ಕಳವು ಆರೋಪಿಗಳ ಬಂಧನ: ಚಿನ್ನಾಭರಣ ವಶ

| Published : Jul 15 2025, 01:11 AM IST

ಸಾರಾಂಶ

ಮಂಡ್ಯ ಪೂರ್ವ ಹಾಗೂ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ವಿವಿಧ ಬಡಾವಣೆಗಳಲ್ಲಿ ಇವರಿಬ್ಬರು ಕಳ್ಳತನ ನಡೆಸಿದ್ದರು.

ಮಂಡ್ಯ:ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಮದ್ದೂರು ಪೊಲೀಸರು ಅವರಿಂದ 18.20 ಲಕ್ಷ ರು. ಮೌಲ್ಯದ 182 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಸಾರಿಗೆ ಬಸ್ ಡಿಪೋ ಹಿಂಭಾಗದಲ್ಲಿ ವಾಸವಾಗಿರುವ ಗೋಪಿಕೃಷ್ಣ ಅಲಿಯಾಸ್ ಗೋಪಿ (49) ಹಾಗೂ ಮದ್ದೂರು ತಾಲೂಕು ಸೋಮನಹಳ್ಳಿ ಗ್ರಾಮದ ಎಸ್.ಕೆ. ಸುರೇಶ ಅಲಿಯಾಸ್ ಸೂರಿ (23) ಬಂಧಿತ ಆರೋಪಿಗಳು. ಮಂಡ್ಯ ಪೂರ್ವ ಹಾಗೂ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ವಿವಿಧ ಬಡಾವಣೆಗಳಲ್ಲಿ ಇವರಿಬ್ಬರು ಕಳ್ಳತನ ನಡೆಸಿದ್ದರು. ಇವರ ಬಂಧನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಂಡ ರಚಿಸಿದ್ದು, ಈ ತಂಡ ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಗಳಿಂದ 18.20 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.