ದಾಬಸ್‍ಪೇಟೆ: ಯಾವುದಕ್ಕೆ ನಾಶ ಇಲ್ಲವೋ ಅದು ಅಕ್ಷರ. ಇಡೀ ಸೃಷ್ಟಿ ನಿಂತಿರುವುದು ಅಕ್ಷರದಿಂದ. ಇದಕ್ಕೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ಜಗತ್ತು ನಿಂತಿರುವುದು ಅಕ್ಷರದಿಂದ. ಅಕ್ಷರದಿಂದಲೇ ಜಗತ್ತು ಉಗಮ. ಕಣ್ಣಿಗೆ ಕಾಣುವ ಸಕಲ ಜೀವರಾಶಿಗಳಲ್ಲೂ ಅಕ್ಷರ ಅಡಕವಾಗಿದೆ ಎಂದು ಸೋಮೇಶ್ವರ ದೇವಾಲಯದ ಪ್ರಧಾನ ಅರ್ಚಕ ಬಸವರಾಜು ತಿಳಿಸಿದರು

ದಾಬಸ್‍ಪೇಟೆ: ಯಾವುದಕ್ಕೆ ನಾಶ ಇಲ್ಲವೋ ಅದು ಅಕ್ಷರ. ಇಡೀ ಸೃಷ್ಟಿ ನಿಂತಿರುವುದು ಅಕ್ಷರದಿಂದ. ಇದಕ್ಕೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ಜಗತ್ತು ನಿಂತಿರುವುದು ಅಕ್ಷರದಿಂದ. ಅಕ್ಷರದಿಂದಲೇ ಜಗತ್ತು ಉಗಮ. ಕಣ್ಣಿಗೆ ಕಾಣುವ ಸಕಲ ಜೀವರಾಶಿಗಳಲ್ಲೂ ಅಕ್ಷರ ಅಡಕವಾಗಿದೆ ಎಂದು ಸೋಮೇಶ್ವರ ದೇವಾಲಯದ ಪ್ರಧಾನ ಅರ್ಚಕ ಬಸವರಾಜು ತಿಳಿಸಿದರು.

ಪಟ್ಟಣದ ವಿಕೇರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಕ್ಷರಾಭ್ಯಾಸ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಿಗೆ ಯಾರೇ ಶಿಕ್ಷಣ ಕಲಿಸಿದರೂ ಮೊದಲು ತಾಯಿಯಿಂದ ಕಲಿಯುವಂತಹ ಶಿಕ್ಷಣಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ಪೂರ್ವಿಕರು ಅಕ್ಷರ ಕಲಿಯುವಾಗ ಗುರುಕುಲದಲ್ಲಿ ಮರಳಿನ ಮೇಲೆ ಹಾಗೂ ಅಕ್ಕಿಯ ಮೇಲೆ ಅಕ್ಷರ ಬರೆಸಿ ಅಕ್ಷರಭ್ಯಾಸ ಮಾಡುತ್ತಿದ್ದರು. ಈ ಕ್ರಿಯೆ ಕೆಲ ಶಾಲೆಗಳಲ್ಲಿ ಇಂದಿಗೂ ಆಚರಣೆಯಲ್ಲಿದೆ ಎಂದರು.

ಶಾಲಾ ಸಂಸ್ಥಾಪಕ ಅಧ್ಯಕ್ಷ ಅಂಚೆಮನೆ ರಾಜಶೇಖರ್ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಆಸೆ ಪ್ರತಿ ಪೋಷಕರಲ್ಲಿಯೂ ಇರುತ್ತದೆ. ಅಕ್ಷರಾಭ್ಯಾಸದ ಸಮಯದಲ್ಲಿ ಇರುವ ಆಸಕ್ತಿ ಮಗುವಿನ ಹಂತಹಂತದ ಬೆಳವಣಿಗೆಯಲ್ಲಿಯೂ ಇರಬೇಕು ಎಂದು ಕಿವಿ ಮಾತು ಹೇಳಿದರು.

ಕಾರ್ಯದರ್ಶಿ ಸ್ವರ್ಣಾಂಬ ಮಾತನಾಡಿ, ಮಗು ಮಾತೃಭಾಷೆಯಲ್ಲಿ ಮಾತನಾಡುವುದನ್ನು ಕಲಿತಿರುತ್ತದೆ. ಮಗುವಿಗೆ ಮೊದಲು ಮಾತೃ ಭಾಷೆಯಲ್ಲಿ ಅಕ್ಷರಭ್ಯಾಸ ಮಾಡಿಸಿದರೆ ತನಗರ್ಥವಾಗುವ ಭಾಷೆಯಲ್ಲಿ ಕಲಿಕೆಗೆ ಹೆಚ್ಚು ಆಸಕ್ತಿ ತೋರುತ್ತದೆ. ಕಲಿತ ನಂತರ ಇತರೆ ಭಾಷೆಯಲ್ಲಿ ಕಲಿಕೆಗೆ ಒತ್ತು ನೀಡುವುದು ಸೂಕ್ತ ಎಂದರು.

ಪೋಟೋ 1 :

ದಾಬಸ್‍ಪೇಟೆಯ ವಿಕೇರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಪೋಷಕರು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು.