ಸಾರಾಂಶ
ಕನ್ನಡಪ್ರಭ ವಾರ್ತೆ ಕಮಲನಗರ
ತಾಲೂಕಿನ ತೋರಣಾ ಗ್ರಾಮದ ಎಸ್‌ಬಿಐ ಬ್ಯಾಂಕ್‌ನ ಅಧಿಕಾರಿಯ ನಿಷ್ಕಾಳಜಿಯಿಂದ ಕಳತನ ಆಗಿದೆ ಎಂದು ಎಸ್.ಪಿ ಚನ್ನಬಸವಣ್ಣ ಲಂಗೋಟಿ ತಿಳಿಸಿದ್ದಾರೆ.ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರ ಸಭೆ ಆಯೋಜಿಸಿ ಕಡ್ಡಾಯವಾಗಿ ತಮ್ಮ-ತಮ್ಮ ಬ್ಯಾಂಕ್‌ನ ಶಾಖೆಗಳ ಸುತ್ತಲೂ ಸಿಸಿ ಕ್ಯಾಮೆರಾ ಮತ್ತು ಕಾವಲುಗಾರರನ್ನು ನಿಯೋಜಿಸಿಕೊಳ್ಳಬೇಕೆಂದು ಸೂಚಿಸಲಾಗಿತ್ತು. ಆದರೂ ಸಹ ಬ್ಯಾಂಕ್‌ನ ಅಧಿಕಾರಿಗಳು ಸೂಚನೆ ಪಾಲಿಸಿಲ್ಲ. ಒಂದು ವೇಳೆ ಅವರು ಸಿಸಿ ಕ್ಯಾಮೆರಾ ಅಳವಡಿಸಿದಿದ್ದರೆ ಆರೋಪಿಗಳನ್ನು ಪತ್ತೆ ಹಚ್ಚಲು ಸುಲಭವಾಗುತ್ತಿತ್ತು ಎಂದು ಹೇಳಿದರು.
ಬ್ಯಾಂಕಿನ ಅಧಿಕಾರಿಗಳು ವಿಮೆ ಮಾಡಿಸಿರುವುದರಿಂದ ಭದ್ರತೆ ಇರುತ್ತದೆ ಎಂದು ಸಿಸಿ ಕ್ಯಾಮೆರಾ ಲಾಕರ್ ಎದುರು ಅಳವಡಿಸಲಿಲ್ಲ. ಬ್ಯಾಂಕಿನ ಕಟ್ಟಡ ತುಂಬಾ ಹಳೆಯದಾಗಿದ್ದು, ಕಿಟಕಿಗೆ ಭದ್ರವಾದ ಸಲಾಕೆಗಳು ಇರಲಿಲ್ಲ. ಆದ್ದರಿಂದ ಕಳ್ಳರಿಗೆ ಕಳುವು ಮಾಡಿಕೊಂಡು ಹೋಗಲು ಸುಲಭವಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಹಣ ಬಿಟ್ಟು ಇನ್ನೂ ಅಂದಾಜು.3 ಕೆಜಿ ಚಿನ್ನಾಭರಣ ಸಹ ಕಳ್ಳರು ದೋಚಿರುವುದಾಗಿ ಮಾಹಿತಿ ನೀಡಿರುತ್ತಾರೆ ಎಂದರು.ಸಾರ್ವಜನಿಕರಿಗೆ ಚಿನ್ನಾಭರಣ ವಸ್ತುಗಳು ಹಾಗೂ ಹಣ ಮನೆಯಲ್ಲಿಟ್ಟರೆ ಕಳುವು ಆಗುತ್ತವೆ ಎಂದು ನಾವು ಸಾರ್ವಜನಿಕರಿಗೆ ಸರ್ಕಾರದ ಬ್ಯಾಂಕ್‌ನ ಶಾಖೆಗಳಲ್ಲಿ ಇಡಲು ಸೂಚಿಸುತ್ತೇವೆ. ಇಂತಹ ನಿಷ್ಕಾಳಜಿ ಅಧಿಕಾರಿಗಳು ಇದ್ದರೆ ಸಾರ್ವಜನಿಕರ ವಿಮೆಯ ಹಣ ಬರುವುದು ಯಾವಾಗ ಮತ್ತು ಸಾರ್ವಜನಿಕರ ಮುಂದೆ ಅವರ ಹಣ, ಚಿನ್ನಾಭರಣ ಬ್ಯಾಂಕ್‌ನಲ್ಲಿ ಇಡಬೇಕೆಂದು ಹೇಳಲು ಮುಜುಗರವಾಗುತ್ತದೆ ಎಂದು ಬೇಸರ ವ್ಯಕ್ತ ಪಡಿಸಿದರು.
ದರೋಡೆಕೋರರನ್ನು ಪತ್ತೆ ಹಚ್ಚಲು ತನಿಖಾ ತಂಡ ರಚಿಸಲಾಗಿದೆ. ಶೀಘ್ರದಲ್ಲಿ ದರೋಡೆಕೋರರನ್ನು ಪತ್ತೆ ಹಚ್ಚುವುದಾಗಿ ಎಸ್ಪಿ ತಿಳಿಸಿದರು.ಘಟನಾ ಸ್ಥಳಕ್ಕೆ ಈಶಾನ್ಯ ವಲಯ ಕಲಬುರಗಿಯ ಪೊಲೀಸ್ ಉಪ ಮಹಾನಿರೀಕ್ಷಕರಾದ ಅಜಯ ಹಿಲೋರಿ, ಬೀದರ್ ಎಸ್ಪಿ ಚನ್ನಬಸವಣ್ಣ. ಎಸ್.ಎಲ್, ಭಾಲ್ಕಿ ಡಿವೈಎಸ್ಪಿ ಶಿವಾನಂದ್ ಪವಾಡಶೆಟ್ಟಿ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.