ಸಾರಾಂಶ
ಬಳ್ಳಾರಿ ಲೋಕಸಭೆ ಹಾಗೂ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ನಗರದ ಜೈ ಭೀಮ್ ವೃತ್ತದಲ್ಲಿ ಶುಕ್ರವಾರ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಹೊಸಪೇಟೆ: ಬಳ್ಳಾರಿ ಲೋಕಸಭೆ ಹಾಗೂ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ನಗರದ ಜೈ ಭೀಮ್ ವೃತ್ತದಲ್ಲಿ ಶುಕ್ರವಾರ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನೂತನ ಸಂಸದರಾಗಿ ಆಯ್ಕೆಯಾದ ಈ. ತುಕಾರಾಂ, ಈಶಾನ್ಯ ಪದವೀಧರ ಚುನಾವಣೆಯಲ್ಲಿ ಚಂದ್ರಶೇಖರ್ ಪಾಟೀಲ್ ಆಯ್ಕೆಯಾಗಿದ್ದು, ವಸಂತ ಕುಮಾರ್ ಸೇರಿದಂತೆ ಪಕ್ಷದ ಏಳು ಜನರು ವಿಧಾನ ಪರಿಷತ್‌ಗೆ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಈ ವೇಳೆ ಪರಸ್ಪರ ಸಿಹಿ ಹಂಚಿ ಖುಷಿ ಪಟ್ಟರು.ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಕಾಂಗ್ರೆಸ್ ಅಧಿನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆಪಿಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ವರಿಷ್ಠರ ಪರ ಘೋಷಣೆ ಕೂಗಿದರು.
ಮುಖಂಡರಾದ ವಿನಾಯಕ ಶೆಟ್ಟರ್, ಸಿ. ಖಾಜಾ ಹುಸೇನ್, ಕೆ.ಎಂ. ಹಾಲಪ್ಪ, ಕೆ.ಬಿ. ಶ್ರೀನಿವಾಸ ರೆಡ್ಡಿ, ನಿಂಬಗಲ್ ರಾಮಕೃಷ್ಣ, ಕೆ. ರಮೇಶ, ಅನಂತ್ ಪದ್ಮನಾಭ, ಬಿ. ಮಾರೆಣ್ಣ, ತಮ್ಮನ್ನಳಪ್ಪ, ಸಣ್ಣಮಾರೆಪ್ಪ, ಎಚ್. ಮಹೇಶ್, ಕೊಟಗಿನಾಳ ಮಲ್ಲಿಕಾರ್ಜುನ, ಸಂಗಪ್ಪ, ಯರಿಸ್ವಾಮಿ, ಮರಡಿ ಮಂಜುನಾಥ, ಬಾಣದ ಗಣೇಶ, ಜೆ. ಶಿವಕುಮಾರ, ದೇವರಮನೆ ಕನ್ನೇಶ್ವರ, ಚಾಂದ್, ತಾಯಪ್ಪ, ಧನ್‌ರಾಜ್, ಗೋಪಾಲಕೃಷ್ಣ, ಸದ್ದಾಂ ಹುಸೇನ್, ಬಾಷಾ, ಪೀರಾಸಾಬ್, ಖಾಜಾ ಹುಸೇನ್, ಪರಶುರಾಮ, ನಾಗರಾಜ್, ಶೇಖರ್, ಸಣ್ಣ ಈರಣ್ಣ, ಯೋಗಲಕ್ಸ್ಮಿ, ಕವಿತಾ, ತಾರಾ, ವರಲಕ್ಷ್ಮಿ, ರಾಧಾ ಮತ್ತಿತರರಿದ್ದರು.