ರಂಗಭೂಮಿ ಸಮಾಜದ ಅಂಕು-ಡೊಂಕು ತಿದ್ದುವುದು: ಗುಮಗೇರಿ ಅಭಿಮತ

| Published : Dec 01 2024, 01:35 AM IST

ರಂಗಭೂಮಿ ಸಮಾಜದ ಅಂಕು-ಡೊಂಕು ತಿದ್ದುವುದು: ಗುಮಗೇರಿ ಅಭಿಮತ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಧನೂರಿನ ವಿಜಡಮ್ ಕಾಲೇಜಿನಲ್ಲಿ ದತ್ತಿ ಉಪನ್ಯಾಸ, ಕವಿಗೋಷ್ಠಿ ಹಾಗೂ ರಂಗಗೀತೆಗಳ ಕಾರ್ಯಕ್ರಮವನ್ನು ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಸಿಂಧನೂರು

ರಂಗಭೂಮಿಯಿಂದ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಕೆಲಸ ನಡೆಯುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ವೀರನಗೌಡ ಗುಮಗೇರಿ ಹೇಳಿದರು.

ನಗರದ ವಿಜಡಮ್ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕದ ಸಹಯೋಗದಲ್ಲಿ ನಡೆದ 2024-25ನೇ ಸಾಲಿನ ದತ್ತಿ ಉಪನ್ಯಾಸ, ಕವಿಗೋಷ್ಠಿ ಹಾಗೂ ರಂಗಗೀತೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ರಾಜಕುಮಾರ, ಕಲ್ಪನಾ, ವಜ್ರಮುನಿ, ಶಂಕರನಾಗ್, ಅನಂತನಾಗ್ ಹೀಗೆ ಅನೇಕ ಹಿರಿಯ ನಟರು ರಂಗಭೂಮಿ ನೆಲೆಯಿಂದ ಬಂದವರು. ಗುಬ್ಬಿ ವೀರಣ್ಣ ನಾಟಕ ಕಂಪನಿ, ಚಿಂದೋಡಿ ಲೀಲಾ ನಾಟಕ ಕಂಪನಿ, ಸಿಂಧನೂರಿನಲ್ಲಿ ಅಮರೇಶ್ಚರ ನಾಟಕ ಕಂಪನಿ ಇತ್ತು. ಈ ನಾಟಕ ಕಂಪನಿ ಮೃಢದೇವರ ನೇತೃತ್ವದಲ್ಲಿ ಶಿವಮೊಗ್ಗ, ಮೈಸೂರು, ಬೆಂಗಳೂರಿನಲ್ಲಿ ಪ್ರದರ್ಶನ ಮಾಡಿ ಸಹಬ್ಬಾಸ್ ಗಿರಿ ಪಡೆಯತಿತ್ತು. ಹೀಗಾಗಿ ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ಇದೆ ಎಂದರು.

ಕಲಾವಿದರಾದ ಹನುಮೇಶ ಬೇರಿಗಿ, ಮ್ಯಾದಾರಹಾಳದ ಸಣ್ಣಹನುಮನಗೌಡ ದೇವರಮನಿ, ಮಲ್ಲಪ್ಪ ಪೂಜಾರಿ ಹಸ್ಮಕಲ್, ಭಕ್ಷಿ ಧರವೇಶ್ ರಂಗಗೀತೆಗಳು ಹಾಗೂ ತತ್ವಪದದ ಹಾಡುಗಳನ್ನು ಹಾಡಿದರೆ, ರಂಗಭೂಮಿ ಹಿರಿಯ ಕಲಾವಿದರಾದ ಇಸ್ಮಾಯಿಲ್ ಸಾಬ್ ಶಕುನಿ ಪಾತ್ರದ ಡೈಲಾಗ್ಗಳನ್ನು ಹೇಳಿ ವಿದ್ಯಾರ್ಥಿಗಳಿಗೆ ಹಾಗೂ ವೇದಿಕೆ ಮೇಲಿದ್ದ ಗಣ್ಯರಿಗೆ ಮನರಂಜಿಸಿದರು.

ಅಧ್ಯಕ್ಷತೆ ವಹಿಸಿದ್ದ ಪರಿಷತ್ ತಾಲೂಕು ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ, ಪತ್ರಕರ್ತ ಶರಣು ಪಾ ಹಿರೇಮಠ ಮಾತನಾಡಿದರು. ವಿಜಡಮ್ ಕಾಲೇಜಿನ ಆರ್. ಅನಿಲಕುಮಾರ್, ಉಪನ್ಯಾಸಕ ಶರೀಫ್ ಹಸ್ಮಕಲ್, ಕಲಾವಿದರಾದ ಚಿದಾನಂದಪ್ಪ ಗೊರೇಬಾಳ, ಉಮೇಶ ಅರಳಹಳ್ಳಿ, ಬಸವರಾಜ ಮೋತಿ ಇದ್ದರು.