ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಶ್ರೀರಾಮನವಮಿಯ ಅಂಗವಾಗಿ ತಾಲೂಕಿನ ವಿವಿಧೆಡೆ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಆರಾಧನೆ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ನಡೆದವು.

ಪಟ್ಟಣದ ಚಾಮುಂಡೇಶ್ವರಿ ಬೀದಿ ಬದಿ ವ್ಯಾಪಾರಿಗಳ ಸಂಘ, ಅಗ್ರಹಾರ ಬಡಾವಣೆಯ ಶ್ರೀಕನಕದಾಸರ ಕ್ಷೇಮಭಿವೃದ್ಧಿ ಸಂಘ, ಮಡುವಿನಕೋಡಿ, ಹಿರಳಹಳ್ಳಿ, ಕಾಳೇಗೌಡನ ಕೊಪ್ಪಲು ಮುಂತಾದ ಕಡೆ ರಾಮಭಕ್ತರು ಶ್ರೀರಾಮನವಮಿಯನ್ನು ಆಚರಿಸಿ ಮಜ್ಜಿಗೆ, ಪಾನಕ, ಕೋಸಂಬರಿ ಮುಂತಾದ ಪ್ರಸಾದಗಳನ್ನು ಸಾರ್ವಜನಿಕರಿಗೆ ವಿತರಿಸಿದರು.

ತಾಲೂಕು ಜಯ ಕರ್ನಾಟಕ ಸಂಘದ ಅಧ್ಯಕ್ಷ ಸೋಮಶೇಖರ್ ಜೊತೆಗೂಡಿ ಪಟ್ಟಣದ ಚಾಮುಂಡೇಶ್ವರಿ ಬೀದಿ ಬದಿ ವ್ಯಾಪಾರಿಗಳ ಸಂಘದ ಸದಸ್ಯರು ರಾಮನವಮಿ ಆಚರಿಸಿದರೆ ಶ್ರೀ ಕನಕದಾಸರ ಕ್ಷೇಮಭಿವೃದ್ಧಿ ಸಂಘದ ಸದಸ್ಯರು ಸಂಘದ ಅಧ್ಯಕ್ಷ ಕುಮಾರ್ ನೇತೃತ್ವದಲ್ಲಿ ರಾಮನವಮಿ ಆಚರಿಸಿದರು.

ತಾಲೂಕು ಬಿಜೆಪಿ ಮುಂಖಡ ಪ್ರಮೀಳಾ ವರದರಾಜೇಗೌಡರ ನೇತೃತ್ವದಲ್ಲಿ ಕಾಳೇಗೌಡನ ಕೊಪ್ಪಲು ಗ್ರಾಮದಲ್ಲಿ ರಾಮನವಮಿ ಆಚರಿಸಿದರೆ ಮಡುವಿನಕೋಡಿ, ಹಿರಳಹಳ್ಳಿ ಮುಂತಾದ ಕಡೆ ನಡೆದ ಶ್ರೀರಾಮನವಮಿ ಕಾರ್ಯಕ್ರಮದಲ್ಲಿ ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಭಾಗವಹಿಸಿ ಶುಭಕೋರಿದರು.


ಶ್ರೀಚಾಮುಂಡೇಶ್ವರಿ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರತ್ನಮ್ಮ, ಕಾರ್ಯದರ್ಶಿ ದ್ರಾಕ್ಷಾಯಿಣಿ, ಶ್ರೀರಾಮ ಭಜನಾ ಸಮಿತಿ ಅಧ್ಯಕ್ಷ ಹಣ್ಣಿನ ಅಂಗಡಿ ರಾಮಣ್ಣ, ಕಾರ್ಯದರ್ಶಿ ಕಡಲೆಕಾಯಿ ಕೃಷ್ಣ, ಪುನೀತ್ ಯುವ ಸಾಮ್ರಾಜ್ಯ ಅಭಿಮಾನಿ ಬಳಗದ ಅಧ್ಯಕ್ಷ ಕಾಮನಹಳ್ಳಿ ಮಹೇಶ್, ಬೇಕರಿ ದಿನೇಶ್, ಪತ್ರಕರ್ತ ಕೆ.ಆರ್.ನೀಲಕಂಠ, ಕನಕ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೆ.ಎಸ್.ಕುಮಾರ್, ಉಪಾಧ್ಯಕ್ಷ ರಾಜೇಗೌಡ, ಖಜಾಂಚಿ ಸಂದೀಪ್, ಪ್ರಮೀಳ ವರದರಾಜೇಗೌಡ ಸೇರಿದಂತೆ ಹಲವರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ನಡೆದ ಶ್ರೀರಾಮ ನವಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಜ್ಜಿಗೆ, ಪಾನಕ, ಕೋಸಂಬರಿ ಮುಂತಾದ ಪ್ರಸಾದಗಳನ್ನು ಸಾರ್ವಜನಿಕರಿಗೆ ವಿತರಿಸಿ ಸಂಭ್ರಮಿಸಿದರು.ರಾಮ, ಹನುಮ ದೇವಾಲಯಗಳಲ್ಲಿ ವಿಶೇಷ ಪೂಜೆ

ಶ್ರೀರಂಗಪಟ್ಟಣ:ಶ್ರೀರಾಮನವಮಿ ಅಂಗವಾಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ರಾಮ ಮಂದಿರ ಹಾಗೂ ಆಂಜನೇಯ ದೇವಾಲಯದಲ್ಲಿ ಶ್ರೀರಾಮದೇವರಿಗೆ ವಿಶೇಷ ಪೂಜೆ ನಡೆಯಿತು.

ಯುಗಾದಿ ಹಬ್ಬದ ನಂತರ ಬರುವ ಶ್ರೀರಾಮನವಮಿಯಂದು ಭಕ್ತರು ಶ್ರೀರಾಮನಿಗೆ ಭಕ್ತಿಯಿಂದ ಪೂಜೆ ನೆರವೇರಿಸಿ ಶ್ರೀರಾಮ ಭಕ್ತರು ರಾಸಾಯನ, ಕೋಸಂಬರಿ, ನೀರು ಮಜ್ಜಿಗೆ, ಪಾನಕ ತಯರಿಸಿ ಸಾರ್ವಜನಿಕರು, ಭಕ್ತರಿಗೆ ವಿತರಿಸಿದರು.ಪಟ್ಟಣದ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ, ಕೋದಂಡರಾಮ, ಪೇಟೆ ರಾಮಮಮದಿರ, ಲಕ್ಷ್ಮಿ ದೇವಾಲಯ ಸೇರಿದಂತೆ ಹಲವರು ವೃತ್ತಗಳಲ್ಲಿ ಶ್ರೀರಾಮನ ಭಾವ ಚಿತ್ರವಿರಿಸಿ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು. ಬೆಳಗೊಳ ಆಂಜನೇಯ, ಮರಳಗಾಲ ಮತ್ಸ್ಯಾಂಜನೇಯ, ಗಂಜಾಂ ರಾಮಂದಿರ ಸೇರಿದಂಥೆ ಹಲವಾರು ಗ್ರಾಮಗಳಲ್ಲಿ ಶ್ರೀರಾಮ ದೇವರಿಗೆ ವಿಶೇಷ ಪೂಜೆಗಳು ಜರುಗಿದವು.