ಸಾರಾಂಶ
ದಾಬಸ್‍ಪೇಟೆ: ಭಾರತ ಬ್ರಿಟೀಷರ ಕಪಿಮುಷ್ಠಿಯಿಂದ ಮುಕ್ತಿ ಪಡೆದ ಶುಭದಿನವೇ ಸ್ವಾತಂತ್ರ್ಯ ದಿನವಾಗಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಎಲ್ಲ ಮಹನೀಯರನ್ನು ಸ್ಮರಿಸುವ ಮೂಲಕ ಪ್ರತಿಯೊಬ್ಬರೂ ಭವ್ಯ ಭಾರತದ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಎಂದು ಉಪತಹಸೀಲ್ದಾರ್ ಶಶಿಧರ್ ತಿಳಿಸಿದರು.

ಪಟ್ಟಣದ ನಾಡಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಇಂದಿನ ಯುವಪೀಳಿಗೆ ದೇಶಕ್ಕಾಗಿ ಹೋರಾಡಿದ ಹುತಾತ್ಮರನ್ನು ಸ್ಮರಿಸುತ್ತಾ ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಸ್ವಾತಂತ್ರ್ಯವನ್ನು ಸರಿಯಾಗಿ ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.ರಾಜಸ್ವನಿರೀಕ್ಷಕರಾದ ಮುನಿರಾಜು ಹಾಗೂ ಸುಂದರ್ ರಾಜು ಮಾತನಾಡಿ ವೈವಿಧ್ಯತೆಯಲ್ಲಿ ಏಕತೆ ಮೈಗೂಡಿಸಿಕೊಂಡಿರುವ ಭಾರತ ಸರ್ವಧರ್ಮ ಸಹಿಷ್ಣುತೆಗೆ, ಶಾಂತಿ, ನೆಮ್ಮದಿಗೆ ಹೆಸರುವಾಸಿಯಾಗಿದೆ. ಸ್ವಾತಂತ್ರ್ಯ ಹೋರಾಟಗಾರರ, ಹುತಾತ್ಮರ ಜೀವನದ ಹೋರಾಟದ ಹಾದಿಯಲ್ಲಿ ಸಾಗಿ ಬಂದ ಪರಂಪರೆಯನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಲೆಕ್ಕಿಗರಾದ ಬಾಲಕೃಷ್ಣ, ಲೋಕೇಶ್, ಗೋಪಾಲ್, ಮಮತಾ, ವಿದ್ಯಾ, ಪುಷ್ಪಾ, ಶಾನುಬೋಗರಾದ ತಟ್ಟೆಕೆರೆ ನಾಗರಾಜು, ಸಿಬ್ಬಂದಿ ವರ್ಗದವರಾದ ಗಂಗಾಧರ್, ಹನುಮಂತರಾಜು, ಗ್ರಾಮ ಸಹಾಯಕರಾದ ಪ್ರಕಾಶ್, ನಾಗರಾಜು ಇತರರು ಇದ್ದರು.-------------
ಪೋಟೋ 1:ದಾಬಸ್‍ಪೇಟೆ ಪಟ್ಟಣದ ನಾಡಕಚೇರಿಯಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಉಪತಹಸೀಲ್ದಾರ್ ಶಶಿಧರ್ ದ್ವಜಾರೋಹಣ ನೆರವೇರಿಸಿದರು.