ವೀರಶೈವ ಮಹಾಸಭಾ ಚುನಾವಣೆ ಬಿರುಸಿನ ಮತಯಾಚನೆ

| Published : Jul 19 2024, 12:50 AM IST

ವೀರಶೈವ ಮಹಾಸಭಾ ಚುನಾವಣೆ ಬಿರುಸಿನ ಮತಯಾಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಒಳಪಂಗಡಗಳನ್ನು ಮರೆತು ಎಲ್ಲ ವೀರಶೈವ ಲಿಂಗಾಯತ ವೇದಿಕೆಯಲ್ಲಿ ಒಂದಾಗಲು ಯೋಜನೆಗಳನ್ನು ರೂಪಿಸಲಾಗುವುದು.

ಕುರುಗೋಡು: ಅಖಿತ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಮತ್ತು ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ತಂಡದ ಅಭ್ಯರ್ಥಿಗಳು ಮತ್ತು ಬೆಂಬಲಿತರು ಪಟ್ಟಣದಲ್ಲಿ ಬಿರುಸಿನ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.

ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಾದ ನಾಗರಾಜ್ ಬಾಣಾಪುರ, ಮದಿರೆ ಕುಮಾರಸ್ವಾಮಿ ಮತ್ತು ಯರಿಸ್ವಾಮಿ ಕರಡಿ ಮಾತನಾಡಿ, ಒಳಪಂಗಡಗಳನ್ನು ಮರೆತು ಎಲ್ಲ ವೀರಶೈವ ಲಿಂಗಾಯತ ವೇದಿಕೆಯಲ್ಲಿ ಒಂದಾಗಲು ಯೋಜನೆಗಳನ್ನು ರೂಪಿಸಲಾಗುವುದು. ಸಮಾಜದಲ್ಲಿ ನೊಂದ ವ್ಯಕ್ತಿಗಳನ್ನು ಗುರುತಿಸಿ ಸಹಾಯ ಹಸ್ತ ಚಾಚಲಾಗುವುದು. ಸಮಾಜದ ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಆರ್ಥಿಕ ಸಹಾಯ ನೀಡಿ ಮುಂದಿನ ಶಿಕ್ಷಣ ಪಡೆಯಲು ಸಹಾಯ ಮಾಡಲಾಗುವುದು. ಜಿಲ್ಲಾ ಕೇಂದ್ರದಲ್ಲಿ ಬಾಲಕಿಯರ ವಸತಿ ನಿಲಯ ನಿರ್ಮಾಣ ಮತ್ತು ಮಹಾಸಭಾ ಕಚೇರಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು. ಸಮಾಜದ ಜನರು ಸಮಸ್ಯೆಗಳಿಗೆ ಸಿಲುಕಿದರೆ ಅವರಿಗೆ ನೆರವಾಗುವ ಯೋಜನೆ ನಮ್ಮ ತಂಡದವರಲ್ಲಿದೆ. ಎಲ್ಲರೂ ನಮ್ಮ ತಂಡವನ್ನು ಬೆಂಬಲಿಸಿ ಅಧಿಕಾರಕ್ಕೆ ಬರಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಅಭ್ಯರ್ಥಿಗಳಾದ ದೀಪಾ ಸಿರಿಗೇರಿ, ಬಿ.ಜಿ. ಮಂಜುಳಾ, ಎಚ್. ಶಾರದಾ, ಮಂಜುನಾಥ ಕಮ್ಮರಚೇಡು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕುರುಗೋಡು ತಾಲೂಕು ಅಧ್ಯಕ್ಷ ಅರಿವಿ ಶರಣಬಸವ, ಮುಖಂಡರಾದ ಶಿವರುದ್ರಯ್ಯಸ್ವಾಮಿ, ಮುಷ್ಟಗಟ್ಟೆ ಪಂಪಾಪತಿ, ಸದಾನಂದ ಗೌಡ, ಬಳಿಗಾರ ಪಂಪಾಪತಿ ಗೌಡ, ಟಿಎಚ್. ಮಲ್ಲೇಶಪ್ಪ, ಪ್ರೇಮ್, ಕುಂಬಾರು ದೊಡ್ಡಪ್ಪ, ಸುನೀಲ್, ಮಂಗಳೂರು ಬಸವರಾಜ, ಎಚ್.ಎಸ್. ನಾಗರಾಜ, ಬಾದನಹಟ್ಟಿ ಜೀರ್ ಬಸವರಾಜ, ನಟರಾಜ ಗೌಡ, ಶಶಿಗೌಡ, ಮೂಗುತಿ ಸುರೇಶ್, ಯೋಗೀಶ್, ಮುಷ್ಟಗಟ್ಟೆ ಭೀಮನಗೌಡ ಇದ್ದರು.