ಸ್ವಸಹಾಯ ಸಂಘಗಳ ಕಾರ್ಯ ಶ್ಲಾಘನೀಯ: ಯಮುನಾ ನಾಯ್ಕ

| Published : Oct 20 2025, 01:04 AM IST

ಸ್ವಸಹಾಯ ಸಂಘಗಳ ಕಾರ್ಯ ಶ್ಲಾಘನೀಯ: ಯಮುನಾ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ ಮಹಿಳೆಯರಿಗೆ ಆರ್ಥಿಕ ಸಬಲೀಕರಣ ಸಾಧಿಸಲು ಅಗತ್ಯವಿರುವ ಸೂಕ್ತ ಮಾರ್ಗದರ್ಶನ ಮಾಡುತ್ತಿರುವ ಸ್ವಸಹಾಯ ಸಂಘಗಳು ಶ್ಲಾಘನೀಯ ಕಾರ್ಯ ಮಾಡುತ್ತಿವೆ.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ ಮಹಿಳೆಯರಿಗೆ ಆರ್ಥಿಕ ಸಬಲೀಕರಣ ಸಾಧಿಸಲು ಅಗತ್ಯವಿರುವ ಸೂಕ್ತ ಮಾರ್ಗದರ್ಶನ ಮಾಡುತ್ತಿರುವ ಸ್ವಸಹಾಯ ಸಂಘಗಳು ಶ್ಲಾಘನೀಯ ಕಾರ್ಯ ಮಾಡುತ್ತಿವೆ ಎಂದು ನಿವೃತ್ತ ಶಿಕ್ಷಕಿ ಯಮುನಾ ನಾಯ್ಕ ಹೇಳಿದರು.

ತಾಲೂಕಿನ ಭರತನಹಳ್ಳಿಯ ಶ್ರೀ ಭ್ರಮರಾಂಬಾ ದೇವಾಲಯದ ಸಭಾಂಗಣದಲ್ಲಿ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಪಂ, ತಾಪಂ ಯಲ್ಲಾಪುರ ಇವುಗಳ ಸಹಯೋಗದಲ್ಲಿ ಕುಂದರಗಿಯ ಜನನಿ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟ ಹಮ್ಮಿಕೊಂಡಿದ್ದ ೧೦ನೇ ವಾರ್ಷಿಕ ಸರ್ವಸಾಧಾರಣ ಸಭೆ ಮತ್ತು ರೈತ ಮಹಿಳೆಯರೇ ಉತ್ಪಾದಿಸಿದ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿದರು.

ಸಂಘಟನೆಗೆ ಬಲವಿದೆ ಎಂಬುದನ್ನು ಇಂದಿನ ಸಭೆಯೇ ತೋರಿಸಿದೆ. ಇದು ಮುನ್ನಡೆಯಲಿ ಎಂದರು.

ಗ್ರಾಪಂ ಸದಸ್ಯ ಗಣೇಶ ಹೆಗಡೆ ಮಾತನಾಡಿದರು.

ಮಹಿಳಾ ಉತ್ಪಾದಕ ಸಂಘಗಳ ಅಧ್ಯಕ್ಷೆ ನಿರ್ಮಲಾ ನಾಯ್ಕ, ಒಕ್ಕೂಟದ ತಾಲೂಕಾ ವ್ಯವಸ್ಥಾಪಕ ಯೋಗೀಶ ಮಡಿವಾಳ, ಗ್ರಾಪಂ ಸದಸ್ಯ ರಾಮಕೃಷ್ಣ ಹೆಗಡೆ, ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷೆ ಜ್ಯೋತಿ ಶೇರೂಗಾರ ಮಾತನಾಡಿದರು. ಗ್ರಾಪಂ ಸದಸ್ಯರಾದ ಪ್ರಕಾಶ ನಾಯ್ಕ, ಜ್ಯೋತಿ ಹುದಾರ, ಗ್ರಾಪಂ ಕಾರ್ಯದರ್ಶಿ ಶಂಕರ ನಾಯ್ಕ, ಗ್ರಂಥಪಾಲಕಿ ರೀತಾ ರೋಖಡೆ ಉಪಸ್ಥಿತರಿದ್ದರು.

ಚಿಂತನಾ ಪ್ರಾರ್ಥಿಸಿದರು. ರಂಜಿತಾ ನಾಯ್ಕ ಸ್ವಾಗತಿಸಿದರು. ಮಹಾಲಕ್ಷ್ಮೀ ನಾಯ್ಕ ವರದಿ ವಾಚಿಸಿದರು. ವಲಯ ಮೇಲ್ವಿಚಾರಕ ಕರುಣಾಕರ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ವಿನೋದಾ ದೇವಾಡಿಗ ವಂದಿಸಿದರು.

ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಲಾಗಿದ್ದ ಆರತಿ ತಾಟು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸತ್ಯನಾರಾಯಣ ಪೂಜೆಯೂ ಸೇರಿದಂತೆ ಎಲ್ಲ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಪಾಲ್ಗೊಂಡಿದ್ದರು.