ದೈವ ದೇವರು ಸೇವೆಯು ಬದುಕಿಗೆ ಸುಖ ಶಾಂತಿಯನ್ನು ನೀಡುತ್ತದೆ. ಅನಾದಿಕಾಲದಿಂದ ನಡೆಸಿಕೊಂಡು ಬಂದ ರೂಢಿ ಸಂಪ್ರದಾಯ ಹಾಗೂ ಆಚರಣೆಗಳನ್ನು ಯುವ ಜನಾಂಗ ಮುಂದುವರೆಸಿಕೊಂಡು ಹೋಗುವುದು ಅತ್ಯವಶ್ಯಕ. ಅದಮ್ಯ ಭಕ್ತಿಯಿಂದ ದೈವ ದೇವರುಗಳ ಆರಾಧನೆಯು ಬದುಕಿನ ಔನತ್ಯಕ್ಕೆ ಅಡಿಗಲ್ಲಾಗುತ್ತದೆ ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ಎಸ್.ಇಂಜಾಡಿ ಹೇಳಿದರು.

ಕನ್ನಡಪ್ರಭವಾರ್ತೆ ಸುಬ್ರಹ್ಮಣ್ಯ

ಸುಬ್ರಹ್ಮಣ್ಯದ ದೇವರಗದ್ದೆಯ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ಮತ್ತು ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನದ ಮುಂಭಾಗ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುದಾನದಲ್ಲಿ ನಿರ್ಮಿತವಾದ ಹೊರಾಂಗಣ ಛಾವಣಿ ಹಾಗೂ ನಾಗಬ್ರಹ್ಮ ಸಭಾಭವನವನ್ನು ಸಾಂಕೇತಿಕವಾಗಿ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಜೀವನದಲ್ಲಿ ಒಳ್ಳೆಯ ಕೆಲಸವನ್ನು ಮಾಡಿದಾಗ ಉತ್ತಮ ಬದುಕು ಸೃಷ್ಠಿಯಾಗುತ್ತದೆ. ಭಕ್ತಿಯ ಆರಾಧನೆಯು ಸದಾ ನಮಗೆ ಒಳಿತನ್ನು ಉಂಟು ಮಾಡುತ್ತದೆ ಅನ್ನುವುದು ಸತ್ಯ ಎಂದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಲೀಲಾ ಮನಮೋಹನ್, ಸೌಮ್ಯಾ ಭರತ್, ಶ್ರೀ ದೇವಳದ ಇಂಜೀನಿಯರ್ ಉದಯ ಕುಮಾರ್ ಕೆ.ಸಿ, ಕಡಬ ತಾಲೂಕು ಕೆಡಿಪಿ ಸದಸ್ಯ ಶಿವರಾಮ ರೈ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಪವನ್ ಎಂ.ಡಿ, ಸತೀಶ್ ಕೂಜುಗೋಡು, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಮಾಧವ.ಡಿ.ದೇವರಗದ್ದೆ, ಗುತ್ತಿಗೆದಾರ ಅವಿನಾಶ್ ಪಳ್ಳಿಗದ್ದೆ, ಸಹಗುತ್ತಿಗೆದಾರ ಅಭಿಲಾಶ್ ಪಳ್ಳಿಗದ್ದೆ ಮುಖ್ಯಅತಿಥಿಗಳಾಗಿದ್ದರು. ದೈವಸ್ಥಾನದ ಆಡಳಿತ ಮಂಡಳಿಯ ಪ್ರಮುಖರಾದ ಆನಂದ ಕಲ್ಲಜಡ್ಕ, ಬಾಬು.ಎಂ.ಮೊಗ್ರ, ಮಾಧವ ದೇವರಗದ್ದೆ, ಅಣ್ಣು ದೇವರಗದ್ದೆ, ಶಿವರಾಮ ದೇವರಗದ್ದೆ, ದೈವಸ್ಥಾನದ ಅಭಿವೃದ್ಧಿ ಸಮಿತಿಯ ದಿನೇಶ್ ಎಂ.ಆರ್, ತಾರನಾಥ್ ಕೋನಡ್ಕ, ಗಣೇಶ್ ಭಟ್ ದೇವರಗದ್ದೆ, ಭರತ್ ಕಲ್ಲಗುಡ್ಡೆ, ನಾರಾಯಣ ಮಾನಾಡು, ಮಂಜುನಾಥ್ ಆಚಾರ್ಯ, ಹಿರಿಯರಾದ ರಾಮಯ್ಯ ಶೆಟ್ಟಿ ದೇವರಗದ್ದೆ ವೇದಿಕೆಯಲ್ಲಿದ್ದರು.

ಸಾನಿಧ್ಯಗಳ ಸೇವಕ ರತ್ನಾಕರ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.ಆರಂಭದಲ್ಲಿ ದೈವಗಳ ಸಾನಿಧ್ಯದಲ್ಲಿ ಪ್ರಾರ್ಥನೆ ನಡೆಸಲಾಯಿತು. ಬಳಿಕ ಸಾನಿಧ್ಯದ ಮುಂಭಾಗದಲ್ಲಿ ಪ್ರಾರ್ಥನೆ ಸಲ್ಲಿಸಿ ಗಣ್ಯರಿಗೆ ಶಾಲು ಹೊದಿಸಿ ಪ್ರಸಾದ ನೀಡಲಾಯಿತು.ಭಕ್ತಾದಿಗಳು ಉಪಸ್ಥಿತರಿದ್ದರು.