ಸಾರಾಂಶ
ಏ.೧೨ರ ಕನ್ನಡಪ್ರಭದಲ್ಲಿ "ದರೋಡೆಗೆ ಸಂಚು: ಇಬ್ಬರು ಆರೋಪಿಗಳ ಬಂಧನ " ಎಂದು ವರದಿ ಪ್ರಕಟಿಸಿತ್ತು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದಲ್ಲಿ ಪೊಲೀಸರ ಭಯವಿಲ್ಲದ ಕಾರಣ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.! ಪಟ್ಟಣದಲ್ಲಿ ಕೆಲ ಯುವಕರ ಪುಂಡಾಟಕ್ಕೆ ಸ್ಥಳೀಯ ಪೊಲೀಸರು ಹೆಡೆ ಮುರಿ ಕಟ್ಟಲು ಮುಂದಾಗಬೇಕು.ಕೆಲ ಯುವಕರ ಪುಂಡಾಡಕ್ಕೆ ಪೊಲೀಸರು ಬ್ರೇಕ್ ಹಾಕಲು ರೌಡಿ ಪಟ್ಟ ಕಟ್ಟುವುದನ್ನು ತುರ್ತಾಗಿ ಮಾಡಲು ಮನಸ್ಸು ಮಾಡಲಿ ಎಂಬ ಸಲಹೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಪಟ್ಟಣದಲ್ಲಿ ಗಾಂಜಾ ಮಾರಾಟ ಹೆಚ್ಚಿದೆ. ಯುವಕರಿಂದ ಆನ್‌ಲೈನ್ ಗೇಮ್ ಹಾವಳಿ ಹೆಚ್ಚಿದೆ. ಐಪಿಎಫ್ ಬೆಟ್ಟಿಂಗ್ ದಂಧೆ ಸದ್ದು ಮಾಡುತ್ತಿದೆ. ಕೇರಳ ಲಾಟರಿ ಟಿಕೆಟ್ ಮಾರಾಟ ಹೆಚ್ಚಿದೆ. ಇಂಥ ಅಕ್ರಮಕ್ಕೆ ಪೊಲೀಸರು ಮೊದಲು ಕಡಿವಾಣ ಹಾಕುವ ಕೆಲಸ ಆಗಬೇಕಿದೆ.
ಪಟ್ಟಣದಲ್ಲಿ ಯುವಕರ ಪುಂಡಾಟಕ್ಕೆ ನೂತನ ಪೊಲೀಸ್ ಇನ್ಸ್‌ಪೆಕ್ಟರ್ ಜಯಕುಮಾರ್‌ರಿಂದ ಬ್ರೇಕ್ ಹಾಕುವ ಕೆಲಸ ಆಗಬೇಕು. ಸ್ಥಳೀಯ ಪೊಲೀಸರ ಕೆಲಸಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಾಥ್ ನೀಡಲಿ.ಪುಂಡರನ್ನು ಬೇಗ ಬಂಧಿಸಲಿ:
ದರೋಡೆಗೆ ಯತ್ನಿಸಿ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾದ ೮ ಯುವಕರ ಸೆರೆ ಬೇಗ ಆಗಬೇಕಿದೆ. ಬೇಗ ಸೆರೆ ಹಿಡಿದು ಜೈಲಿಗಟ್ಟಿದರೆ ಪುಂಡಾಟವಾಡುವ ಯುವಕರು ಎಚ್ಚೆತ್ತುಕೊಳ್ಳಲಿದ್ದಾರೆ ಎಂದು ಹಿರಿಯ ನಾಗರಿಕರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.ದರೋಡೆಗೆ ಯತ್ನಿಸಿ ಪರಾರಿಯಾದ ೮ ಮಂದಿಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. 6 ಮಂದಿಯ ಜೊತೆಗೆ ಇನ್ನಿಬ್ಬರ ಹೆಸರು ಸೇರ್ಪಡೆಯಾಗಿದೆ. ನಾಳೆಯೊಳಗೆ ಬಂಧಿಸಲು ಪ್ರಯತ್ನ ನಡೆದಿದೆ.-ಜಯಕುಮಾರ್, ಇನ್ಸ್‌ಪೆಕ್ಟರ್, ಗುಂಡ್ಲುಪೇಟೆ