Theft at Amber Valley School

ಚಿಕ್ಕಮಗಳೂರು: ಅಂಬರ್ ವ್ಯಾಲಿ ಶಾಲೆ ಆವರಣದಲ್ಲಿ ಮೋಟಾರ್, ಕೇಬಲ್, ವಿದ್ಯುತ್ ಬಲ್ಬ್ ಹಾಗೂ ವೈರ್‌ಗಳನ್ನು ಕಳ್ಳತನ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಾಲೆ ಕ್ಯಾಂಪಸ್ ಮ್ಯಾನೇಜರ್ ಅಶ್ವಿನ್ ಸಿ. ಮೋಹನ್ (37) ದೂರು ನೀಡಿದ್ದಾರೆ. ಮೂಗ್ತಿಹಳ್ಳಿ ಗ್ರಾಮದ ಅಂಬರ್ ವ್ಯಾಲಿ ಶಾಲೆಯಲ್ಲಿ ಅ.17ರಂದು ಸುಮಾರು ₹10 ಸಾವಿರ ಮೌಲ್ಯದ ಮೋಟಾರ್ ಮತ್ತು ಮೋಟಾರ್ ಕೇಬಲ್ ಕಳುವಾಗಿತ್ತು. ಅ.25 ರಂದು ಶಾಲಾ ಆವರಣದಲ್ಲಿದ್ದ ಸುಮಾರು ₹20 ಸಾವಿರ ಮೌಲ್ಯದ ವಿದ್ಯುತ್ ಬಲ್ಬ್ ಹಾಗೂ ವೈರ್‌ಗಳನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.