ಸಾರಾಂಶ
ಕನ್ನಡಪ್ರಭ ವಾರ್ತೆ ಕುದೂರುಸಮಾಜದ ಎಲ್ಲರನ್ನು ಒಟ್ಟೊಟ್ಟಿಗೆ ಕರೆದುಕೊಂಡು ಹೋಗುವಂತಹ ಮನಸ್ಥಿತಿ ರೂಪಿಸಬೇಕಾಗಿದೆ ಎಂದು ಕಂಚುಗಲ್ ಬಂಡೇಮಠದ ಅಧ್ಯಕ್ಷ ಮಹಾಲಿಂಗ ಸ್ವಾಮೀಜಿ ಹೇಳಿದರು.ಕಂಚುಗಲ್ ಬಂಡೇಮಠದ ಸಿದ್ಧಗಂಗಾ ಗ್ರಾಮಾಂತರ ಪ್ರೌಢಶಾಲೆಯಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಳೆಯ ವಿದ್ಯಾರ್ಥಿಗಳ ಸಂಘ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಎಲ್ಲಾ ಮಕ್ಕಳಿಗೆ ಪಾಠೋಪಕರಣ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾವು ಓದಿದ ಶಾಲೆಯನ್ನು ಮರೆಯದೆ ಶಿಕ್ಷಣವನ್ನು ಪಡೆದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿಗಳು ಒಟ್ಟಾಗಿ ಇಂದಿನ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಸಂತಸ ಮೂಡಿಸಿದೆ ಎಂದು ತಿಳಿಸಿದರು.
ಸಂಘದ ಗೌರವಾಧ್ಯಕ್ಷ ಹರೀಶ್ ಮಾತನಾಡಿ, ಸ್ವಾತಂತ್ರ್ಯದ ದಿನಗಳು ಶತಮಾನದ ಕಡೆಗೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಉತ್ನತ ಶಿಕ್ಷಣ ಇಂದಿಗೂ ಬಡ ವಿದ್ಯಾರ್ಥಿಗಳಿಗೆ ಒಮ್ಮೊಮ್ಮೆ ಗಗನಕುಸುಮವೋ ಎನ್ನುವಂತಿದೆ ಎಂದರು.ಬೆಂಗಳೂರಿನ ಮಹೇಂದ್ರ ಬನೋಟ್ ಜೈನ್, ವೆಂಕಟೇಶ್, ಹಾಗೂ ಪ್ರಹ್ಲಾದ್ ಬಾಬು ,ರಾಜೇಂದ್ರ ಎಬಿಎಸ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ನಿಘಂಟು, ಜ್ಞಾನಬಂಢಾರ ಎಂಬ ಪುಸ್ತಕ ವಿತರಿಸಿದರು. ಸಂಗದ ಸುನೀಲ್ ಕುಮಾರ್, ಮಂಜುಆರಾಧ್ಯ, ಸುಂದರ್‌ಮೂರ್ತಿ, ಸುಮಲತಾ ಸೌಮ್ಯಶ್ರಿ, ಯೋಗೇಶ್, ಶಶಿಕಲಾ ಮಲ್ಲಿಕಾರ್ಜುನ್, ನಂದೀಶ್, ಶಿಲ್ಪ, ರಾಜ್‌ಕುಮಾರ್, ಶ್ರೀನಿವಾಸ್, ಸುಮಂತ್ ಚಂದ್ರಶೇಖರ್ ಭಾಗವಹಿಸಿದ್ದರು.