ಇತಿಹಾಸ ಕುರಿತು ಯುವಜನತೆಗೆ ಅರಿವು ಅಗತ್ಯ

| Published : Feb 16 2025, 01:46 AM IST

ಸಾರಾಂಶ

ನಮ್ಮಲ್ಲಿ ಲಭ್ಯವಿರುವ ಪುರಾತನ ವಸ್ತುಗಳು, ಶಿಲಾ ಶಾಸನಗಳು, ತಾಮ್ರಪಟಗಳು, ಕಟ್ಟಡಗಳು, ಪುರಾತನ ಕಡತಗಳು, ನಾಣ್ಯಗಳು ನಮ್ಮ ನಾಡಿನ ಗತ ಇತಿಹಾಸವನ್ನು ಹೇಳುತ್ತವೆ. ಇಂತಹ ಅಮೂಲ್ಯ ಪುರಾತನ ಉಳಿಕೆಗಳು ನಾಶವಾಗದಂತೆ ರಕ್ಷಿಸುವ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮವೇ ಐತಿಹಾಸಿಕ ಪರಂಪರೆ ಉಳಿಸಬೇಕು

ಕನ್ನಪ್ರಭ ವಾರ್ತೆ ಬಾಗೇಪಲ್ಲಿ

ನಮ್ಮ ಸಂಸ್ಕೃತಿ, ಪ್ರಾಚೀನ ದೇವಾಲಯಗಳು, ಸ್ಮಾರಕ ಕುರುಹುಗಳನ್ನ ಸಂರಕ್ಷಣೆ ಹಾಗೂ ಇತಿಹಾಸದ ಬಗ್ಗೆ ಯುವಪೀಳಿಗೆಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಶಾಸನ ತಜ್ಞರು ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರೊ.ಕೆ.ಆರ್.ನರಸಿಂಹನ್ ಅಭಿಪ್ರಾಯ ಹೇಳಿದರು.

ಪಟ್ಟಣದ ಜ್ಞಾನದೀಪ್ತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇತಿಹಾಸಕ್ಕೆ ಆಧಾರಗಳಾಗಿರುವ ಹಾಗೂ ನಾಡಿನ ಗತವೈಭವ ಸಾರುವ ಶಿಲ್ಪಗಳು , ನಾಣ್ಯಗಳು, ಕೋಟೆ ಕೊತ್ತಲಗಳನ್ನು ರಕ್ಷಿಸಲು ಯುವಜನತೆ ಮುಂದಾಗಬೇಕಾಗಿದೆ ಎಂದರು.

ಪುರಾತನ ಸ್ಮಾರಕಗಳನ್ನು ರಕ್ಷಿಸಿ

ಕರ್ನಾಟಕ ಇತಿಹಾಸ ಅಕಾಡೆಮಿ ತಾಲೂಕು ಅಧ್ಯಕ್ಷ ಬಿ.ಆರ್.ಕೃಷ್ಣ ಮಾತನಾಡಿ, ನಮ್ಮಲ್ಲಿ ಲಭ್ಯವಿರುವ ಪುರಾತನ ವಸ್ತುಗಳು, ಶಿಲಾ ಶಾಸನಗಳು, ತಾಮ್ರಪಟಗಳು, ಕಟ್ಟಡಗಳು, ಪುರಾತನ ಕಡತಗಳು, ನಾಣ್ಯಗಳು ನಮ್ಮ ನಾಡಿನ ಗತ ಇತಿಹಾಸವನ್ನು ಹೇಳುತ್ತವೆ. ಇಂತಹ ಅಮೂಲ್ಯ ಪುರಾತನ ಉಳಿಕೆಗಳು ನಾಶವಾಗದಂತೆ ರಕ್ಷಿಸುವ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮವೇ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.

ತಾಲೂಕಿನಲ್ಲಿ ಇದುವರೆವಿಗೂ 85 ಶಾಸನಗಳು ಬೆಳಕು ಕಂಡು ಪ್ರಕಟಿತವಾಗಿವೆ. ಅಪ್ರಕಟಿತ ಶಾಸನಗಳು, ಮಾಸ್ತಿಗಲ್ಲು, ವೀರಗಲ್ಲು ಮತ್ತಿತರೆ ಸ್ಮಾರಕಗಳು ಬೆಳಕಿಗೆ ಬರುತ್ತಲೇ ಇವೆ. ಜಡಮಡುಗು ಅಕ್ಕಮ್ಮ ಬೆಟ್ಟದಲ್ಲಿ ಐತಿಹಾಸಿಕ ಬೃಹತ್ ಶಿಲಾಯುಗದ ಮಾನವ ರೂಪೀಕರಿಸಲಾದ ಕಲ್ಗೋರಿಗಳು ಇವೆ. ಅವುಗಳ ಸಂರಕ್ಷಣೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಅಕಾಡೆಮಿ ಶಾಸನ ಸಂಶೋಧಕರಾದ ಧನ್ಪಾಲ್, ನಿವೃತ್ತಿ ಉಪನ್ಯಾಸಕರಾದ ಎ.ಕೆ.ನಿಂಗಪ್ಪ, ಕೆ,ಟಿ.ವೀರಾಂಜನೇಯಲು, ರಾಮಯ್ಯ, ಶ್ರೀನಾಥ್, ಪಿ.ವೆಂಕಟರಾಮ್, ಎ.ನಂಜುಂಡಪ್ಪ, ಸೈಯದ್ ಸಿದ್ದಿಕ್, ಪಿ.ಮಂಜುನಾಥರೆಡ್ಡಿ ಮತ್ತಿತರರು ಇದ್ದರು.