ಸಾರಾಂಶ
ಕೃತ್ಯಕ್ಕೆ ಉಪಯೋಗಿಸಿದ ಟಿವಿಎಸ್ ಜೂಪಿಟರ್ ಸ್ಕೂಟರ್, ಸ್ಕ್ರೂ ಡ್ರೈವರ್, ಕಬ್ಬಿಣದ ರಾಡ್, ಟಾರ್ಚ್ ಲೈಟ್ ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಕುಂಜೆ ಗ್ರಾಮದ ನೀರಲ್ಕೆ ಎಂಬಲ್ಲಿ ಮನೆಯೊಂದರಿಂದ ಚಿನ್ನಾಭರಣ ಕಳವು ಮಾಡಿದ್ಕ ಆರೋಪಿಯನ್ನು ಪೊಲೀಸರು ಬಂಧಿಸಿ, ಆತನಿಂದ ಲಕ್ಷಾಂತರ ರು. ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಇಂದಾವರ ಉಪ್ಪಳ್ಳಿ ಮಸೀದಿ ಬಳಿಯ ನಿವಾಸಿ ಅಬೂಬಕರ್ ಯಾನೆ ಆಲಿಯಾಸ್ ಇತ್ತೆ ಬರ್ಪೆ ಅಬೂಬಕ್ಕರ್ (69) ಬಂಧಿತ ಆರೋಪಿ. ಈತ ಜು.3ರಂದು ಬಳ್ಕುಂಜೆ ಗ್ರಾಮದ ನೀರಲ್ಕೆ ಎಂಬಲ್ಲಿ ಸಾಗೀರ ಎಂಬವರ ಮನೆಯ ಹಿಂಭಾಗಲಿನ ಚಿಲಕ ಮುರಿದು ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡಿದ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಮೂಲ್ಕಿ ಠಾಣಾಧಿಕಾರಿ ವಿದ್ಯಾಧರ್ ಹಾಗೂ ಸಹಾಯಕ ನಿರೀಕ್ಷಕ ವಿನಾಯಕ್ ಬಾವಿಕಟ್ಟೆ ತನಿಖೆ ನಡೆಸಿ ಶನಿವಾರ ಆರೋಪಿ ಅಬೂಬಕ್ಕರ್‌ನನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಉಪಯೋಗಿಸಿದ ಟಿವಿಎಸ್ ಜೂಪಿಟರ್ ಸ್ಕೂಟರ್, ಸ್ಕ್ರೂ ಡ್ರೈವರ್, ಕಬ್ಬಿಣದ ರಾಡ್, ಟಾರ್ಚ್ ಲೈಟ್ ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.