ಸಾರಾಂಶ
ಇಂಡಿಗನತ್ತ ಗ್ರಾಮದ ಗಲಭೆ ಪ್ರಕರಣದ ಸಂಕಷ್ಟದಿಂದ ಪಾರು ಮಾಡುವಂತೆ ಮಾದಪ್ಪನಿಗೆ ಹರಕೆ ಕಟ್ಟಿಕೊಂಡಿದ್ದ ಜನರು ಚಿನ್ನದ ತೇರು ಉತ್ಸವ ನಡೆಸಿ ವಿಶೇಷ ಪೂಜೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಹನೂರು
ಇಂಡಿಗನತ್ತ ಗ್ರಾಮದ ಗಲಭೆ ಪ್ರಕರಣದ ಸಂಕಷ್ಟದಿಂದ ಪಾರು ಮಾಡುವಂತೆ ಮಾದಪ್ಪನಿಗೆ ಹರಕೆ ಕಟ್ಟಿಕೊಂಡಿದ್ದ ಜನರು ಚಿನ್ನದ ತೇರು ಉತ್ಸವ ನಡೆಸಿ ವಿಶೇಷ ಪೂಜೆ ಸಲ್ಲಿಸಿದರು.ತಾಲೂಕಿನ ಮಲೆ ಮಾದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿ ಯ ಇಂಡಿಗನತ್ತ ಗ್ರಾಮದ ಮಹಿಳೆಯರು ಮಕ್ಕಳಿಂದ ಮಾದೇಶ್ವರ ಬೆಟ್ಟದಲ್ಲಿ ಚಿನ್ನದ ತೇರು ಉತ್ಸವ ಹಮ್ಮಿಕೊಳ್ಳುವ ಮೂಲಕ ಇಂಡಿಗನತ್ತ ಗ್ರಾಮದ ಪ್ರಕರಣದಿಂದ ಮುಕ್ತಗೊಳಿಸುವಂತೆ ಮಾದಪ್ಪನಿಗೆ ಹರಕೆ ತೀರಿಸಿದರು.
ಏಪ್ರಿಲ್ 26ರ ಲೋಕಸಭಾ ಚುನಾವಣೆ ಮತದಾನ ವೇಳೆ ನಡೆದ ಗಲಭೆ ಪ್ರಕರಣದಿಂದ ಗ್ರಾಮದ 55 ಜನರ ಮೇಲೆ ಮೂರು ಪ್ರಕರಣಗಳು ದಾಖಲಾಗುವ ಮೂಲಕ ಜೈಲು ಪಾಲಾಗಿದ್ದ ಗ್ರಾಮಸ್ಥರು ಮಾದಪ್ಪನಿಗೆ ಜೈಲಿನಿಂದ ಬಿಡುಗಡೆಯಾದ ನಂತರ ಚಿನ್ನದ ತೇರು ಉತ್ಸವ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಸೋಮವಾರ ಸಂಜೆ ನಡೆದ ಮಲೆ ಮಾದೇಶ್ವರ ಬೆಟ್ಟದ ಚಿನ್ನದ ತೇರು ಉತ್ಸವ ಮಾಡುವ ಮೂಲಕ ಮಾದಪ್ಪನ ಹರಕೆ ತೀರಿಸಿದರು.ಮಲೆ ಮಾದೇಶ್ವರ ಬೆಟ್ಟದಲ್ಲಿ ಆಷಾಡ ಮಾಸದ ಪೂಜಾ ಕಾರ್ಯಕ್ರಮಗಳು ಇಂಡಿಗನತ್ತ ಗ್ರಾಮದ ಸರದಿ ಅರ್ಚಕರಿಂದ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದೆ. ಹೀಗಾಗಿ ಗ್ರಾಮದ ಜನತೆ ಚಿನ್ನದ ತೇರು ಉತ್ಸವ ಹಾಗೂ ಊರೊಟ್ಟಿನ ಸೇವೆ ಮೂಲಕ ಪ್ರಕರಣಗಳಿಂದ ಪಾರು ಮಾಡುವಂತೆ ಮಾದಪ್ಪನ ಹರಕೆ ತೀರಿಸಿ ಮಾದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.