ಅಕ್ಕಮಹಾದೇವಿ ರಥ ಎಳೆದು ಸಂಭ್ರಮಿಸಿದ ಮಹಿಳೆಯರು

| Published : Mar 22 2024, 01:02 AM IST

ಅಕ್ಕಮಹಾದೇವಿ ರಥ ಎಳೆದು ಸಂಭ್ರಮಿಸಿದ ಮಹಿಳೆಯರು
Share this Article
  • FB
  • TW
  • Linkdin
  • Email

ಸಾರಾಂಶ

ಊರೂರಿನಲ್ಲಿ ಜಾತ್ರೆ ರಥೋತ್ಸವಗಳು ನಡೆಯುತ್ತಲೇ ಇವೆ. ಆದರೆ ಹಾನಗಲ್ಲ ತಾಲೂಕಿನ ಸಾಂವಸಗಿ ಗ್ರಾಮದಲ್ಲಿ ಶತಮಾನಗಳಿಂದ ಮಹಿಳೆಯರೇ ರಥವನ್ನು ಎಳೆದು ಸಂಭ್ರಮಿಸುವ ಒಂದು ವಿಷೇಷ ಹಬ್ಬ ನಡೆಯುತ್ತಿದ್ದು, ಬುಧವಾರ ಸಂಜೆ ಸಾಂವಸಗಿಯಲ್ಲಿ ಮಹಿಳೆಯರೇ ಈ ಅಕ್ಕಮಹಾದೇವಿ ರಥವನ್ನು ಎಳೆದು ಭಕ್ತಿ ಶ್ರದ್ಧೆ ಮೆರೆದರು.

ಹಾನಗಲ್ಲ: ಊರೂರಿನಲ್ಲಿ ಜಾತ್ರೆ ರಥೋತ್ಸವಗಳು ನಡೆಯುತ್ತಲೇ ಇವೆ. ಆದರೆ ಹಾನಗಲ್ಲ ತಾಲೂಕಿನ ಸಾಂವಸಗಿ ಗ್ರಾಮದಲ್ಲಿ ಶತಮಾನಗಳಿಂದ ಮಹಿಳೆಯರೇ ರಥವನ್ನು ಎಳೆದು ಸಂಭ್ರಮಿಸುವ ಒಂದು ವಿಷೇಷ ಹಬ್ಬ ನಡೆಯುತ್ತಿದ್ದು, ಬುಧವಾರ ಸಂಜೆ ಸಾಂವಸಗಿಯಲ್ಲಿ ಮಹಿಳೆಯರೇ ಈ ಅಕ್ಕಮಹಾದೇವಿ ರಥವನ್ನು ಎಳೆದು ಭಕ್ತಿ ಶ್ರದ್ಧೆ ಮೆರೆದರು.೫ ವರ್ಷಗಳಾಚೆ ಮೊದಲಿನ ರಥ ತೀರ ಹಳೆಯದ್ದಾಗಿದ್ದರಿಂದ, ಮಹಿಳೆಯರೇ ಹೆಚ್ಚು ಪಾಲಿನ ದೇಣಿಗೆ ನೀಡಿ ಹೊಸ ರಥವನ್ನು ರಚಿಸಿದ್ದಾರೆ. ಅಲ್ಲದೆ ಈ ರಥವನ್ನು ಎಳೆಯುವಲ್ಲಿ ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಯಾವುದೇ ಜಾತಿ ಧರ್ಮ ಭೇದವಿಲ್ಲದೆ ಎಲ್ಲರೂ ಕೂಡಿ ಎಳೆಯುವ ಈ ರಥೋತ್ಸವ ಅತ್ಯಂತ ವಿಶೇಷ. ಅಲ್ಲದೆ ಮಹಿಳೆಯರು ಮಾತ್ರ ಎಳೆಯುವ ಈ ತೇರು ರಾಜ್ಯದಲ್ಲಿಯೇ ಅತ್ಯಂತ ವಿಶೇಷ.ಉದ್ಭವ ಕಲ್ಯಾಣ ಬಸವೇಶ್ವರ ಜಾತ್ರಾ ಮಹೋತ್ಸವ

ಹಿರೇಕೆರೂರು ತಾಲೂಕಿನ ಚಿಕ್ಕಬೂದಿಹಾಳ ಗ್ರಾಮದ ಉದ್ಭವ ಕಲ್ಯಾಣ ಬಸವೇಶ್ವರ ದೇವರ ಜಾತ್ರಾ ಮಹೋತ್ಸವ ಗುರುವಾರ ಆರಂಭವಾಗಿದ್ದು, ೨೪ ರ ವರಗೆ ನಡೆಯಲಿದೆ. ೨೨ರಂದು ಬೆಳಗ್ಗೆ ೭ ಗಂಟೆಗೆ ನವಗ್ರಹ ಮುರ್ತಿಗಳಿಗೆ ಅಭಿಷೇಕ, ಮಂಗಳಾರತಿ ನಡೆಯಲಿದೆ. ೨೩ರಂದು ಬೆಳಗ್ಗೆ ೬.೫೫ಕ್ಕೆ ಚೌಡೇಶ್ವರಿ ದೇವಿಗೆ ಪಂಚಾಮೃತ ಅಭಿಷೇಕ, ಉಡಿ ತುಂಬುವುದು ಹಾಗೂ ದೇವರ ಪುಷ್ಪ ರಥೋತ್ಸವ ಜರುಗಲಿದೆ. ೨೪ರಂದು ಬೆಳಗ್ಗೆ ೫ ಗಂಟೆಗೆ ಅಭಿಷೇಕ ಮಹಾಮಂಗಳಾರತಿ ನಂತರ ಲಿಂ. ಬಸವಯ್ಯನವರ ಹಿರೇಮಠ ಅವರ ಮನೆಯಿಂದ ತಾಲೂಕಿನ ಹಿರೇಮತ್ತೂರ ಗ್ರಾಮದ ವೀರಭದ್ರಾಚಾರ, ಮನೋಹರಚಾರ್, ಸಂಗಡಿಗರಿಂದ ಪುರವಂತಿಕೆಯೊಂದಿಗೆ ಗುಗ್ಗುಳ ಮಹೋತ್ಸವ ಆರಂಭಗೊಳ್ಳಲಿದೆ. ಗ್ರಾಮದ ಪ್ರಮುಖ ಬೀದಿಗಳ ಮೂಲಕ ದೇವಸ್ಥಾನದ ಆವರಣ ತಲುಪಿ ಸಂಪನ್ನಗೊಳಲ್ಲಿದೆ. ನಂತರ ದೇವರ ದೊಡ್ಡ ರಥೋತ್ಸವ ಹಾಗೂ ಅನ್ನ ಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯ ನಡೆಯಲಿವೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ.