ಜಗತ್ತಿಗೆ ಇಂದು ಬುದ್ಧ, ಆತನ ತತ್ವ, ಸಂದೇಶಗಳು ಅಗತ್ಯವಾಗಿವೆ. ಮಿಲಿಟರಿ ಹಾಗೂ ಶಸ್ತ್ರಾಸ್ತದಿಂದ ನಡೆಯುವ ಯುದ್ಧಗಳು ಬೇಕಿಲ್ಲ ಎಂದು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಕಲಬುರಗಿಯಲ್ಲಿ ಮಂಗಳವಾರ ನಡೆದ 70ನೇ ಧರ್ಮ ಪ್ರವರ್ತನಾ ದಿನದಲ್ಲಿ ಪತ್ನಿ ರಾಧಾಬಾಯಿ ಖರ್ಗೆ ಸಮೇತ ಪಾಲ್ಗೊಂಡು ಪ್ರಾರ್ಥನೆ, ಧ್ಯಾನಪೂಜೆಗಳನ್ನು ಸಲ್ಲಿಸಿದ ನಂತರ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ ಜಗತ್ತಿಗೆ ಇಂದು ಬುದ್ಧ, ಆತನ ತತ್ವ, ಸಂದೇಶಗಳು ಅಗತ್ಯವಾಗಿವೆ. ಮಿಲಿಟರಿ ಹಾಗೂ ಶಸ್ತ್ರಾಸ್ತದಿಂದ ನಡೆಯುವ ಯುದ್ಧಗಳು ಬೇಕಿಲ್ಲ ಎಂದು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಕಲಬುರಗಿಯಲ್ಲಿ ಮಂಗಳವಾರ ನಡೆದ 70ನೇ ಧರ್ಮ ಪ್ರವರ್ತನಾ ದಿನದಲ್ಲಿ ಪತ್ನಿ ರಾಧಾಬಾಯಿ ಖರ್ಗೆ ಸಮೇತ ಪಾಲ್ಗೊಂಡು ಪ್ರಾರ್ಥನೆ, ಧ್ಯಾನಪೂಜೆಗಳನ್ನು ಸಲ್ಲಿಸಿದ ನಂತರ ಅವರು ಮಾತನಾಡಿದರು.

ಮಿಲಿಟರ್ ಶಸ್ತ್ರಗಳಿಂದ ಆಗುವ ಗೆಲುವು ತಾತ್ಕಾಲಿಕವೇ ಹೊರತು ಕಾಯಂ ಅಲ್ಲ. ಪರಸ್ಪರ ಮಾತುಕತೆ, ಶಾಂತಿಯುತ ನೀತಿಗಳನ್ನು ಅನುಸರಿಸುವುದರಿಂದ ಬರುವ ಜಯ ಕಾಯಂ ಜಯವಾಗಿರಲಿದೆ. ಇದರಿಂದ ಮನುಕುಲದ ಏಳಿಗೆಯಾಗುತ್ತದೆ ಎಂದರು.ಹೊರಗಿನ ವೈರಿಗಳಿಗಿಂತ ದೇಶದಲ್ಲಿ ಒಳಗಿನ ಜಾತಿಯತೆ, ಧಾರ್ಮಿಕ ಒಡತಿನ ಅಪಸ್ವರಗಳೇ ಬಹುದೊಡ್ಡ ಶತ್ರುಗಳಾಗಿವೆ. ಇವುಗಳ ವಿರುದ್ಧ ತಲೆ ಎತ್ತಿ ನಿಲ್ಲುವ ಮೂಲಕ ಅವುಗಳನ್ನು ಸೋಲಿಸಬೇಕಿದೆ ಎಂದು ಜನತೆಗೆ ಖರ್ಗೆ ಕರೆ ನೀಡಿದರು.ಕಂದಾಚಾರಗಳ ವಿರುದಧ ವೈಜ್ಞಾನಿಕ ತಳಹದಿಯ ಧರ್ಮ, ಆಚರಣೆಗಳನ್ನು ನಾವು ಬೆಳೆಸಬೇಕಿದೆ. ಹೀಗಾಗಿ ಜನ ವಿಸ್ಲೇಷಣೆ ಮಾಡುವ ಮೂಲಕ ಧಾರ್ಮಿಕತೆ ಆಚರಿಸಲಿ. ಬಲಪಂಥೀಯ ಹಿಂದುತ್ವ ವಾದಿಗಳು ಬುದ್ಧನನ್ನು ವಿಷ್ಣುವಿನ 9ನೇ ಅವತಾರವೆಂದು ಯಾಕೆ ಹೇಳುತ್ತಾರೆ? ಬೌದ್ಧ ಧರ್ಮದಲ್ಲಿನ ವೈಜ್ಞಾನಿಕತೆ, ವಿಚಾರಗಳಿಂದಾಗಿ ಅವರು ಧರ್ಮ ಬಳಿಯಲು ಬಿಡುವುದು ಬೇಡವೆಂದು ಈ ರೀತಿ ವಿಷ್ಣುವಿನ ಅವತಾರವೆಂದು ಹೇಳಿದರು. ಸಂಶೋಧಕರು ದಕ್ಷಿಣ ಭಾರತದಲ್ಲಿರುವ, ಅದರಲ್ಲೂ ಕೃಷ್ಣಾ ಮತ್ತು ಭೀಮಾ ನದಿಗಳಗುಂಟ ಹಿಂದೆ ಹರಡಿದ್ದಂತಹ ಬುದ್ಧ ಧರ್ಮದ ತತ್ವ, ಸಿದ್ದಾಂತಗಳ ಬಗ್ಗೆ ಆಳವಾದಂತಹ ಸಂಶೋಧನೆ ನಡೆಸುವಂತೆ ಕರೆ ನೀಜಿದರು.ಶಾತವಾಹನರ ಕಾಲದಲ್ಲಿನ ಅನೇಕ ಧರ್ಮದ ಕುರುಹುಗಳು ಕಲ್ಯಾಣ ನಾಡಲ್ಲಿದ್ದವು ಎಂದು ಹೇಳಲಾಗುತ್ತದೆ. ಈ ಕುರುಹುಗಳ ಬಗ್ಗೆ ಸಂಶೋಧನೆಯಾಗಿಲ್ಲವೆಂದು ಹೇಳಿದ ಖರ್ಗೆ ಭಾರತೀಯ ಪುರಾತತ್ವ ಇಲಾಖೆಯವರು ಇದನ್ನು ಗಮನಕ್ಕೆ ತಗೆದುಕೊಂಡು ಬಂದು ಸಂಶೋಧನೆ ನಡೆಸುವಂತಾಗಲಿ ಎಂದರು.ಬುದ್ಧ ವಿಹಾರದಲ್ಲಿನ ಧಮ್ಮ ಚಕ್ರ ಪ್ರವರ್ತನ ದಿನದಲ್ಲಿ ಲೇಖಕರಾದ ನಟರಾಜ ಹುಳಿಯಾರ್‌, ರಾಹುಲ್‌ ಖರ್ಗೆ, ರಾಧಾಕೃಷ್ಣ ಪಾಲ್ಗೊಂಡಿದ್ದರು. ಶಾಸಕರಾದ ಜಗದೇವ ಗುತ್ತೇದಾರ್‌, ತಿಪ್ಪಣ್ಣ ಕಮಕನೂರ್‌, ಅಲ್ಲಂಪ್ರಭು ಪಾಟೀಲ್‌, ಡಾ, ಕಿರಣ ದೇಶಮುಖ ಸೇರಿದಂತೆ ಅನೇಕರಿದ್ದರು

ಧಮ್ಮಚಕ್ರ ಪ್ರವರ್ತನ ದಿನ: ಕಲಬುರಗಿಯ ಸಿದ್ಧಾರ್ಥ ಬುದ್ಧ ವಿಹಾರದಲ್ಲಿ 70ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆಯನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. ಇದರ ಅಂಗವಾಗಿ ಸಿದ್ದಾರ್ಥ ವಿಹಾರ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಬುದ್ಧ ವಿಹಾರದ ಬಯಲು ರಂಗಮಂದಿರದಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.