ಕೆಪಿಸಿಸಿ ಸದಸ್ಯ ಯೋಗೇಶ್.ವಿ ಮಾತನಾಡಿ ದೇಶದ ಸ್ವಾತಂತ್ರ ಸಂಗ್ರಾಮದಲ್ಲಿ ಗಾಂಧೀಜಿ ಪಾತ್ರ ಮಹತ್ವವಾದುದು. ಶಾಂತಿ, ಅಹಿಂಸೆ, ಸತ್ಯ, ಆದರ್ಶ ತತ್ವಗಳನ್ನೇ ಆಯುಧವನ್ನಾಗಿ ಮಾಡಿಕೊಂಡು ಹೋರಾಟ ಮಾಡಿದವರು ಗಾಂಧೀಜಿ. ಅವರ ತತ್ವಾದರ್ಶವನ್ನು ನಾವೆಲ್ಲರೂ ಪಾಲಿಸಬೇಕು. ಅದೇ ರೀತಿ ಲಾಲ್‌ಬಹದ್ದೂರ್ ಶಾಸ್ತ್ರೀ ದೇಶದ ಪ್ರಧಾನಿಯಾಗಿ ರೈತಪರ ನಿಧಾರಗಳನ್ನು ಕೈಗೊಂಡು ದೇಶ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಕಾರಣರಾದರು ಎಂದು ತಿಳಿಸಿದರು.
ಕನ್ನಡಪ್ರಭವಾರ್ತೆ ತಿಪಟೂರು
ಇಂದು ಪ್ರಪಂಚದಾದ್ಯಂತ ಹಾಗೂ ಭಾರತದಲ್ಲಿಯೂ ಹಿಂಸೆ ಹೆಚ್ಚಾಗುತ್ತಿದೆ. ಹಿಂಸೆ ಕಡಿಮೆಯಾಗಿ ಬಾಂಧವ್ಯ ವೃದ್ಧಿಯಾಗಬೇಕಾದರೆ ಎಲ್ಲರೂ ಗಾಂಧೀಜಿ ಆದರ್ಶ, ತತ್ವ ಅಳವಡಿಸಿಕೊಳ್ಳಬೇಕು. ಅವರು ತೋರಿಸಿದ ಅಹಿಂಸಾ ಮಾರ್ಗದಲ್ಲಿ ನಡೆಯಬೇಕು ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರೀ ಜಯಂತಿಯಲ್ಲಿ ಮಾತನಾಡಿ, ಗಾಂಧೀಜಿ ಸ್ವಾತಂತ್ರ್ಯ ಪೂರ್ವದಲ್ಲಿ ತಿಪಟೂರಿಗೆ ಭೇಟಿ ಕೊಟ್ಟಾಗ ತಂಗಿದ್ದ ಭವನ ನವೀಕರಿಸಿ ಸ್ಮಾರಕ ಮಾಡಿದ್ದು ನನಗೆ ತೃಪ್ತಿ ತಂದಿದೆ. ಗಾಂಧೀಜಿ ಬಗ್ಗೆ ಈಗಿನ ಯುವ ಪೀಳಿಗೆ ಬಹಳಷ್ಟು ವಿಷಯಗಳನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಗಾಂಧೀಜಿ ಅಹಿಂಸಾ ಮಾರ್ಗದಿಂದಲೇ ಪರಕೀಯರ ಸಂಕೋಲೆಯಿಂದ ಭಾರತ ಮುಕ್ತಗೊಳಿಸಿದರು. ಲಾಲ್‌ಬಹದ್ದೂರ್ ಶಾಸ್ತ್ರೀ ದೇಶದ ಎರಡನೇ ಪ್ರಧಾನಿಯಾಗಿ ಮಾದರಿ ಆಡಳಿತ ನೀಡಿದರು. ರೈತರು ಸೈನಿಕರು ದೇಶದ ಬೆನ್ನೆಲುಬು ಎಂಬುದನ್ನರಿತು ಜೈ ಜವಾನ್–ಜೈಕಿಸಾನ್ ಘೋಷಣೆ ಮಾಡಿದರು ಎಂದು ಸ್ಮರಿಸಿದರು.
ಕೆಪಿಸಿಸಿ ಸದಸ್ಯ ಯೋಗೇಶ್.ವಿ ಮಾತನಾಡಿ ದೇಶದ ಸ್ವಾತಂತ್ರ ಸಂಗ್ರಾಮದಲ್ಲಿ ಗಾಂಧೀಜಿ ಪಾತ್ರ ಮಹತ್ವವಾದುದು. ಶಾಂತಿ, ಅಹಿಂಸೆ, ಸತ್ಯ, ಆದರ್ಶ ತತ್ವಗಳನ್ನೇ ಆಯುಧವನ್ನಾಗಿ ಮಾಡಿಕೊಂಡು ಹೋರಾಟ ಮಾಡಿದವರು ಗಾಂಧೀಜಿ. ಅವರ ತತ್ವಾದರ್ಶವನ್ನು ನಾವೆಲ್ಲರೂ ಪಾಲಿಸಬೇಕು. ಅದೇ ರೀತಿ ಲಾಲ್‌ಬಹದ್ದೂರ್ ಶಾಸ್ತ್ರೀ ದೇಶದ ಪ್ರಧಾನಿಯಾಗಿ ರೈತಪರ ನಿಧಾರಗಳನ್ನು ಕೈಗೊಂಡು ದೇಶ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಕಾರಣರಾದರು ಎಂದು ತಿಳಿಸಿದರು.ಕಾಂಗ್ರೆಸ್ ತಾಲೂಕು ಅಧ್ಯಕ್ಷ ಮಡೇನೂರು ಕಾಂತರಾಜು ಮಾತನಾಡಿದರು. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಿಖಿಲ್ ರಾಜಣ್ಣ, ನಗರ ಅಧ್ಯಕ್ಷ ಟಿ.ಎನ್.ಪ್ರಕಾಶ್, ಮುಖಂಡರಾದ ತನ್ವೀರ್ ಉಲ್ಲಾ ಷರೀಫ್ ಮಾತನಾಡಿದರು.