ಕಳವು ಮಾಡಿಸ ಆರೋಪಿ ಬಂಧನ: 32ಗ್ರಾಂ ಚಿನ್ನ, 51ಗ್ರಾಂ ಬೆಳ್ಳಿ ವಶ

| Published : Jul 11 2025, 11:48 PM IST

ಸಾರಾಂಶ

ಪಟ್ಟಣ, ಹನೂರು ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6 ಕಡೆ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ

ಪಟ್ಟಣ, ಹನೂರು ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6 ಕಡೆ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ಮಂಜುನಾಥ್ ನಗರದ ಶಿವು ಅಲಿಯಾಸ್ ಶಿವ ಎಂಬಾತ (33) ಬಂಧಿತ ಆರೋಪಿ. ಈತ 6 ಪ್ರಕರಣಗಳಲ್ಲೂ ಕೃತ್ಯವೆಸಗಿದ್ದ, ಈತನ ಬಂಧನವೇ ಇಲಾಖೆ ಸವಾಲಾಗಿತ್ತು. ಬಂಧಿತನಿಂದ ಮೂರು ಲಕ್ಷ ರು.ಬೆಲೆಬಾಳುವ 32 ಗ್ರಾಂ ಚಿನ್ನಾಭರಣ, 51 ಗ್ರಾಂ ಬೆಳ್ಳಿ ಆಭರಣ ಜಪ್ತಿ ಮಾಡಲಾಗಿದೆ.. ಈ ಹಿನ್ನೆಲೆ ಕಳ್ಳತನ ಪ್ರಕರಣದ ಆರೋಪಿ ಸೆರೆ ಹಿಡಿಯುವಲ್ಲಿ ಎಸ್ಪಿ ಹಾಗೂ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಕ್ರೈಂ ಪಿಎಸ್ಐ ಉಮಾವತಿ, ಡಿವೈಎಸ್ಪಿ ಉಪವಿಭಾಗ ಅಪರಾಧ ಪತ್ತೆದಳ ಎಎಸೈ ತಖೀವುಲ್ಲಾ, ಸಿಬ್ಬಂದಿಗಳಾದ ವೆಂಕಟೇಶ್, ರವಿಕುಮಾರ್, ಬಿಳಿಗೌಡ, ಶಿವಕುಮಾರ್, ಸವಿರಾಜ್, ಮಾರ್ಷಲ್,

ಜಿಲ್ಲಾ ನಿಸ್ತಂತ್ತು ವಿಭಾಗದ ವೆಂಕಟೇಶ್, ಶಂಕರರಾಜು ಯಶಸ್ವಿಯಾಗಿದ್ದಾರೆ. ಈ ಪ್ರಕರಣವನ್ನು ಬೇಧಿಸಿ ಪತ್ತೆಹಚ್ಚಿ ಚಿನ್ನಾಭರಣವನ್ನು ಜಪ್ತಿ ಮಾಡಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಚಾ.ನಗರ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ ಅಭಿನಂದಿಸಿ ನಗದು ಬಹುಮಾನ ಘೋಷಿಸಿದ್ದಾರೆ.