ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ರಕ್ತದಾನ ಮಾಡುವುದರಿಂದ ರಕ್ತದ ಅವಶ್ಯಕತೆ ಇರುವ ವ್ಯಕ್ತಿಗಳ ರಕ್ಷಣೆ ಮಾಡಲು ಸಹಕಾರಿಯಾಗುತ್ತದೆ ಎಂದು ಎಸ್.ಜಿ.ವಿ.ಆಯುರ್ವೇದಿಕ್ ಕಾಲೇಜಿನ ಪ್ರಾಚಾರ್ಯ ಡಾ.ಸುಭಾಸ ಬಗಾಡೆ ಹೇಳಿದರು.ಪಟ್ಟಣದ ಎ.ವಿ.ಢಮ್ಮಣಗಿ ವ್ಹಿಜನ್ ಫೌಂಡೇಶನ್‌ದ ಕಲ್ಪವೃಕ್ಷ ಮಾದರಿ ಶಾಲೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಎಸ್.ಜಿ.ವಿ.ಆಯುರ್ವೇದಿಕ್ ವೈದ್ಯಕೀಯ ಕಾಲೇಜ್, ಈಶಾ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಪಾಲಕರಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದ ಮೂಲಕ ಸಾಮಾಜಿಕ ಕಳಕಳಿಯ ಕಾರ್ಯವನ್ನು ಮಾಡುತ್ತಿರುವ ಕಲ್ಪವೃಕ್ಷ ಮಾದರಿ ಶಾಲೆಯ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಚಾರ್ಯ ಡಾ.ಹನಮೇಶ ದುಡ್ಯಾಳ, ಆಡಳಿತಾಧಿಕಾರಿ ರಾಜಶೇಖರ ಕೋತಂಬ್ರಿ ಶಿಕ್ಷಕರು, ಪಾಲಕರು ಸೇರಿದಂತೆ 85 ಜನರು ರಕ್ತದಾನ ಮಾಡಿದರು.ಶಿಬಿರದಲ್ಲಿ ಎಲುಬು ಕೀಲು ತಜ್ಞೆ ಡಾ.ಪುನಿತ.ಡಿ, ಸ್ತ್ರೀರೋಗ ತಜ್ಞೆ ಡಾ.ಭಾರತಿ ಡಿ.ಕೆ, ಸಾಮಾನ್ಯ ರೋಗ ತಜ್ಞ ಡಾ.ಪ್ರಭುದೇವ ಸಂಗೊಳ್ಳಿ, ಆಯುರ್ವೇದ ವಿಭಾಗದ ತಜ್ಞ ವೈದ್ಯರಾದ ಡಾ.ಜಗದೀಶ ಅರಳಿಕಟ್ಟಿ, ಡಾ.ಬಸನಾಯ್ಕ ರುದ್ರನಾಯ್ಕರ, ಡಾ.ಶ್ರೀನಿವಾಸ ಕಾಂಬಳೆ, ಕ್ಯಾಂಪ್ ಆಫೀಸರ್ ಡಾ.ನಾಗರಾಜ ಕಂಬಾರ, ಈಶಾ ಆಸ್ಪತ್ರೆಯ ವೈದ್ಯಕೀಯ ಉಪಅಧೀಕ್ಷಕ ಡಾ.ಸಂತೋಷ ಕಂಚಯನಿ ಅವರುಗಳು ಎಲುವು-ಕೀಲು, ಬಿಪಿ, ಸಕ್ಕರೆ ಕಾಯಿಲೆ ಸೇರಿದಂತೆ ಹಲವಾರು ತಪಾಸಣೆ ನಡೆಸಿ ಸಲಹೆ ನೀಡಿದರು.ಶಿಬಿರದಲ್ಲಿ 75 ಜನರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಶಿಕ್ಷಕರು, ಸಿಬ್ಬಂದಿ ಹಾಗೂ ಪಾಲಕರು ಪಾಲ್ಗೊಂಡಿದ್ದರು.