ಕನ್ನಡಪ್ರಭ ವಾರ್ತೆ ಪಾಂಡವಪುರ
12ನೇ ಶತಮಾನದಲ್ಲಿ ನಾಡಪ್ರಭು ಕೆಂಪೇಗೌಡರು ಮಾಡಿದಂತಹ ಕೆಲಸಗಳು ಇಂದಿಗೂ ಜೀವಂತವಾಗಿವೆ ಎಂದರೆ ಅವರು ಮಾಡಿದ ಅಭಿವೃದ್ಧಿ ಕೆಲಸಗಳೇ ಸಾಕ್ಷಿ ಎಂದು ಶಾಸಕ ದರ್ಶನ್‌ಪುಟ್ಟಣ್ಣಯ್ಯ ಹೇಳಿದರು.ತಾಲೂಕಿನ ರಾಗಿಮುದ್ದನಹಳ್ಳಿಯಲ್ಲಿ ನಾಡಪ್ರಭು ಕೆಂಪೇಗೌಡ ಸೇವಾ ಟ್ರಸ್ಟ್‌ನಿಂದ ಆಯೋಜಿಸಿದ್ದ ಕೆಂಪೇಗೌಡರ ಜಯಂತಿ ಉದ್ಘಾಟಿಸಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರದಲ್ಲಿ ಕೆರೆಕಟ್ಟೆಗಳನ್ನು ನಿರ್ಮಿಸಿ ನೀರು ನಿರ್ವಹಣೆ, ಬಳಕೆ ಮಾಡುವ ಬಗ್ಗೆಯೂ ಅರಿವು ಮೂಡಿಸುವ ಕೆಲಸ ಮಾಡಿದ್ದರು ಎಂದರು.
ದೂರುದೃಷ್ಟಿದಿಂದ ಕೆಂಪೇಗೌಡರು ಬೆಂಗಳೂರಿಗೆ ಸಿಟಿಪ್ಲಾನ್‌ನಲ್ಲಿ ಅಡಿಪಾಯ ಹಾಕಿದರು. ಕೆರೆಕಟ್ಟೆಗಳನ್ನು ನಿರ್ಮಿಸಿ ಮಳೆಗಾಲದಲ್ಲಿ ಬರುವ ನೀರನ್ನು ಹೇಗೆ ಸಂಗ್ರಹಣ ಮಾಡಬೇಕು, ಬಳಕೆ ಮಾಡುವ ವಿಧಾನದ ಬಗ್ಗೆಯೂ ಅರಿವು ಮೂಡಿಸಿದ್ದರು ಎಂದು ಶ್ಲಾಘಿಸಿದರು.ಸಾಹಿತ್ಯ ಕ್ಷೇತ್ರ, ಸಮಾನತೆಯ ಬಗ್ಗೆಯೂ ಧ್ವನಿ ಎತ್ತುವ ಕೆಲಸ ಮಾಡಿದ್ದರು. ಹಳ್ಳಿಹಳ್ಳಿಗಳಲ್ಲಿ ಇರುವ ಜನರು ಎಲ್ಲರೂ ಒಗ್ಗಟ್ಟಿನಿಂದ, ಸಮಾನತೆಯಿಂದ ಜೀವನ ನಡೆಸಬೇಕು ಎನ್ನುವುದರ ಬಗ್ಗೆಯೂ ಬಸವಣ್ಣರಂತೆ ಕೆಲಸ ಮಾಡಿದ್ದಾರೆ. ಗ್ರಾಮದ ನಾಡಪ್ರಭು ಕೆಂಪೇಗೌಡ ಸೇವಾ ಟ್ರಸ್ಟ್ ಸದಸ್ಯರು ಸಹ ಅವರ ದಾರಿಯಲ್ಲಿಯೇ ಸಾಗಬೇಕು ಎಂದರು.
ಮನ್ನುಲ್ ನಿರ್ದೇಶಕ ಸಿ.ಶಿವಕುಮಾರ್ ಮಾತನಾಡಿ, ನಾಡಪ್ರಭು ಕೆಂಪೇಗೌಡರಂತೆಯೇ ಒಕ್ಕಲುತನ ಮಾಡುವ ಒಕ್ಕಲಿಗ ಸಮುದಾಯವು ಸಮಾಜದ ಎಲ್ಲಾ ಸಮುದಾಯಗಳನ್ನು ಜತೆಯಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದೆ. ಜಯಂತಿಗಳು ಜಾತಿಗೆ ಸೀಮಿತಗೊಳ್ಳಬಾರದು ಎಂದರು.
ಯುವ ಸಮುದಾಯವು ಸಹ ರಾಜಕೀಯವನ್ನು ಬದಿಗೊತ್ತು ತಮ್ಮ ಬದುಕುಕಟ್ಟಿಕೊಂಡು ಮುನ್ನಡೆಯಬೇಕು, ಹೈನುಗಾರಿಕೆ ಹೈನುಉದ್ಯಮವಾಗಿ ಬೆಳೆಯುತ್ತಿದೆ. ಯುವ ಸಮುದಾಯದ ಹೈನುಗಾರಿಕೆಯ ಕಡೆಗೆ ಮುಖ ಮಾಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಗ್ರಾಮದ ರೈತಸಂಘದ ಮುಖಂಡರಾದ ಕುಮಾರ್(ಹುಚ್ಚ), ಬಿಟಿಎಂಸಿ ಬಸ್ ಆರ್.ಸಿ.ಸೋಮಕುಮಾರ್ ಅವರು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ 10 ಗ್ರಾಂ ಚಿನ್ನದ ಉಂಗುರ ತೊಡಿಸುವ ಮೂಲಕ ಅಭಿಮಾನ ಮರೆದರು. ಬಳಿಕ ಟ್ರಸ್ಟ್‌ನ ನಾಮಫಲಕ ಅನಾವರಣಗೊಳಿಸಿದರು.ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ವಿಷಕಂಠೇಗೌಡ, ಗೌರವಾಧ್ಯಕ್ಷ ರಾಜು, ಯ.ಜವರೇಗೌಡ, ರಾಜೇಗೌಡ, ನಾಗಣ್ಣ, ಆರ್.ಎ.ಶ್ಯಾಮ್, ಚಿಕ್ಕೇಗೌಡ, ರಾಘವಪ್ರಕಾಶ್, ನೀರು ಬಳಕೆದಾರರ ಮಹಾಮಂಡಲ ಅಧ್ಯಕ್ಷ ಆರ್.ಎ.ನಾಗಣ್ಣ, ಕುಮಾರ್(ಹುಚ್ಚ), ಬಿಟಿಎಂಸಿ ಬಸ್ ಆರ್.ಸಿ.ಸೋಮಕುಮಾರ್, ದಸಂಸ ಮುಖಂಡ ಕಣಿವೆರಾಮು, ಡೇರಿ ಅಧ್ಯಕ್ಷ ಕಪಡಿಗೌಡ, ಟ್ರಸ್ಟ್‌ನ ಎಲ್ಲಾ ನಿರ್ದೇಶಕರು, ಗ್ರಾಮಸ್ಥರು ಹಾಜರಿದ್ದರು.