ಹೊನ್ಕಲ್ ಸಾಹಿತ್ಯ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ: ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು

| Published : Dec 27 2023, 01:31 AM IST

ಹೊನ್ಕಲ್ ಸಾಹಿತ್ಯ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ: ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು
Share this Article
  • FB
  • TW
  • Linkdin
  • Email

ಸಾರಾಂಶ

ನಾಡಿನ ಐವರು ಲೇಖಕ-ಲೇಖಕಿಯರಿಗೆ ಹೊನ್ಕಲ್ ಸಾಹಿತ್ಯದ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ವಾರ್ತೆ ಶಹಾಪುರ

ಹೊನ್ಕಲ್ ಅವರು ಈ ಸಾಹಿತ್ಯ ಪ್ರತಿಷ್ಠಾನ ದ ಮೂಲಕ ಮಾಡುವ ಕೆಲಸ ಅತ್ಯಂತ ಅರ್ಥಪೂರ್ಣವಾಗಿದೆ. ಅವರು ತಾವು ಬೆಳೆಯುವದಲ್ಲದೇ ಒಂದು ತಲೆಮಾರನ್ನೆ ಸಾಹಿತ್ಯಿಕವಾಗಿ ಸಾಂಸ್ಕೃತಿಕವಾಗಿ ಬೆಳೆಸುತ್ತಿದ್ದಾರೆ. ಅವರಿಗೆ ಇಂತಹ ಕಾರ್ಯಮಾಡುವ ಚೈತನ್ಯ ಸದಾ ಸಿಗಲಿ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.

ನಗರದ ಕಲಬುರಗಿ ಟವರ್ ಸಭಾಂಗಣದಲ್ಲಿ ನಡೆದ ಐದು ಸಾಹಿತ್ಯ ಕೃತಿಗಳ ಲೋಕಾರ್ಪಣೆ ಮತ್ತು ಐವರು ಲೇಖಕ-ಲೇಖಕಿಯರಿಗೆ ಹೊನ್ಕಲ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಗಜಲ್ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೊನ್ಕಲ್ ಅವರಿಗೆ ಈ ಸಲ ನಮ್ಮ ಜಿಲ್ಲೆಯ ಮೂಲಕ ರಾಜ್ಯೋತ್ಸವ ಪುರಸ್ಕಾರ ಸಿಗಬೇಕಿತ್ತು. ಯಾಕೋ ತಪ್ಪಿದೆ. ಮುಂದಿನ ದಿನಗಳಲ್ಲಿ ಅವರ ಪ್ರತಿಭೆಗೆ ಆ ಪುರಸ್ಕಾರ ಸಿಗಲಿದೆ ಎಂದು ಶುಭ ಹಾರೈಸಿದರು.

ಸಾನ್ನಿಧ್ಯ ವಹಿಸಿದ್ದ ಬಸವಯ್ಯ ಶರಣರು ಮಾತನಾಡಿ, ಸಿದ್ಧರಾಮ ಹೊನ್ಕಲ್ ನಮ್ಮ ನಾಡಿನ ಆಸ್ತಿ. ಅವರ ನಾಡು-ನುಡಿ ಸೇವೆ ಅಪಾರ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಸಿದ್ಧಪ್ಪ ಹೊಟ್ಟಿ ಮಾತನಾಡಿ, ತಾಲೂಕು ಹಾಗೂ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದಾರೆ. ಮುಂಬರುವ ದಿನಗಳಲ್ಲಿ ಅವರಿಗೆ ರಾಜ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುವ ಅರ್ಹತೆ ಇದೆ ಎಂದರು.

ಪ್ರಶಸ್ತಿಗೆ ಆಯ್ಕೆಯಾದ ಐದು ಕೃತಿಗಳ ಕುರಿತು ಮಾತನಾಡಿದ ಡಾ. ಹೆಚ್.ಎಸ್. ಸತ್ಯನಾರಾಯಣ ಹಾಗೂ ಪತ್ರಕರ್ತ ಲೇಖಕ ಪ್ರಭುಲಿಂಗ ನೀಲೂರೆ ಅವರು, ಸಿದ್ಧರಾಮ ಹೊನ್ಕಲ್ ಅವರು ಬರೆಯದ ಪ್ರಕಾರವೇ ಉಳಿದಿಲ್ಲ. ಅವರ ಕೃತಿಗಳು‌ ರಾಜ್ಯದ ಹೊರ ರಾಜ್ಯದ ವಿವಿಗಳಲ್ಲಿ ಪಠ್ಯ ಆಗಿವೆ. ಅವರು ನಾಡಿನಲ್ಲಿ ಅತಿ ಹೆಚ್ಚು ಪ್ರವಾಸ ಕಥನ ಬರೆದು ಸಮಗ್ರ ಪ್ರವಾಸ ಕಥನ ಪ್ರಕಟಿಸಿದ ಮೊದಲಿಗರು. ಬರಹಗಳ ಮೌಲ್ಯ ಮಾಪನ ಮಾಡಿ ಒಂದೊಂದು ಪ್ರಕಾರದಲ್ಲಿ ಒಂದೊಂದು ದಿನ ವಿಚಾರ ಸಂಕಿರಣ ಮಾಡೋಣ ಎಂದು ಸಲಹೆ ನೀಡಿದರು.

ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಹಾಗೂ ಸಂಶೋದಕ ಡಾ. ಮೋನಪ್ಪ ಶಿರವಾಳ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳು ಪ್ರಶಸ್ತಿ ಪುರಸ್ಕೃತರು, ಲೇಖಕರು ಕವಿಗಳು ಭಾಗವಹಿಸಿದ್ದರು.

ನಾಡಿನ ಹೆಸರಾಂತ ಐವರು ಲೇಖಕ ಲೇಖಕಿಯರಿಗೆ 2022-2023 ಸಾಲಿನ ಹೊನ್ಕಲ್ ಸಾಹಿತ್ಯದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹಿರಿಯ ಲೇಖಕ ಡಾ. ಬಸವಪ್ರಭು ಪಾಟೀಲ‌ ಬೆಟ್ಟದೂರು ರಾಯಚೂರು, ಡಾ.ಎಚ್.ಎಸ್. ಸತ್ಯನಾರಾಯಣ ವಿಮರ್ಶಕರು ಚಿಕ್ಕಮಗಳೂರು, ಕಾದಂಬರಿ ಲೇಖಕಿ ಫೌಜಿಯಾ ಸಲಿಂ ದುಬೈ, ಕವಿಯತ್ರಿ ಪದ್ಮಶ್ರೀ ಗೋವಿಂದರಾಜ್ ಭದ್ರಾವತಿ, ಹಾಗೂ ಭರವಸೆಯ ಯುವ ಕಥೆಗಾರ ವೀರೇಂದ್ರ ರಾವಿಹಾಳ್ ಬಳ್ಳಾರಿ ಇವರು ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದರು.

ಇದೇ ವೇದಿಕೆಯಲ್ಲಿ ಲೇಖಕ ಸಿದ್ಧರಾಮ ಹೊನ್ಕಲ್ ರ "ಲೋಕಸಂಚಾರಿ " ಸಮಗ್ರ ಪ್ರವಾಸ ಕಥನ, "ನುಡಿನೋಟ ", ಹಾಗೂ "ಪ್ರತಿಬಿಂಬ " ಎಂಬ ಎರಡು ವಿಮರ್ಶೆ ಸಂಕಲನ, "ಹೊನ್ಕಲ್ ರ ಶಾಯಿರಿಲೋಕ ", ಹಾಗೂ ಹೊನ್ಕಲ್ ರ ಕುರಿತು ಪತ್ರಕರ್ತ ಲೇಖಕ ಶ್ರೀ ಪ್ರಭುಲಿಂಗ ನೀಲೂರೆ ಅವರು ಬರೆದ "ಹೊನ್ನುಡಿಯ ಸಾಧಕ ಸಿದ್ಧರಾಮ'''''''' ಹೀಗೆ ಐದು ಕೃತಿಗಳನ್ನು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು ಲೋಕಾರ್ಪಣೆ ಮಾಡಿದರು.

ಕೃತಿಗಳ ಕುರಿತು ಈರ್ವರು ಲೇಖಕರಾದ ಡಾ. ಎಚ್. ಎಸ್. ಸತ್ಯನಾರಾಯಣ ಹಾಗೂ ಪತ್ರಕರ್ತ ಹಾಗೂ ಬಾಲವಿಕಾಸ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಪ್ರಭುಲಿಂಗ ನೀಲೂರೆ ಮಾತನಾಡಿದರು.

ಗಜಲ್ ಕವಿಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕದ ಸುಮಾರು ಇಪ್ಪತ್ತೆರಡು ಹೆಸರಾಂತ ಗಜಲ್ ಲೇಖಕ ಲೇಖಕಿಯರು ಭಾಗವಹಿಸುತ್ತಿದ್ದು ಕಾವ್ಯದ ಹುಡಿಯನ್ನು ಮೈ ಮನಕೆ ತಲುಪಿಸಲಿದ್ದಾರೆ.