ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ

| Published : Nov 07 2024, 12:00 AM IST

ಸಾರಾಂಶ

ಪಟ್ಟಣದ ಸ್ವಚ್ಛತೆ ಕಾರ್ಯದೊಂದಿಗೆ ಜನರ ಆರೋಗ್ಯ ಜತೆಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಪಪಂ ಅಧ್ಯಕ್ಷ ಅನಿತಾ ಪೌರಕಾರ್ಮಿಕರಿಗೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆಪಟ್ಟಣದ ಸ್ವಚ್ಛತೆ ಕಾರ್ಯದೊಂದಿಗೆ ಜನರ ಆರೋಗ್ಯ ಜತೆಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಪಪಂ ಅಧ್ಯಕ್ಷ ಅನಿತಾ ಪೌರಕಾರ್ಮಿಕರಿಗೆ ಸಲಹೆ ನೀಡಿದರು. ಪಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಪೌರಕಾರ್ಮಿರ ಅವಿರತ ಶ್ರಮವೇ ಪಟ್ಟಣದ ಸ್ವಚ್ಛತೆಗೆ ಕಾರಣವಾಗಿದೆ. ಪೌರಕಾರ್ಮಿಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.ಪಪಂ ಮುಖ್ಯಾಧಿಕಾರಿ ಉಮೇಶ್ ಮಾತನಾಡಿ, ಸೈನಿಕರು ದೇಶ ರಕ್ಷಣೆ ಮಾಡಿದರೆ ಪೌರಕಾರ್ಮಿಕರು ಬಿಸಿಲು, ಮಳೆ, ಗಾಳಿ, ಚಳಿ ಯಾವುದನ್ನು ಲೆಕ್ಕಿಸದೆ ಮುಂಜಾನೆ 5 ಗಂಟೆಯಿಂದ ಮಾಡುತ್ತಿರುವ ಕಾಯಕದಿಂದಲೇ ಪಟ್ಟಣದ ನಾಗರೀಕರು ಆರೋಗ್ಯದಿಂದ ಇರಲು ಸಾಧ್ಯ ಎಂದರು.ಸದಸ್ಯ ಕೆ,ಆರ್.ಓಬಳರಾಜು ಮಾತನಾಡಿ, ಪೌರಕಾರ್ಮಿಕರು ದುಶ್ಚಟಗಳಿಂದ ದೂರವಿದ್ದು ಆರೋಗ್ಯದತ್ತ ಹೆಚ್ಚು ಗಮನಹರಿಸಬೇಕು ಎಂದರು. ಪ.ಪಂ ಉಪಾಧ್ಯಕ್ಷೆಉಸ್ಮಾಪಾರಿಯಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ, ಮಾಜಿಅಧ್ಯಕ್ಷೆಕಾವ್ಯರಮೇಶ್, ಸದಸ್ಯರುಗಳಾದ ನಟರಾಜು, ನಂದೀಶ್, ನಾಗರಾಜು, ಭಾರತಿಸಿದ್ದಮಲ್ಲಪ್ಪ, ಪುಟ್ಟನರಸಪ್ಪ, ಕೆ.ಎನ್.ಲಕ್ಷ್ಮೀನಾರಾಯಣ್, ಪ್ರದೀಪ್‌ಕುಮಾರ್, ಎಂ.ಜಿ.ಸುಧೀರ್, ಮಂಜುಳಾ ಗೋವಿಂದರಾಜು, ಪೈಯಾಜ್‌ಅಹಮದ್, ಎ.ಬಿ.ಸುನಿಲ್, ಪೌರಕಾರ್ಮಿಕ ಸಂಘದಅಧ್ಯಕ್ಷ ನರಸಿಂಹಮೂರ್ತಿ, ಆರೋಗ್ಯ ನಿರೀಕ್ಷಕ ಮಹಮದ್‌ಹುಸೇನ್, ವೇಣುಗೋಪಾಲ್, ನಾಗರತ್ನಮ್ಮ, ಶೈಲೇಂದ್ರ ಉಪಸ್ಥಿತರಿದ್ದರು.