ಪೌರಕಾರ್ಮಿಕರ ಕೆಲಸ ಶ್ರೇಷ್ಟವಾದುದು: ಜಯಸುಧಾ

| Published : Sep 24 2025, 01:01 AM IST

ಪೌರಕಾರ್ಮಿಕರ ಕೆಲಸ ಶ್ರೇಷ್ಟವಾದುದು: ಜಯಸುಧಾ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣ ಸುಂದರವಾಗಿಡುವುದರಲ್ಲಿ ಪೌರ ಕಾರ್ಮಿಕರ ಪಾತ್ರ ಬಹುಮುಖ್ಯವಾಗಿರುತ್ತದೆ. ಮನೆಯನ್ನು ಸ್ವಚ್ಛಂಧವಾಗಿಟ್ಟುಕೊಳ್ಳಲು ಹೆಣ್ಣು ಮಕ್ಕಳು ಎಷ್ಟು ಮುಖ್ಯವೊ ಹಾಗೆಯೇ ಊರಿಗೆ ಪೌರ ಕಾರ್ಮಿಕರು ಕೂಡ ಅಷ್ಟೆ ಮುಖ್ಯವಾಗಿರುತ್ತಾರೆ.

ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಸಮಾರಂಭದಲ್ಲಿ ಪಪಂ ಅಧ್ಯಕ್ಷೆ

ಕನ್ನಡಪ್ರಭ ವಾರ್ತೆ ಮುಂಡಗೋಡ

ಪಟ್ಟಣ ಸುಂದರವಾಗಿಡುವುದರಲ್ಲಿ ಪೌರ ಕಾರ್ಮಿಕರ ಪಾತ್ರ ಬಹುಮುಖ್ಯವಾಗಿರುತ್ತದೆ. ಮನೆಯನ್ನು ಸ್ವಚ್ಛಂಧವಾಗಿಟ್ಟುಕೊಳ್ಳಲು ಹೆಣ್ಣು ಮಕ್ಕಳು ಎಷ್ಟು ಮುಖ್ಯವೊ ಹಾಗೆಯೇ ಊರಿಗೆ ಪೌರ ಕಾರ್ಮಿಕರು ಕೂಡ ಅಷ್ಟೆ ಮುಖ್ಯವಾಗಿರುತ್ತಾರೆ ಎಂದು ಪಪಂ ಅಧ್ಯಕ್ಷೆ ಜಯಸುಧಾ ಬೋವಿ ಹೇಳಿದರು.

ಮಂಗಳವಾರ ಇಲ್ಲಿಯ ನಗರಸಭಾ ಸಭಾಭವನದಲ್ಲಿ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಸಮಾರಂಭದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಿ ಬಳಿಕ ಮಾತನಾಡಿದ ಅವರು, ಸಮಾಜದ ಸ್ವಚ್ಛತೆ ಹಾಗೂ ಸೌಂದರ್ಯಕ್ಕಾಗಿ ಶ್ರಮಿಸುವ ಪೌರ ಕಾರ್ಮಿಕರ ಕಾರ್ಯವನ್ನು ಗೌರವಿಸುವ ದಿನ ಇದಾಗಿದ್ದು, ಜಗತ್ತಿನಲ್ಲಿ ಅತಿ ಶ್ರೇಷ್ಟವಾದ ಕೆಲಸವನ್ನು ಪೌರಕಾರ್ಮಿಕರು ಮಾಡುತ್ತಾರೆ. ವರ್ಷಕ್ಕೊಂದು ಬಾರಿ ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಪಪಂ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಸುಬ್ಬಾಯವರ, ಮುಖ್ಯಾಧಿಕಾರಿ ಸಂತೋಷಕುಮಾರ ಹಾಲಕಲ್ಲಾಪುರ, ಪಪಂ ಸದಸ್ಯ ಶ್ರೀಕಾಂತ ಸಾನು, ವಿಶ್ವನಾಥ ಪವಾಡಶೆಟ್ಟರ, ರಜಾಖಾನ ಪಠಾಣ, ಮಹ್ಮದಜಾಫರ್ ಹಂಡಿ, ಬೀಬಿಜಾನ ಮುಲ್ಲಾನವರ, ಶಕುಂತಲಾ ನಾಯಕ, ಶೇಖರ ಲಮಾಣಿ, ಕೊಟಗುಣಸಿ, ಎಂಜಿನಿಯರ್ ಗಣೇಶ ಭಟ್, ಪ್ರದೀಪ ಹೆಗಡೆ, ಮಂಚಲಾ ಶೇಟ್ ಹಾಗೂ ವೈದ್ಯಾಧಿಕಾರಿ ಶ್ರೀದೇವಿ, ದಲಿತ ಮುಖಂಡ ರಾಘವೇಂದ್ರ ಟಪಾಲದವರ ಮುಂತಾದವರಿದ್ದರು. ಪ್ರದೀಪ ಹೆಗಡೆ ನಿರೂಪಿಸಿದರು.

ಈ ಸಂದರ್ಭ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಬಳಿಕ ಪೌರಕಾರ್ಮಿಕರಿಗೆ ಕ್ರಿಕೆಟ್ ಮುಂತಾದ ಕ್ರೀಡಾಕೂಟ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.