ಸಂವಿಧಾನವನ್ನು ನಮ್ಮ ದೇಶದ ಮಾತೆ ಎನ್ನಬಹುದು, ಯಾಕೆಂದರೆ ಸಂವಿಧಾನ ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಿದ್ದಾರೆ
ಕೊಪ್ಪಳ: ವಿಶ್ವದಲ್ಲಿಯೇ ಭಾರತದ ಸಂವಿಧಾನ ಶ್ರೇಷ್ಠ ಸಂವಿಧಾನವಾಗಿದೆ, ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಸಹ ಸ್ವಾತಂತ್ರ್ಯ, ಸಮಾನತೆ ಕೊಟ್ಟಿದೆ ಸಂವಿಧಾನದಡಿಯಲ್ಲಿ ಪ್ರತಿಯೊಬ್ಬರೂ ನಡೆದುಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಕೆ.ಕುಮಾರ ಹೇಳಿದರು.
ನಗರದ ಜಿಲ್ಲಾ ವಕೀಲರ ಸಂಘದ ಕಾರ್ಯಾಲಯದಲ್ಲಿ ನಡೆದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಹಿರಿಯ ದಿವಾಣಿ ನ್ಯಾಯಾಧೀಶ ಮಲಕಾರಿ ರಾಮಪ್ಪ ಒಡೆಯರ್ ಮಾತನಾಡಿ, ಸಂವಿಧಾನವನ್ನು ನಮ್ಮ ದೇಶದ ಮಾತೆ ಎನ್ನಬಹುದು, ಯಾಕೆಂದರೆ ಸಂವಿಧಾನ ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಿದ್ದಾರೆ ಎಂದರು.
ಜಿಲ್ಲಾ ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ.ಕಣವಿ ಮಾತನಾಡಿ, ಸಂವಿಧಾನ ರಚಿಸುವಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಕೊಡುಗೆ ದೊಡ್ಡದಿದೆ, ಸಂವಿಧಾನದಡಿಯಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಯು ಸಹ ನೆಡೆದುಕೊಳ್ಳಬೇಕು ಎಂದರು.ಹಿರಿಯ ವಕೀಲ ಕೆ.ಐ.ಪತ್ತಾರ ಸಂವಿಧಾನ ಪೀಠಿಕೆ ಎಲ್ಲರಿಗೂ ಬೋಧಿಸಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶ ಸರಸ್ವತಿ ದೇವಿ, ಭಾಗ್ಯಲಕ್ಷ್ಮಿ, ತ್ರಿವೇಣಿ ಈರಗಾರ ಭಾಗಿಯಾಗಿದ್ದರು.ಪಿ.ಎಲ್.ಹಾದಿಮನಿ, ಬಿ.ವಿ.ಸಜ್ಜನ್, ಸಂತೋಷ ಕವಲೂರ್, ರಾಜಸಾಬ್ ಬೆಳಗುರ್ಕಿ, ಆಶಿಫ ಅಲಿ, ಬೆಳ್ಳೆಪ್ಪ ಗಬ್ಬುರ್, ಆಶಿಫ್ ಸರ್ದಾರ್ ಸೇರಿದಂತೆ ಅನೇಕರು ಇದ್ದರು. ಹನುಮಂತರಾವ ಕೆಂಪಳ್ಳಿ ಸ್ವಾಗತಿಸಿದರು, ಬಾಳಪ್ಪ ವೀರಾಪುರ ನಿರೂಪಿಸಿ ವಂದಿಸಿದರು.