ಸರ್ವ ಜನಾಂಗಕ್ಕೆ ನ್ಯಾಯ ನೀಡಿದ ಪುಣ್ಯಾತ್ಮ

| Published : Apr 15 2025, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಗರದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿನ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಗರದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿನ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ಕ್ರಾಂತಿಯ ಹರಿಕಾರ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನ ಸೂರ್ಯ ಚಂದ್ರರು ಇರುವವರೆಗೆ ಈ ದೇಶದ ಸಂವಿಧಾನವಾಗಿ ಉಳಿಯುತ್ತದೆ. ಯಾವುದೇ ಕಾಲಕ್ಕೂ ಸಂವಿಧಾನಕ್ಕೆ ಧಕ್ಕೆ ಆಗದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೇರಿದಂತೆ ನಮ್ಮ ನಾಯಕರು ನೋಡಿಕೊಳ್ಳುತ್ತಾರೆ ಎಂಬ ಅಚಲ ವಿಶ್ವಾಸವಿದೆ. ಅಂಬೇಡ್ಕರ ಜಯಂತಿ ಅಂದರೆ ನಮಗೆಲ್ಲ ಹಬ್ಬವಿದ್ದಂತೆ. ಏಕೆಂದರೆ ಎಲ್ಲ ಜನಾಂಗದವರಿಗೆ ನ್ಯಾಯ ಕೊಟ್ಟಿರುವ ಪುಣ್ಯಾತ್ಮರು ಅಂಬೇಡ್ಕರ್‌ ಎಂದು ಸ್ಮರಿಸಿದರು.

ಈ ವೇಳೆ ಮುಖಂಡರಾದ ಮಡಿವಾಳ ಯಾಳವಾರ, ದಾದಾಸಾಹೇಬ ಬಾಗಾಯತ, ವಿಠ್ಠಲ ನಡುವಿನಕೇರಿ, ಶಶಿಧರ ಅಥರ್ಗಾ, ಗುರು ಗಚ್ಚಿನಮಠ, ರಾಘವ ಅಣ್ಣಿಗೇರಿ, ಶಂಕರ ಹೂಗಾರ, ಪಾಂಡು ಸಾಹುಕಾರ ದೊಡಮನಿ, ಕಿರಣ ಪಾಟೀಲ, ರಾಜಶೇಖರ ಕುರಿಯವರ, ಜವಾಹರ ಗೋಸಾವಿ, ದತ್ತಾ ಗೊಲಂಡೆ, ಅಶೋಕ ಬೆಲ್ಲದ, ರಾಚು ಬಿರಾದಾರ, ಪ್ರವೀಣ ನಾಟೀಕಾರ, ಪ್ರವೀಣ ಕೂಡಗಿ, ರಾಜಲಕ್ಷ್ಮೀ ಪರ್ವತ್ತನವರ, ಲಕ್ಷ್ಮೀ ಕನ್ನೋಳ್ಳಿ, ಸುಚೀತಾ ಜಾಧವ, ರಾಜಶೇಖರ ಭಜಂತ್ರಿ, ನಾಗರಾಜ ಮುಳವಾಡ, ಸಿದ್ದನಗೌಡ ಬಿರಾದಾರ, ಬಸವರಾಜ ಗುರಣ್ಣವರ, ಬಸು ಲವಗಿ, ಬಸವರಾಜ ಬಿರಾದಾರ, ಮಹೇಂದ್ರ ಸುಣಗಾರ ಸೇರಿದಂತೆ ಮತ್ತಿತರರು ಇದ್ದರು.