ಸಾರಾಂಶ
ಪತ್ರಿಕೆ ವಿತರಣೆಯಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುತ್ತಿರುವುದರಿಂದ ಅವರ ಶೈಕ್ಷಣಿಕ ಬದುಕಿಗೆ ಬಲಬಂದಾಗುತ್ತದೆ. ಕಷ್ಟಪಟ್ಟು ದುಡಿದ ಹಣದಲ್ಲಿ ಅಲ್ಪಸ್ವಲ್ಪ ಮನೆಗೆ ಕೊಟ್ಟು ಸ್ವಲ್ಪ ಭಾಗದಲ್ಲಿ ಪಠ್ಯೇತರ ಪರಿಕರಗಳನ್ನು ಖರೀದಿಸಲು ಸಹಾಯವಾಗುತ್ತದೆ.
ಕನ್ನಡಪ್ರಭ ವಾರ್ತೆ ಭಾರತೀನಗರ
ಪರಿಸರ ಜಾಗೃತಿ ವೇದಿಕೆ ಮದ್ದೂರು ತಾಲೂಕು ಘಟಕದ ವತಿಯಿಂದ ಭಾರತೀನಗರದ ಸುದ್ದಿ ಮನೆ ಕಚೇರಿಯಲ್ಲಿ ಪತ್ರಿಕಾ ವಿತರಕರನ್ನು ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಅವರು ಸನ್ಮಾನಿಸಿ ಗೌರವಿಸಿದರು.ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ , ಸುದ್ದಿ ಮನೆಯಲ್ಲಿ ಸುದ್ದಿಗಳನ್ನು ಸಂಗ್ರಹಿಸಿ ಅಚ್ಚುಕಟ್ಟಾಗಿ ಜೋಡಿಸಿ, ಅಂದವಾಗಿ ಪತ್ರಿಕೆಗಳನ್ನು ಮುದ್ರಿಸಿ ಹೊರತಂದ ನಂತರ ಅವುಗಳನ್ನು ಅಚ್ಚುಕಟ್ಟಾಗಿ ಮನೆಮನೆಗಳಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿರುವ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ ಎಂದರು.
ಸಾಮಾನ್ಯವಾಗಿ ಪತ್ರಿಕಾ ಕಚೇರಿಗಳಲ್ಲಿ ಕೆಲಸ ಮಾಡುವ ವರದಿಗಾರರು, ಸಂಪಾದಕರು, ಉಪಸಂಪಾದಕರನ್ನು ಗುರುತಿಸಲಾಗುತ್ತದೆ. ಆದರೆ ಮಳೆ, ಚಳಿ, ಗಾಳಿ ಎನ್ನದೇ ಪತ್ರಿಕೆಗಳನ್ನು ಮನೆ ಮನೆಗೆ ಹಂಚುವ ಹುಡುಗರನ್ನು ಯಾರೂ ನೆನೆಯುವುದಿಲ್ಲ, ಪರಿಸರ ಜಾಗೃತಿ ಸಂಸ್ಥೆ ಅವರ ಸೇವೆಯನ್ನು ಗುರುತಿಸಿ ಗೌರವಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ಪತ್ರಿಕೆ ವಿತರಣೆಯಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುತ್ತಿರುವುದರಿಂದ ಅವರ ಶೈಕ್ಷಣಿಕ ಬದುಕಿಗೆ ಬಲಬಂದಾಗುತ್ತದೆ. ಕಷ್ಟಪಟ್ಟು ದುಡಿದ ಹಣದಲ್ಲಿ ಅಲ್ಪಸ್ವಲ್ಪ ಮನೆಗೆ ಕೊಟ್ಟು ಸ್ವಲ್ಪ ಭಾಗದಲ್ಲಿ ಪಠ್ಯೇತರ ಪರಿಕರಗಳನ್ನು ಖರೀದಿಸಲು ಸಹಾಯವಾಗುತ್ತದೆ ಎಂದು ಹೇಳಿದರು.
ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಆರ್.ಕೆ.ವಿದ್ಯಾಸಂಸ್ಥೆಯ ಮುಖ್ಯಸ್ಥ ವಿನಯ್‌ರಾಮಕೃಷ್ಣ, ಜೆಡಿಎಸ್ ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಬಿಇಟಿ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ತಾ.ಪಂ ಮಾಜಿ ಸದಸ್ಯ ಬಿ.ಗಿರೀಶ್, ಆರ್.ಸಿದ್ದಪ್ಪ, ಅವಿನಾಶ್, ಅಣ್ಣೂರು ರವಿ ಕೃಷ್ಣಪ್ಪ, ಬನ್ನೂರು ಮಹೇಂದ್ರಸಿಂಗ್ ಕಾಳಪ್ಪ, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಎಂ.ರವಿ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮಂಜುನಾಥ್, ಶ್ರೀನಿವಾಸ್, ಮೋಹನ್, ನವೀನ, ತೊರೆಚಾಕನಹಳ್ಳಿ ಶಂಕರೇಗೌಡ, ಅಣ್ಣೂರು ಲಕ್ಷ್ಮಣ್, ಅಣ್ಣೂರು ಸತೀಶ್, ಅನುಪಮ ಸತೀಶ್, ಎ.ಎಲ್.ಜಗದೀಶ್, ಮಹಿಳಾ ಮುಖಂಡರಾದ ಲಕ್ಷ್ಮೀ, ಮಂಜುಳಾ ಬೋರೇಗೌಡ ಸೇರಿ ಹಲವರಿದ್ದರು.