ಸಾರಾಂಶ
ಅಬ್ಬನ ಗ್ರಾಮದಲ್ಲಿ ಸ. ನಂ. 79ರಲ್ಲಿ ನಕಾಶೆ ದಾರಿ ಇದೆ. ಸುಮಾರು 50 ದಲಿತ ಕುಟುಂಬಗಳು ತಿರುಗಾಡುವ ರಸ್ತೆ ಇದಾಗಿದೆ. ಆದರೆ ಇತ್ತೀಚೆಗೆ ರಸ್ತೆಯನ್ನು ಅಡ್ಡಗಟ್ಟಿ ಸೋಲಾರ್ ಬೇಲಿ ಹಾಕಿದ್ದಾರೆ. ಸೋಲಾರ್ ಬೇಲಿಯಲ್ಲಿ ವಿದ್ಯುತ್ ಪ್ರಸರಿಸುವುದರಿಂದ ತಿರುಗಾಡಲು ಭಯದ ವಾತಾವರಣ ನಿರ್ಮಾಣವಾಗಿದೆ. ತಹಸೀಲ್ದಾರ್, ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿದ್ದರೂ ನಕಾಶೆ ದಾರಿ ಬಿಡಿಸಿಲ್ಲ. ಕೂಡಲೆ ಬಿಡಿಸಿಕೊಡಬೇಕು. ಇಲ್ಲದಿದ್ದರೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನೂ ಭೇಟಿ ಮಾಡುತ್ತೇವೆ ಎಂದರು.
ಕನ್ನಡಪ್ರಭ ವಾರ್ತೆ ಆಲೂರು
ಅಬ್ಬನ ಗ್ರಾಮದಲ್ಲಿ ಸರ್ವೆ ನಂಬರ್ 79ರಲ್ಲಿ ನಕಾಶೆ ದಾರಿಯನ್ನು ಬಿಡಿಸಿಕೊಡಬೇಕೆಂದು ಗ್ರಾಮದ ಮಹಿಳೆಯರು ತಹಸೀಲ್ದಾರ್ ನಂದಕುಮಾರ್ ಅವರನ್ನು ಒತ್ತಾಯಿಸಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಹಸೀಲ್ದಾರ್ ರವರನ್ನು ಭೇಟಿ ಮಾಡಿದ ಅಬ್ಬನ ಗ್ರಾಮಸ್ಥರು, ಸ. ನಂ. 79ರಲ್ಲಿ ನಕಾಶೆ ದಾರಿ ಇದೆ. ಸುಮಾರು 50 ದಲಿತ ಕುಟುಂಬಗಳು ತಿರುಗಾಡುವ ರಸ್ತೆ ಇದಾಗಿದೆ. ಆದರೆ ಇತ್ತೀಚೆಗೆ ರಸ್ತೆಯನ್ನು ಅಡ್ಡಗಟ್ಟಿ ಸೋಲಾರ್ ಬೇಲಿ ಹಾಕಿದ್ದಾರೆ. ಸೋಲಾರ್ ಬೇಲಿಯಲ್ಲಿ ವಿದ್ಯುತ್ ಪ್ರಸರಿಸುವುದರಿಂದ ತಿರುಗಾಡಲು ಭಯದ ವಾತಾವರಣ ನಿರ್ಮಾಣವಾಗಿದೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲಾಗಿತ್ತು. ತಹಸೀಲ್ದಾರ್, ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿದ್ದರೂ ನಕಾಶೆ ದಾರಿ ಬಿಡಿಸಿಲ್ಲ. ಕೂಡಲೆ ಬಿಡಿಸಿಕೊಡಬೇಕು. ಇಲ್ಲದಿದ್ದರೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನೂ ಭೇಟಿ ಮಾಡುತ್ತೇವೆ ಎಂದರು.ಗ್ರಾಮದ ಮಹಿಳೆಯರಾದ ನಂದಿನಿ, ಚೈತ್ರ, ರಂಜಿತ, ರಾಧ, ವಿನುತ, ಮಲ್ಲಿಗಮ್ಮ ರವರು ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.ಎರಡು ದಿನಗಳಲ್ಲಿ ನಕಾಶೆ ದಾರಿ ಬಿಡಿಸಿಕೊಡುವುದಾಗಿ ತಹಸೀಲ್ದಾರ್ ನಂದಕುಮಾರ್ ಮಹಿಳೆಯರಿಗೆ ಭರವಸೆ ನೀಡಿದರು.