ಸಾರಾಂಶ
ರಾಮನಗರ: ದೇಶದಲ್ಲಿ ಮರೆಯಾಗುತ್ತಿರುವ ಹಳ್ಳಿಗಾಡಿನ, ಬುಡಕಟ್ಟುಗಳ ಪರಂಪರೆಯನ್ನು ಜಾನಪದ ಲೋಕ ಉಳಿಸಿ ಬೆಳೆಸುತ್ತಿದೆ. ಇದನ್ನು ಗುರುತಿಸಿಯೇ ಯುನೆಸ್ಕೋ ಮಾನ್ಯತೆ ನೀಡಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ಹೇಳಿದರು.
ನಗರದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಆಯೋಜಿಸಿದ್ದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಅಂತಾರಾಷ್ಟ್ರೀಯ ದಿನಾಚರಣೆ ಸಮಾರಂಭಕ್ಕೆ ಚಾಲನೆ ನೀಡಿದ ಅವರು, 45 ವರ್ಷಗಳಿಂದ ಎಚ್.ಎಲ್.ನಾಗೇಗೌಡರ ಮಾರ್ಗದರ್ಶನದಲ್ಲಿ ಮತ್ತು ನೇತೃತ್ವದಲ್ಲಿ ಬೆಳೆದು ಬಂದ ಬದ್ಧತೆಗೆ, ಶ್ರಮಕ್ಕೆ ಬೆಲೆ ಸಿಕ್ಕಿದೆ ಎಂದರು.ನಮ್ಮ ಸಂಸ್ಥೆ ವರ್ಷ ಪೂರ್ತಿ ನಡೆಸುವ ಕಾರ್ಯಕ್ರಮ, ಕಾರ್ಯ ಚಟುವಟಿಕೆಗಳನ್ನು ಯುನೆಸ್ಕೋ ಗುರುತಿಸಿದೆ. ಈ ಸಂಸ್ಥೆಗಾಗಿ ದುಡಿದ ನಾಡೋಜ ಜಿ.ನಾರಾಯಣ್, ಟಿ.ತಿಮ್ಮೆಗೌಡ, ಹಿ.ಶಿ.ರಾಮಚಂದ್ರೇಗೌಡ ಮತ್ತು ಮ್ಯಾನೇಜಿಂಗ್ ಟ್ರಸ್ಟಿಯಾದ ಆದಿತ್ಯನಂಜರಾಜ್, ಆಡಳಿತ ಮಂಡಳಿಯ ಸದಸ್ಯರು, ಜಿಲ್ಲಾ ಘಟಕಗಳು, ಆಡಳಿತಾಧಿಕಾರಿ ಡಾ.ನಂದಕುಮಾರ್ ಹೆಗ್ಗಡೆ ಹಾಗೂ ಜಾನಪದ ಲೋಕ ಮತ್ತು ಪರಿಷತ್ತಿನ ಸಿಬ್ಬಂದಿ ಮತ್ತು ಎಲ್ಲಾ ಜನಪದ ಕಲಾವಿದರು ಯುನೆಸ್ಕೋ ಮಾನ್ಯತೆಗೆ ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕರಕುಶಲ ಕಲಾವಿದರಾದ ಕುಂಬಾರಿಕೆ ಕಲಾವಿದೆ ಆರ್.ವಿ.ಅನಸೂಯ ಬಾಯಿ, ಬಿದಿರು ಕಲೆ ಕುಶಲ ಕರ್ಮಿ ಶ್ರೀ ಗೋವಿಂದಸ್ವಾಮಿ, ಮರದ ಕೆತ್ತನೆ ಕುಶಲ ಕರ್ಮಿ ಶ್ರೀ ಸಿದ್ಧಲಿಂಗ ಬಡಿಗೇರ, ಚನ್ನಪಟ್ಟಣ ಬೊಂಬೆ ತಯಾರಕರಾದ ಮಂಜುನಾಥ್ ಇವರು ತಲೆಮಾರಿನಿಂದ ಉಳಿಸಿಕೊಂಡು ಬಂದಿರುವ ಕಲಾ ಸಾಧನೆಯನ್ನು ಗುರುತಿಸಿ ಗೌರವಿಸಲಾಯಿತು. ಹಾಗೂ ಕುಶಲ ಕಲೆಯ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಸು.ತಾ. ರಾಮೇಗೌಡ ಮತ್ತು ಆಡಳಿತಾಧಿಕಾರಿ ಡಾ. ನಂದಕುಮಾರ್ ಹೆಗ್ಗಡೆ, ಕ್ಯೂರೇಟರ್ ಡಾ.ಯು.ಎಂ. ರವಿ, ಕಾರ್ಯನಿರ್ವಹಣಾಧಿಕಾರಿ ಸರಸವಾಣಿ, ಸಂಶೋಧನಾ ಕೇಂದ್ರದ ಸಂಚಾಲಕ ಡಾ.ಕೆ.ಎಸ್. ಸಂದೀಪ್, ರಂಗಸಹಾಯಕ ಎಸ್. ಪ್ರದೀಪ್ ಹಾಜರಿದ್ದರು.
17ಕೆಆರ್ ಎಂಎನ್ 2.ಜೆಪಿಜಿರಾಮನಗರದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಆಯೋಜಿಸಿದ್ದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಅಂತಾರಾಷ್ಟ್ರೀಯ ದಿನಾಚರಣೆ ಸಮಾರಂಭದಲ್ಲಿ ಕುಂಬಾರಿಕೆ ಕಲಾವಿದೆ ಆರ್.ವಿ.ಅನಸೂಯ ಬಾಯಿ ಅವರನ್ನು ಸನ್ಮಾನಿಸಲಾಯಿತು.