾಕಾವ್ಯ ರಚಿಸುವ ಮೂಲಕ ಆದಿ ಕವಿ, ಮಹಾಕವಿ ಎಂದು ಪ್ರಖ್ಯಾತಿ ಪಡೆದರು.

ಹುಬ್ಬಳ್ಳಿ:

ರಾಮಾಯಣದ ಮೌಲ್ಯಗಳು ಜೀವನಕ್ಕೆ ದಾರಿದೀಪವಾಗಿದ್ದು ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಇಲ್ಲಿನ ತಾಲೂಕು ಆಡಳಿತ ಸೌಧದ ತಾಲೂಕು ಪಂಚಾಯಿತಿಯಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಜೀವನದಲ್ಲಿ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಗೌರವಯುತ ಜೀವನ ನಡೆಸಬಹುದು. ರಾಮಾಯಣದಲ್ಲಿ ರಾಮನಿಗೆ ಎಷ್ಟು ಮಹತ್ವ ಇದೆಯೋ ಮಹರ್ಷಿ ವಾಲ್ಮೀಕಿ ಅವರಿಗೂ ಅಷ್ಟೇ ಮಹತ್ವವಿದೆ. ಅವರು ಮಹಾಕಾವ್ಯ ರಚಿಸುವ ಮೂಲಕ ಆದಿ ಕವಿ, ಮಹಾಕವಿ ಎಂದು ಪ್ರಖ್ಯಾತಿ ಪಡೆದರು ಎಂದು ಬಣ್ಣಿಸಿದರು.

ನಿವೃತ್ತ ಉಪನ್ಯಾಸಕ ಪ್ರೊ. ಕೆ.ಎಸ್. ಕೌಜಲಗಿ ಮಾತನಾಡಿ, ವಾಲ್ಮೀಕಿ ರಚಿಸಿದ ರಾಮಾಯಣ ಮಾನವೀಯ ಮೌಲ್ಯ ಮತ್ತು ಆಡಳಿತ ಪದ್ಧತಿ ತಿಳಿಸುತ್ತದೆ ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಮತ್ತು ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು. ವಾಲ್ಮೀಕಿ ಭಾವಚಿತ್ರವನ್ನು ನೆನಪಿನ ಕಾಣಿಕೆಯನ್ನಾಗಿ ಮಾರುತಿ ಚಂದ್ರಶೇಖರ ಬೀಳಗಿ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎಸ್ಸಿ ಮತ್ತು ಎಸ್ಟಿ ಶ್ರೇಯೋಭಿವೃದ್ಧಿಗೆ ಅನುಷ್ಠಾನಗೊಳ್ಳುವ ವಿವಿಧ ಯೋಜನೆಗಳ ಮಾಹಿತಿ ಕರಪತ್ರ ಸಾರ್ವಜನಿಕರಿಗೆ ವಿತರಿಸಲಾಯಿತು.

ಹುಡಾ ಅಧ್ಯಕ್ಷ ಶಾಕೀರ ಸನದಿ, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್‌ ಪ್ರಕಾಶ ನಾಶಿ, ಹುಬ್ಬಳ್ಳಿ ಶಹರ ತಹಸೀಲ್ದಾರ್‌ ಕಲಗೌಡ ಪಾಟೀಲ, ತಾಪಂ ಇಒ ಯಶವಂತ ಕುಮಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮೀನಾಕ್ಷಿ ಗುದುಗಿಯವರ, ಮುಖಂಡರಾದ ಗುರುನಾಥ ಉಳ್ಳಿಕಾಶಿ, ಪ್ರೇಮನಾಥ ಚಿಕ್ಕತುಂಬಳ, ದ್ಯಾಮಣ್ಣ, ಅಶೋಕ ವಾಲ್ಮೀಕಿ, ರವಿ ಬೀಳಗಿ, ಶಾಂತಮ್ಮ ಗುಂಜಳ, ಅನೀಲ ಬಾಣೆ, ಭಾರತಿ ಟಪಾಲ, ಗಿರಿಜಮ್ಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪೋಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.