ಸಾರಾಂಶ
ಮನೆಗೆ ನುಗ್ಗಿ 15 ಲಕ್ಷ ರು.ನಗದು ಹಾಗೂ ಸುಮಾರು 7 ಲಕ್ಷ ರು. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ನಗರದ ಹೊಸ ಬಸ್ ನಿಲ್ದಾಣ ಎದುರು ಕೆ.ಎಚ್.ಬಿ. ಬಡಾವಣೆಯಲ್ಲಿ ಸಂಭವಿಸಿದೆ. ಕಳ್ಳರು ಮನೆ ಪ್ರವೇಶ ಮಾಡಲು ಕಬ್ಬಿಣದ ಆಯುಧದಿಂದ ಮುಂಬಾಗಿಲು ಮೀಟಿ ಕಳ್ಳತನ ಮಾಡಿರುವುದು ಕೇವಲ ನಾಲ್ಕೈದು ಗಂಟೆಗಳಲ್ಲಿ ಮಾತ್ರ ಈ ಘಟನೆ ನಡೆದಿದ್ದು, ನಗದು, ಚಿನ್ನಾಭರಣ ಸೇರಿ ಒಟ್ಟು ಮೌಲ್ಯ 22 ಲಕ್ಷ ರು. ಎಂದು ಅಂದಾಜಿಸಲಾಗಿದೆ. ಚೋರ ಎಲ್ಲವನ್ನು ಬ್ಯಾಗಿನಲ್ಲಿ ಹಾಕಿಕೊಂಡು ಬೈಕ್‌ನಲ್ಲಿ ಪರಾರಿಯಾಗುವ ಕಳ್ಳನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕನ್ನಡಪ್ರಭ ವಾರ್ತೆ ಹಾಸನ
ಮನೆಗೆ ನುಗ್ಗಿ 15 ಲಕ್ಷ ರು.ನಗದು ಹಾಗೂ ಸುಮಾರು 7 ಲಕ್ಷ ರು. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ನಗರದ ಹೊಸ ಬಸ್ ನಿಲ್ದಾಣ ಎದುರು ಕೆ.ಎಚ್.ಬಿ. ಬಡಾವಣೆಯಲ್ಲಿ ಸಂಭವಿಸಿದೆ.ಕೆ.ಎಚ್.ಬಿ. ಕಾಲೋನಿ ನಿವಾಸಿ ಸಚಿನ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಡಿ.5ರಂದು ಬೆಳಿಗ್ಗೆ ಪತ್ನಿ ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿದ್ದಾರೆ. ಸಂಜೆ ಮನೆಗೆ ವಾಪಸ್ ಬಂದಾಗ ಮುಂದಿನ ಬಾಗಿಲು ತೆಗೆದಿತ್ತು. ಗಾಬರಿಯಲ್ಲಿಯೇ ಮನೆ ಒಳಗೆ ಪ್ರವೇಶ ಮಾಡಿದಾಗ ಎರಡು ರೂಂಗಳ ವಾಡ್‌ರೋಬ್ ತೆರೆದುಕೊಂಡಿತ್ತು. ಒಂದು ರೂಂನಲ್ಲಿ ಇಡಲಾಗಿದ್ದ 15 ಲಕ್ಷ ರು. ನಗದು ಮತ್ತು ಇನ್ನೊಂದು ರೂಂನಲ್ಲಿ ಇಡಲಾಗಿದ್ದ 105 ಗ್ರಾಂ ವಿವಿಧ ಒಡವೆಗಳನ್ನು ಕಳ್ಳರು ದೋಚಿದ್ದಾರೆ. ಕಳ್ಳರು ಮನೆ ಪ್ರವೇಶ ಮಾಡಲು ಕಬ್ಬಿಣದ ಆಯುಧದಿಂದ ಮುಂಬಾಗಿಲು ಮೀಟಿ ಕಳ್ಳತನ ಮಾಡಿರುವುದು ಕೇವಲ ನಾಲ್ಕೈದು ಗಂಟೆಗಳಲ್ಲಿ ಮಾತ್ರ ಈ ಘಟನೆ ನಡೆದಿದ್ದು, ನಗದು, ಚಿನ್ನಾಭರಣ ಸೇರಿ ಒಟ್ಟು ಮೌಲ್ಯ 22 ಲಕ್ಷ ರು. ಎಂದು ಅಂದಾಜಿಸಲಾಗಿದೆ.ಈ ಕಳ್ಳತನ ಮಾಡಿರುವ ಚೋರ ಎಲ್ಲವನ್ನು ಬ್ಯಾಗಿನಲ್ಲಿ ಹಾಕಿಕೊಂಡು ಬೈಕ್‌ನಲ್ಲಿ ಪರಾರಿಯಾಗುವ ಕಳ್ಳನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.