ಸಾರಾಂಶ
ಗುಬ್ಬಿ ತಾಲೂಕಿನ ಅಳಿಲಘಟ್ಟ ಗ್ರಾಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಯಾದವ ಜನಾಂಗದವರು ಶನಿವಾರ ಆಚರಣೆ ಮಾಡಿದರು. ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು.
ಕನ್ನಡಪ್ರಭ ವಾರ್ತೆ ಗುಬ್ಬಿ
ಗುಬ್ಬಿ ತಾಲೂಕಿನ ಅಳಿಲಘಟ್ಟ ಗ್ರಾಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಯಾದವ ಜನಾಂಗದವರು ಶನಿವಾರ ಆಚರಣೆ ಮಾಡಿದರು. ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು.ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ಶ್ರೀ ಕೃಷ್ಠಜನ್ಮಾಷ್ಠಮಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ನಂತರ ಅಳಿಲಘಟ್ಟ ಬಸ್ ನಿಲ್ದಾಣದಲ್ಲಿ ಶ್ರೀ ಕೃಷ್ಣನ ದೊಡ್ಡ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ ಅದ್ಧೂರಿಯಾಗಿ ಶ್ರೀ ಕೃಷ್ಠಜನ್ಮಾಷ್ಠಮಿಯನ್ನು ಆಚರಣೆ ಮಾಡಿದರು. ಯಾದವ ಸಂಘದ ಅಧ್ಯಕ್ಷ ವಾಸುದೇವ ಮಾತನಾಡಿ ಭಾರತದಲ್ಲಿ ಶ್ರೀ ಕೃಷ್ಠಜನ್ಮಾಷ್ಠಮಿ ತನ್ನದೇ ಆದ ವಿಶೇಷತೆಗಳನ್ನು ಹೊಂದಿದ್ದು ಮನೆ ಮನೆಗಳಲ್ಲಿ ಪುಟ್ಟ ಕಂದಮ್ಮಗಳು ಕೃಷ್ಣ ರಾಧೆಯರ ವೇಷಭೂಷಣ ತೊಟ್ಟು ಸಂಭ್ರಮಿಸುವ ಹಬ್ಬ. ಶ್ರೀಕೃಷ್ಣ ಲೋಕ ಕಲ್ಯಾಣಕ್ಕಾಗಿ ಮಾಡಿದ ಸಾಧನೆಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳು ವಿವಿಧ ವೇಷ ಭೂಷಣಗಳನ್ನು ಧರಿಸಿ ಕೃಷ್ಣ ಜಯಂತಿಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂಧರ್ಭದಲ್ಲಿ ಮುಖಂಡರಾದ ಶ್ರೀಧರ್ , ವಿನಯ್ ಕುಮಾರ್ , ಹಾಗೂ ಯಾದವ ಜನಾಂಗದ ಮುಖಂಡರುಗಳು ಭಾಗವಹಿಸಿದ್ದರು.