ಸಾರಾಂಶ
ಮದ್ಯ ಸೇವನೆ ಸಾಮಾಜಿಕ ಪಿಡುಗುಗಳಲ್ಲೊಂದು. ಅನೇಕರು ವ್ಯಸನಿಗಳಾಗಿ ಕುಟುಂಬಕ್ಕೆ ಸಮಸ್ಯೆಯಾಗಿ ಕಾಡುತ್ತಿದ್ದಾರೆ. ಕುಟುಂಬಕ್ಕೆ ಶಕ್ತಿಯಾಗುವ ಯಜಮಾನನೇ ದಾಸನಾದಲ್ಲಿ ಆ ಕುಟುಂಬ ಬೀದಿಗೆ ಬೀಳಲಿದೆ.
ಗಂಗಾವತಿ:
ಮಹಿಳೆಯರು ಸ್ವಾವಲಂಬಿಗಳಾಗಲು ಸಾಲ ಸೌಲಭ್ಯ, ದೇವಸ್ಥಾನ ಕಟ್ಟಡಗಳಿಗೆ ಧನ ಸಹಾಯ, ಶಾಲಾ ಮಕ್ಕಳಿಗೆ ಸ್ಕಾಲರ್ ಶಿಪ್ ಸೇರಿದಂತೆ ಆರೋಗ್ಯ ಸೇವೆ ಸೇರಿದಂತೆ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಧರ್ಮಸ್ಥಳ ಕ್ಷೇತ್ರದ ಸೇವಾ ಕಾರ್ಯ ಶ್ಲಾಘನೀಯ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಸಹಯೋಗದಲ್ಲಿ ವಡ್ಡರಹಟ್ಟಿ ಜಿವಿಎಸ್ ಗಾರ್ಡನ್‌ನಲ್ಲಿ 1971ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಮದ್ಯ ಸೇವನೆ ಸಾಮಾಜಿಕ ಪಿಡುಗುಗಳಲ್ಲೊಂದು. ಅನೇಕರು ವ್ಯಸನಿಗಳಾಗಿ ಕುಟುಂಬಕ್ಕೆ ಸಮಸ್ಯೆಯಾಗಿ ಕಾಡುತ್ತಿದ್ದಾರೆ. ಕುಟುಂಬಕ್ಕೆ ಶಕ್ತಿಯಾಗುವ ಯಜಮಾನನೇ ದಾಸನಾದಲ್ಲಿ ಆ ಕುಟುಂಬ ಬೀದಿಗೆ ಬೀಳಲಿದೆ. ಮನೆಯಲ್ಲಿ ಅನೇಕ ಸಮಸ್ಯೆಗಳು ತಲೆದೂರಲಿವೆ. ಧರ್ಮಸ್ಥಳ ಸಂಸ್ಥೆ ಇಂಥ ಅಮೂಲ್ಯ ಕೆಲಸ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.
ಮಾಜಿ ವಿಪ ಸದಸ್ಯರಾದ ಎಚ್.ಆರ್. ಶ್ರೀನಾಥ್ ಮಾತನಾಡಿ, ಧರ್ಮಸ್ಥಳ ಕ್ಷೇತ್ರಕ್ಕೆ ಅನೇಕರು ಅಪಚಾರ ತರಲು ಯತ್ನಿಸಿದರು. ಆದರೆ ಮಂಜುನಾಥ ಸ್ವಾಮಿ ಅವರಿಗೆ ತಕ್ಕ ಪಾಠಕಲಿಸಿರುವುದೆ ಸಾಕ್ಷಿಯಾಗಿದೆ ಎಂದು ಹೇಳಿದರು..ಮುದೇಗೌಡ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಯುವ ಪ್ರಮುಖರಾದ ನಟರಾಜ್ ಬಾದಾಮಿ, ನೀಲಕಂಠ ನಾಗಶೆಟ್ಟಿ, ಚನ್ನವೀರನಗೌಡ ಕೋರಿ, ಮಲ್ಲಿಕಾರ್ಜುನ ನೂಲ್ವಿ, ಭಾರತಿ ಕೃಷ್ಣ, ಗೋವರ್ಧನ್, ದೇವೇಂದ್ರಪ್ಪ, ನಾರಾಯಣಪ್ಪ, ನಾಗರತ್ನ, ಲಕ್ಷ್ಮೀ ಗಣೇಶ, ನಿಮಿಷಾಂಬ ಹಾಗೂ ಲಕ್ಷ್ಮಮ್ಮ ಇದ್ದರು.