ಸಮಾಜ ತಿದ್ದುವ ಶಕ್ತಿ ರಂಗಭೂಮಿಗಿದೆ: ಸಾಣೆಹಳ್ಳಿ ಶ್ರೀ

| Published : Jan 11 2025, 12:48 AM IST

ಸಮಾಜ ತಿದ್ದುವ ಶಕ್ತಿ ರಂಗಭೂಮಿಗಿದೆ: ಸಾಣೆಹಳ್ಳಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಅಜ್ಜಂಪುರ, ಜನರನ್ನು ಜಾಗೃತಗೊಳಿಸಿ ಮನಸ್ಸಿಗೆ ಚೈತನ್ಯ ತುಂಬುತ್ತಾ ಸಮಾಜವನ್ನು ತಿದ್ದುವಂತಹ ಶಕ್ತಿ ರಂಗಭೂಮಿಗಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿ ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ಬಿ.ಎಂ ಏಕೋರಾಮಸ್ವಾಮಿ ನೆನಪಿನ ರಂಗೋತ್ಸವ 2025

ಕನ್ನಡಪ್ರಭ ವಾರ್ತೆ, ಅಜ್ಜಂಪುರ

ಜನರನ್ನು ಜಾಗೃತಗೊಳಿಸಿ ಮನಸ್ಸಿಗೆ ಚೈತನ್ಯ ತುಂಬುತ್ತಾ ಸಮಾಜವನ್ನು ತಿದ್ದುವಂತಹ ಶಕ್ತಿ ರಂಗಭೂಮಿಗಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರ ಬಿ.ಎಂ ಏಕೋರಾಮಸ್ವಾಮಿ ನೆನಪಿನ ರಂಗೋತ್ಸವ 2025ರ ಸಾನ್ನಿಧ್ಯ ವಹಿಸಿ ಮಾತನಾಡಿ, ಅಜ್ಜಂಪುರದಲ್ಲಿ ಸರ್ಕಾರಿ ಕಚೇರಿ ಆರಂಭಿಸಿ ಶಾಸಕರು ಆಡಳಿತಕ್ಕೆ ಚುರುಕು ನೀಡಬೇಕು. ಇಲ್ಲಿನ ಅಮೃತ ಮಹಲ್ ಸಂವರ್ಧನಾ ಕೇಂದ್ರದ ಪುನಃಶ್ಚೇತನ, ಆಧ್ಯಾತ್ಮಿಕ ಕೇಂದ್ರ ಶಿವಾನಂದಾಶ್ರಮದ ಅಭಿವೃದ್ಧಿ ಹಾಗೂ ಶಿಥಿಲ ಗೊಂಡಿರುವ ಕಲಾ ಸೇವಾ ಸಂಘ ಕಟ್ಟಡ ತೆರವುಗೊಳಿಸಿ ರಂಗಮಂದಿರ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಗೆಳೆಯರ ಬಳಗ ರಂಗ ತಂಡ ಅಧ್ಯಕ್ಷ ಎ.ಸಿ ಚಂದ್ರಪ್ಪ ಮಾತನಾಡಿ ಇದು ಕಲೆಯ ತವರೂರು. ಕಲಾವಿದರ ತಾಣ ಸಾಂಸ್ಕೃತಿಕ ಚಟುವಟಿಕೆ ಕೇಂದ್ರ. ಇಲ್ಲಿ ಕಲಾ ಚಟುವಟಿಕೆಗಳು ಮುಂದುವರಿಯಬೇಕು ಎಂಬ ಸದುದ್ದೇಶದಿಂದ ರಂಗೋತ್ಸವ ನಡೆಸುತ್ತಿದ್ದೇವೆ ಎಂದರು.ಶಾಸಕ ಜಿ.ಎಚ್ ಶ‍್ರೀನಿವಾಸ್, ಸಾಹಿತಿ ಚಟ್ನಳ್ಳಿ ಮಹೇಶ್, ಶಂಬೈನೂರು ಆನಂದಪ್ಪ, ಎಂ ಕೃಷ್ಣ ಮೂರ್ತಿ, ಶಿವಾನಂದ್, ಗಿರೀಶ್ ಚೌಹಾಣ್ ಮಾತನಾಡಿದರು. ರಂಗ ನಿರ್ದೇಶಕ ಕೃಷ್ಣಮೂರ್ತಿ , ನವೀನ್ ಕುಮಾರ್, ಮೋಹನ್ ಜಾದವ್, ಪ್ರಶಾಂತ್ ಇಟಗಿ ಇದ್ದರು. ಬಿ.ಎಸ್ . ನಾಗರಾಜ್ ನೆನಪಿನ ರಂಗದ್ವಾರವನ್ನು ಸಾಹಿತಿ ಚಟ್ನಳ್ಳಿ ಮಹೇಶ್, ಸ್ವಾತಂತ್ರ್ಯ ಹೋರಾಟಗಾರ ಎಸ್. ಸಿದ್ದಪ್ಪ ಮತ್ತು ರೈತ ಮಲ್ಕಣ್ಣ ನೆನಪಿನ ರಂಗವೇದಿಕೆಯನ್ನು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಧ್ರುವಕುಮಾರ್ ಉದ್ಘಾಟಿಸಿದರು. ಸಾಣೇಹಳ್ಳಿ ಶಿವ ಸಂಚಾರ 2024ರ ರಂಗ ಕಲಾವಿದರು, ಗಣೇಶ್ ಅಮೀನಗಡ ರಚನೆ ವೈ.ಡಿ. ಬದಾಮಿ ನಿರ್ದೇಶನದ ಬಂಗಾರದ ಮನುಷ್ಯ ನಾಟಕ ಪ್ರದರ್ಶಿಸಿದರು.