ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ ೧೨ನೇ ಶತಮಾನದಲ್ಲಿ ಅಕ್ಕಮಹಾದೇವಿ ಮಹಿಳೆಯರ ಸ್ಥಾನಮಾನಗಳ ಕುರಿತು ಹಾಗೂ ಆಧ್ಯಾತ್ಮದ ಚಿಂತನೆ ಕುರಿತು ತಿಳುವಳಿಕೆ ನೀಡಿದ್ದರೂ ಸಾವಿತ್ರಿಬಾಯಿ ಫುಲೆ ಅಂತವರು ಮಹಿಳೆಯರ ಶ್ರೇಯೋಭಿವೃದ್ದಿಗಾಗಿ ಶ್ರಮಿಸಿದ್ದು, ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ದುಡಿದು ತೋರಿಸಿದ ಅಸಂಖ್ಯಾತ ಮಹಿಳೆಯರು ನಮ್ಮ ರಾಜ್ಯದಲ್ಲಿಯೂ ಇದ್ದಾರೆ ಎಂದು ಕುಂಟೋಜಿಯ ಭಾವೈಕ್ಯತಾ ಮಠದ ಶ್ರೀಗುರು ಚನ್ನವೀರ ಶೀವಾಚಾರ್ಯರು ನುಡಿದರು.
ಕನ್ನಡಪ್ರಭ ವಾರ್ತೆ ತಾಳಿಕೋಟೆ
೧೨ನೇ ಶತಮಾನದಲ್ಲಿ ಅಕ್ಕಮಹಾದೇವಿ ಮಹಿಳೆಯರ ಸ್ಥಾನಮಾನಗಳ ಕುರಿತು ಹಾಗೂ ಆಧ್ಯಾತ್ಮದ ಚಿಂತನೆ ಕುರಿತು ತಿಳುವಳಿಕೆ ನೀಡಿದ್ದರೂ ಸಾವಿತ್ರಿಬಾಯಿ ಫುಲೆ ಅಂತವರು ಮಹಿಳೆಯರ ಶ್ರೇಯೋಭಿವೃದ್ದಿಗಾಗಿ ಶ್ರಮಿಸಿದ್ದು, ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ದುಡಿದು ತೋರಿಸಿದ ಅಸಂಖ್ಯಾತ ಮಹಿಳೆಯರು ನಮ್ಮ ರಾಜ್ಯದಲ್ಲಿಯೂ ಇದ್ದಾರೆ ಎಂದು ಕುಂಟೋಜಿಯ ಭಾವೈಕ್ಯತಾ ಮಠದ ಶ್ರೀಗುರು ಚನ್ನವೀರ ಶೀವಾಚಾರ್ಯರು ನುಡಿದರು. ಯುವಸಿರಿ ಸೌಹಾರ್ದ ಸಹಕಾರಿ ಸಂಘದ ತಾಳಿಕೋಟೆ ಪಟ್ಟಣ ಶಾಖೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಹೆಣ್ಣು ಹುಣ್ಣಲ್ಲ ಹೆಣ್ಣು ಸಾಕ್ಷಾತ್ ಮಲ್ಲಿಕಾರ್ಜುನ ಎಂಬಂತೆ ಹೆಣ್ಣಿನ ತೊಟ್ಟಿಲ ತೂಗುವ ಕೈ ಜಗತ್ತನ್ನೇ ತೂಗುತ್ತಾಳೆ. ಅಂತಹ ಭಾವನೆ ಹೊಂದಿದ ಮಹಿಳೆಯರ ಆಡಳಿತ ಮಂಡಳಿಯನ್ನು ರಚಿಸುವದರೊಂದಿಗೆ ತಾಳಿಕೋಟೆ ಯುವಸಿರಿ ಸೌಹಾರ್ದ ಘನತೆ ಗೌರವಕ್ಕೆ ಮುನ್ನಡೆ ಹಾಡಿದೆ. ಮಹಿಳೆಯರಾದರೂ ಇಂದಿನ ದಿನಮಾನದಲ್ಲಿ ಸ್ವಂತ ಉದ್ಯೋಗ ಸ್ಥಾಪನೆಗೆ ಮುಂದಾಗಬೇಕು. ಕೈಗಾರಿಕೆಯಾಗಲಿ ಹೈನುಗಾರಿಕೆಯಾಗಲಿ ಕೃಷಿ ವ್ಯವಸ್ಥೆಗೆ ಪಾಲ್ಗೊಂಡು ಸಬಲೀಕರಣವಾದರೆ ಮುಂದೆ ಬರಲು ಸಾಧ್ಯವೆಂದರು. ಯರನಾಳದ ಕೇಂದ್ರ ಕಚೇರಿಯ ಅಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ ಯುವಸಿರಿ ಸೌಹಾರ್ದ ಸಹಕಾರಿ ಕೇಂದ್ರ ಕಚೇರಿ ಈಗಾಗಲೇ ೬-೭ ಶಾಖೆಗಳು ಪ್ರಾರಂಭಗೊಂಡಿವೆ. ಒಟ್ಟು ೨೬ ಜನಕ್ಕೆ ೭ ಶಾಖೆಗಳೊಳಗೊಂಡು ಉದ್ಯೋಗಿಗಳಿದ್ದಾರೆ. ತಾಳಿಕೋಟೆ ಶಾಖೆಯಲ್ಲಿ ಮಹಿಳಾ ಆಡಳಿತ ಮಂಡಳಿ ಹೊಂದಿದ್ದಾರೆ. ಈ ಶಾಖೆಯಲ್ಲಿ ಎರಡೂವರೆ ಕೋಟಿ ಠೇವಣಿಯೊಂದಿಗೆ ಶಾಖೆ ಮುನ್ನಡೆದಿದೆ. ಈ ಹಿಂದೆ ನಾನು ವ್ಯವಸ್ಥೆಯಲ್ಲಿ ಸೇವಾ ಕಾರ್ಯಕ್ಕೆ ಮುಂದಾಗಿದ್ದೆ. ಆದರೆ ದೂರದ ಅಲ್ಲಲ್ಲಿ ಸೇವೆ ಮಾಡುವದನ್ನು ಅರಿತ ಮಾತಾಪಿತರಿಗೆ ಸರಿ ಎನಿಸಲಿಲ್ಲ. ರಾಜೀನಾಮೆ ನೀಡಲು ತಿಳಿಹೇಳಿದ್ದರಿಂದ ನಾನು ಸ್ವಯಂ ಉದ್ಯೋಗಕ್ಕೆ ದಾಪುಗಾಲು ಹಾಕಬೇಕೆಂಬ ಉದ್ದೇಶದಿಂದ ಮುನ್ನಡೆದೆ. ನನ್ನನ್ನು ಅರಿತ ತಾಳಿಕೋಟೆಯ ಜನತೆ ಸಹಕಾರ ಭಾವನೆ ಮೆಚ್ಚುವಂತದ್ದು ಎಂದರು.ಮುರುಘೇಶ ವಿರಕ್ತಮಠ, ಸಂಘದ ಸಂಸ್ಥಾಪಕ ಸೂರಜ್ ಪಾಟೀಲ, ಪತ್ರಕರ್ತ ಜಿ.ಟಿ ಘೋರ್ಪಡೆ, ತಾಳಿಕೋಟೆ ಯುವಸಿರಿ ಸೌಹಾರ್ದ ಶಾಖೆಯ ಆಡಳಿತ ಮಂಡಳಿ ಅಧ್ಯಕ್ಷೆ ವಿಜಯಲಕ್ಷ್ಮೀ ಹಿರೇಮಠ, ಉಪಾದ್ಯಕ್ಷೆ ರೇಣುಕಾ ಚಿಂಚೋಳಿ, ಸದಸ್ಯರಾದ ಮಾಲಾಶ್ರೀ ಹೊಸಗೌಡರ, ಕಸ್ತೂರಿ ಹರವಾಳ, ಮಹಾದೇವಿ ಹಿರೇಮಠ, ಚಂದ್ರಬಾಗಾ ಶೇವಳಕರ, ಗಿರಿಜಾ ಮೊಹಿತೆ, ಶಾರದಾ ಕಸಬೇಗೌಡರ, ನೀಲಮ್ಮ ಮದ್ದರಕಿ, ಮೀನಾಕ್ಷಿ ಪಾಟೀಲ, ಪುಷ್ಪಾ ಶೇವಳಕರ ಹಾಗೂ ಶಾಖಾ ವ್ಯವಸ್ಥಾಪಕ ನಾಗರಾಜ ಮದ್ದರಕಿ ಇತರರು ಇದ್ದರು.ಭರತನಾಟ್ಯ ಪ್ರದರ್ಶಿಸಿದ ಅಪೂರ್ವ ಡೋಣೂರಮಠ ಹಾಗೂ ಸಂಗೀತ ಸೇವೆ ಸಲ್ಲಿಸಿದ ದಿಲಿಶಾ ಹಾಗೂ ಗ್ರಾಹಕರಿಗೂ ಸನ್ಮಾನಿಸಿ ಗೌರವಿಸಲಾಯಿತು. ಅಮರೇಶ ಇಂಗಳಗಿ ಪ್ರಾರ್ಥಿಸಿದರು. ಶಿಕ್ಷಕ ಆರ್.ಎಸ್.ವಾಲೀಕಾರ ಹಾಗೂ ಮಹಾಂತೇಶ ಮುರಾಳ ನಿರೂಪಿಸಿ, ವಂದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))