ದೇಶದ ಬೆನ್ನೆಲುಬಾಗಬೇಕಾದ ಯುವಜನರು ಮಾದಕ ವ್ಯಸನಿಗಳಾಗಿದ್ದಾರೆ

| Published : Sep 23 2024, 01:29 AM IST

ದೇಶದ ಬೆನ್ನೆಲುಬಾಗಬೇಕಾದ ಯುವಜನರು ಮಾದಕ ವ್ಯಸನಿಗಳಾಗಿದ್ದಾರೆ
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೂರು ಬಿಕ್ಕೋಡಿನ ಸರ್ಕಾರ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪ್ರವೀಣ್ ಮಾತನಾಡಿ, ಅಪ್ರಾಪ್ತ ವಯಸ್ಸಿನ ಮಕ್ಕಳು ಮಾದಕ ವಸ್ತುಗಳ ಸೇವನೆಯಿಂದ ಅನೇಕ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಧೂಮಪಾನ ಮದ್ಯಪಾನ ಗಾಂಜಾ ಹಾಗೂ ಗುಟ್ಕಾ ಸೇವನೆಯಿಂದಾಗಿ ಹೃದಯ ಸಂಬಂಧಿ ತೊಂದರೆ ಮಾತ್ರವಲ್ಲದೆ ದೇಹದ ಇತರೆ ಅಂಗಾಂಗಗಳು ಹಾನಿಯಾಗಿ ಸಾವು ಸಂಭವಿಸುವುದು. ಅಪ್ರಾಪ್ತ ವಯಸ್ಸಿನ ಮಕ್ಕಳು ಮಾದಕ ವಸ್ತುಗಳಿಂದ ಅದಷ್ಟು ದೂರವಿದ್ದು ಓದಿನ ಕಡೆ ಗಮನಹರಿಸಿಕೊಂಡು ತಮ್ಮ ಸುಂದರ ಜೀವನವನ್ನು ರೂಪಿಸಿಕೊಳ್ಳುಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಬೇಲೂರು

ದೇಶದ ಬೆನ್ನೆಲುಬಾಗಿರುವ ಇಂದಿನ ಯುವ ಪೀಳಿಗೆ ದೇಹಕ್ಕೆ ಹಾನಿಯುಂಟು ಮಾಡುವಂತಹ ಮಾದಕ ವಸ್ತುಗಳಾದ ಧೂಮಪಾನ ಮದ್ಯಪಾನ, ಗಾಂಜಾ, ಗುಟ್ಕಾ ಸೇವನೆಯ ಮೂಲಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಡಾ. ನವೀನ್ ಚಂದ್ರಶೆಟ್ಟಿ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಬಿಕ್ಕೋಡು ಲಯನ್ಸ್ ಸೇವಾ ಸಮಿತಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಖಿಲ ಕರ್ನಾಟಕ ಜನಾ ಜಾಗೃತಿ ವೇದಿಕೆ ಬೆಳ್ತಂಗಡಿ ಜಿಲ್ಲಾ ಜನಾ ಜಾಗೃತಿ ವೇದಿಕೆ ಹಾಸನ ಗ್ರಾಮ ಪಂಚಾಯಿತಿ ಬಿಕ್ಕೋಡು ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಾಗೂ ಮಾದಕ ವಸ್ತುಗಳ ವಿರೋಧಿ ಜಾಥ ಸಮಾರಂಭದಲ್ಲಿ ಮಾತನಾಡಿದ ಅವರು, ನಗರದ ಕೆಲವು ಗಲ್ಲಿ ಗಲ್ಲಿಗಳಲ್ಲಿ ಸಿಗುತ್ತಿದ್ದ ಕೆಲವು ಮಾದಕ ವಸ್ತುಗಳು ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲೂ ಯುವ ಜನತೆಯ ಕೈ ಸೇರುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬಿಕ್ಕೋಡು ಸರ್ಕಾರ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪ್ರವೀಣ್ ಮಾತನಾಡಿ, ಅಪ್ರಾಪ್ತ ವಯಸ್ಸಿನ ಮಕ್ಕಳು ಮಾದಕ ವಸ್ತುಗಳ ಸೇವನೆಯಿಂದ ಅನೇಕ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಧೂಮಪಾನ ಮದ್ಯಪಾನ ಗಾಂಜಾ ಹಾಗೂ ಗುಟ್ಕಾ ಸೇವನೆಯಿಂದಾಗಿ ಹೃದಯ ಸಂಬಂಧಿ ತೊಂದರೆ ಮಾತ್ರವಲ್ಲದೆ ದೇಹದ ಇತರೆ ಅಂಗಾಂಗಗಳು ಹಾನಿಯಾಗಿ ಸಾವು ಸಂಭವಿಸುವುದು. ಅಪ್ರಾಪ್ತ ವಯಸ್ಸಿನ ಮಕ್ಕಳು ಮಾದಕ ವಸ್ತುಗಳಿಂದ ಅದಷ್ಟು ದೂರವಿದ್ದು ಓದಿನ ಕಡೆ ಗಮನಹರಿಸಿಕೊಂಡು ತಮ್ಮ ಸುಂದರ ಜೀವನವನ್ನು ರೂಪಿಸಿಕೊಳ್ಳುಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ಎಚ್ ಆರ್‌, ಇತ್ತೀಚೆಗೆ ಹದಿಹರೆಯದ ವಯಸ್ಸಿನ ಮಕ್ಕಳಲ್ಲೇ ಅತಿಹೆಚ್ಚು ಅನಾರೋಗ್ಯಕರ ಪ್ರಕರಣಗಳು ಕಂಡುಬರುತ್ತಿವೆ. ತಂಬಾಕು ಹಾಗೂ ಮದ್ಯಪಾನ ಸೇವನೆಯಿಂದ ಮಕ್ಕಳ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಸೇವನೆಯನ್ನು ತ್ಯಜಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮಚಂದ್ರ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಧಿಕಾರಿ ಶಿವರಾಜ್, ಜನಜಾಗೃತಿ ವೇದಿಕೆಯ ಉಮಾನಾಥ, ಸುವರ್ಣ, ಸೋಮಶೇಖರ್, ಪಿಡಿಒ ತಾರಾನಾಥ್ ನಾಯಕ್, ಶಿಕ್ಷಕರಾದ ಸೈಯದ್ ಖಲೀಲ್, ಓಂಕಾರಪ್ಪ, ತಿಪ್ಪೇಸ್ವಾಮಿ, ಲಯನ್ಸ್ ಸೇವಾ ಸಮಿತಿ ಸದಸ್ಯರಾದ ಶಿವಶಂಕರ್‌, ಮಂಜುನಾಥ್, ರಘು, ಬಸವರಾಜು, ರತನ್ ಕುಮಾರ್ ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.