ಸಾರಾಂಶ
ಕನ್ನಡಪ್ರಭ ವಾರ್ತೆ ಪಾಲಬಾವಿ
ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ಮತ್ತು ಯಾರು ಕಸಿದುಕೊಳ್ಳಲಾಗದ ಸಂಪತ್ತು ಅದುವೇ ಜ್ಞಾನದ ಸಂಪತ್ತು ಎಂದು ತಾಲೂಕು ಕಸಾಪ ಗೌರವಾಧ್ಯಕ್ಷ, ಸಾಹಿತಿ ಟಿ.ಎಸ್.ವಂಟಗೂಡಿ ಹೇಳಿದರು.ತಾಲೂಕಿನ ಮಂಟೂರ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 8ನೇ ವರ್ಗದ ಬೀಳ್ಕೊಡುವ ಸಮಾರಂಭದ ಮಂಟೂರ ಚಿನ್ನರ ಸಂಭ್ರಮ-2025 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾವು ಶಿಕ್ಷಕ, ಸೈನಿಕ, ಕೃಷಿಕನನ್ನು ಗೌರವಿಸಬೇಕು. ಪಾಲಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಬೇಕು ಎಂದು ಸಲಹೆ ನೀಡಿದರು.ವಾರ್ಷಿಕ ಸ್ನೇಹ ಸಮ್ಮೇಳನದ ಪ್ರಯುಕ್ತ ಏರ್ಪಡಿಸಿಲಾದ ವಾರ್ಷಿಕ ಕ್ರೀಡಾಕೂಟದಲ್ಲಿ ಭಾವಹಿಸಿ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಮತ್ತು ಪದಕಗಳನ್ನು ನೀಡಿ ಗೌರವಿಸಿದರು. ರಾಯಬಾಗ ತಾಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಶಿಕ್ಷಕ ಬಿ.ಎಲ್.ಘಂಟಿ ಮಾತನಾಡಿದರು. ಸಂಜೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಪ್ರದಾನ ಗುರು ಆರ್.ಕೆ.ಲಮಾಣಿ, ಎಸ್‌ಡಿಎಂಸಿ ಅಧ್ಯಕ್ಷ ರಾಮಚಂದ್ರ ಉಪ್ಪಾರ, ಉಪಾಧ್ಯಕ್ಷೆ ಗೀತಾ ಸೊರಗಾವಿ, ಮಾಜಿ ಅಧ್ಯಕ್ಷ ಮಹಾಲಿಂಗಯ್ಯ ಹಿರೇಮಠ, ಗ್ರಾಪಂ ಅಧ್ಯಕ್ಷೆ ಶೋಭಾ ಮೆಗಾಡೆ, ಸಿಆರ್‌ಪಿ ಮೋಹನ ರಾಜಮಾನೆ ಹಾಗೂ ಎಸ್‌ಡಿಎಂಸಿ ಸದಸ್ಯರು, ಗ್ರಾಪಂ ಸದಸ್ಯರು, ಶಾಲೆಯ ಸಿಬ್ಬಂದಿ, ಗ್ರಾಮದ ಗುರು -ಹಿರಿಯರು, ಮಕ್ಕಳ ಉಪಸ್ಥಿತರಿದ್ದರು. ಶಿಕ್ಷಕ ಆನಂದಪ್ಪ ಸ್ವಾಗತಿಸಿದರು. ಶಿಕ್ಷಕಿ ಅಶ್ವಿನಿ ಇಮಗೌಡರ, ಆರತಿ ಕೆಳಗಡೆ ನಿರೂಪಿಸಿದರು. ಶಿಕ್ಷಕಿ ಶಿಕ್ಷಕಿ ವಂದನಾ ಚವ್ಹಾಣ ಹಾಗೂ ಬಸವರಾಜ ಮುನ್ಯಾಳ ಪರಿಚಯಿಸಿದರು. ಫಾತಿಮಾ ಆಸಂಗಿ ವಂದಿಸಿದರು.