ದೇಶದ ಸಾಂಸ್ಕೃತಿಕ ಮಹತ್ವ ಯುವ ಪೀಳಿಗೆ ಅರಿಯಬೇಕುʼ

| Published : Jan 27 2025, 12:47 AM IST

ದೇಶದ ಸಾಂಸ್ಕೃತಿಕ ಮಹತ್ವ ಯುವ ಪೀಳಿಗೆ ಅರಿಯಬೇಕುʼ
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆ ಜೆಎಸ್‌ಎಸ್‌ ಕಾಲೇಜಿನಲ್ಲಿ ೭೬ನೇ ಗಣ ರಾಜ್ಯೋತ್ಸವದಲ್ಲಿ ಪ್ರಾಂಶುಪಾಲೆ ಡಾ.ಮಹದೇವಮ್ಮ ಪಿ ಮಾತನಾಡಿದರು.

ಗುಂಡ್ಲುಪೇಟೆ: ದೇಶದ ಸಾಂವಿಧಾನಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಇಂದಿನ ಯುವ ಪೀಳಿಗೆ ತಿಳಿಯಬೇಕಾಗಿದೆ ಎಂದು ಜೆಎಸ್‌ಎಸ್‌ ಕಾಲೇಜಿನ ಅಧೀಕ್ಷಕ ಪರಮೇಶ್ವರಪ್ಪ ಎನ್.ಪಿ ಹೇಳಿದರು.ಪಟ್ಟಣದ ಜೆಎಸ್‌ಎಸ್‌ ಕಾಲೇಜಿನಲ್ಲಿ ೭೬ನೇ ಗಣ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ದ್ವಜಾರೋಹಣ ನೆರವೇರಿಸಿ ಮಾತನಾಡಿ, ಜಗತ್ತಿನ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಒಕ್ಕೂಟ ವ್ಯವಸ್ಥೆ, ಉದಾರವಾದಿ, ಸಮಾಜವಾದಿ, ಜಾತ್ಯಾತೀತ ತತ್ವ ಆಧರಿಸಿ ರೂಪುಗೊಂಡಿದೆ ಎಂದರು. ಭಾರತ ಗಣರಾಜ್ಯವಾಗಲು ಡಾ.ಬಿ.ಆರ್.ಅಂಬೇಡ್ಕರ್‌ ಅವರ ಪಾತ್ರ ಮುಖ್ಯವಾಗಿದೆ. ಮಹಾತ್ಮ ಗಾಂಧಿ, ಜವಹಾರ್‌ಲಾಲ್ ನೆಹರು, ವಲ್ಲಭಬಾಯಿ ಪಟೇಲ್ ಸೇರಿದಂತೆ ಹಲವರ ಕೊಡುಗೆ ಅನನ್ಯವಾದುದ್ದು ಎಂದು ಸ್ಮರಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕ ಎಂ.ಬಸವರಾಜು ಮಾತನಾಡಿ, ಭಾರತ ಹಲವು ಧರ್ಮ, ಜಾತಿ, ಭಾಷೆ ಹೊಂದಿದೆ. ವೈವಿಧ್ಯತೆಯಲ್ಲಿ ಏಕತೆ ಒಳಗೊಂಡಿದೆ. ಭಾರತದ ಸಂವಿಧಾನ ಜಾರಿಗೆ ಬಂದ ಈ ದಿನ ನಮ್ಮೆಲ್ಲರಿಗೂ ಹೆಮ್ಮೆಯ ಸುದಿನ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ.ಮಹದೇವಮ್ಮ ಪಿ ಮಾತನಾಡಿ, ನಮ್ಮದು ಲಿಖಿತ ಸಂವಿಧಾನ. ಅನೇಕ ಮಹನೀಯರ ಬಲಿದಾನ, ತ್ಯಾಗ ಶ್ರಮದಿಂದ ಭಾರತ ಸ್ವಾತಂತ್ರ್ಯ ಪಡೆದಿದೆ. ಸಂವಿಧಾನ ರಚನೆಯಾಗಿದ್ದು, ತ್ಯಾಗ ಮಾಡಿದ ಮಹನೀಯರ ಮನದಲ್ಲಿ ನೆನೆದು, ಎಲ್ಲರೂ ಜವಾಬ್ದಾರಿಯಿಂದ ಭಾರತ ಮುನ್ನಡೆಸಬೇಕೆಂದರು. ಕಾರ್ಯಕ್ರಮದಲ್ಲಿ ಪದವಿ,ಪದವಿ ಪೂರ್ವ ಮತ್ತು ಪ್ರೌಢಶಾಲೆಯ ಅಧ್ಯಾಪಕರು, ಅಧ್ಯಾಪಕೇತರು, ವಿದ್ಯಾರ್ಥಿಗಳು ಹಾಜರಿದ್ದರು.