ದೇವರ ದಾಸಿಮಯ್ಯ ವಚನಗಳು ಇಂದಿಗೂ ಪ್ರಸ್ತುತ

| Published : Apr 05 2025, 12:45 AM IST

ಸಾರಾಂಶ

ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ ವಚನದಲ್ಲಿ ಬದುಕಿನ ಮೌಲ್ಯಗಳಿವೆ. ಸದಾ ಕಾಯಕದಲ್ಲಿಯೇ ನಿರತರಾಗಿದ್ದ ಅವರ ವಚನಗಳಲ್ಲಿ, ಕಾಯಕದ ಮಹತ್ವ ಅಡಗಿದೆ.

ದೊಡ್ಡಬಳ್ಳಾಪುರ: ಇಲ್ಲಿನ ಕುಚ್ಚಪ್ಪನಪೇಟೆಯಲ್ಲಿ ದೇವರ ದಾಸಿಮಯ್ಯ ಸೇವಾ ಸಮಿತಿ ವತಿಯಿಂದ ದೇವರ ದಾಸಿಮಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಕೆ ಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ದೇವರ ದಾಸಿಮಯ್ಯ ಅವರ ಬದುಕು ಹಾಗೂ ಸಾಹಿತ್ಯ ಕುರಿತು ತಾಲೂಕು ಕಸಾಪ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ ಮಾತನಾಡಿ, ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ ವಚನದಲ್ಲಿ ಬದುಕಿನ ಮೌಲ್ಯಗಳಿವೆ. ಸದಾ ಕಾಯಕದಲ್ಲಿಯೇ ನಿರತರಾಗಿದ್ದ ಅವರ ವಚನಗಳಲ್ಲಿ, ಕಾಯಕದ ಮಹತ್ವ ಅಡಗಿದ್ದು, ಅವರ ವಚನಗಳು ಹಲವಾರು ವಚನಕಾರರಿಗೆ ತತ್ವಜ್ಞಾನಿಗಳಿಗೆ ಸ್ಪೂರ್ತಿಯಾಗಿದೆ ಎಂದರು.

ನಗರಸಭಾ ಸದಸ್ಯೆ ಎಸ್.ವತ್ಸಲಾ, ಮಾಜಿ ಸದಸ್ಯ ಪಿ.ಸಿ.ಲಕ್ಷ್ಮೀನಾರಾಯಣ್, ಟಿ.ಎಂ.ಸಿ. ಬ್ಯಾಂಕ್ ಅಧ್ಯಕ್ಷ ಕೆ.ಪಿ.ವಾಸುದೇವ್, ದೇವಾಂಗ ಮಂಡಲಿಯ ಗೌರವ ಕಾರ್ಯದರ್ಶಿ ಎಂ.ಜಿ.ಅಮರನಾಥ್, ಯಕ್ಷಗಾನ ಕಲಾವಿದ ಕೆ.ಸಿ.ನಾರಾಯಣ್, ಎಂ.ಎ.ಬಿ.ಎಲ್ ವಿದ್ಯಾಸಂಸ್ಥೆಯ ಸಿಇಓ ಪ್ರಿಯಾಂಕ, ದಾಸಿಮಯ್ಯ ಸೇವಾ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.3ಕೆಡಿಬಿಪಿ2- ದೊಡ್ಡಬಳ್ಳಾಪುರದ ಕುಚ್ಚಪ್ಪನಪೇಟೆಯಲ್ಲಿ ದೇವರ ದಾಸಿಮಯ್ಯ ಜಯಂತಿ ನಡೆಯಿತು.