ಸಾರಾಂಶ
- ಜವಾಬ್ದಾರಿ ಸ್ಥಾನದಲ್ಲಿರುವ ದೇವೇಂದ್ರಪ್ಪ ಆಲೋಚಿಸಿ ಮಾತನಾಡಲಿ: ರಾಜೇಶ್ ತಾಕೀತು - - -
ಕನ್ನಡಪ್ರಭ ವಾರ್ತೆ ಜಗಳೂರುಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದ ಮುಸ್ಲಿಂ ಕಾಲೋನಿ ವ್ಯಾಪ್ತಿಯ ಕಳಪೆ ಸಿ.ಸಿ. ರಸ್ತೆ ಕಾಮಗಾರಿಗಳು ಪರಿಶೀಲಿಸಿದ್ದೇವೆ. ಕುಡಿಯುವ ನೀರು, ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ನಾನೂ ಮತ್ತು ಮಾಜಿ ಶಾಸಕ ರಾಮಚಂದ್ರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೇ ಪ್ರಶ್ನಿಸಿದ್ದೇವೆ. ಇದರಿಂದ ಹತಾಶಗೊಂಡ ಶಾಸಕ ದೇವೇಂದ್ರಪ್ಪ ಅವರು, ನಾವು ಪ್ರಶ್ನಿಸಿದ್ದೇ ತಪ್ಪು ಎನ್ನುವಂತೆ ಶಾಸಕರು ಹೇಳಿದ್ದಾರೆ. ಆ ಮೂಲಕ ನಮ್ಮ ಸ್ವಾತಂತ್ರ್ಯ ಮೊಟಕುಗೊಳಿಸುವ ಕಾರ್ಯ ಸರಿಯಲ್ಲ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ವಾಗ್ದಾಳಿ ಮಾಡಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜವಾಬ್ದಾರಿ ಸ್ಥಾನದಲ್ಲಿ ಇರುವ ಶಾಸಕರು ಆಲೋಚನೆ ಮಾಡಿ ಮಾತನಾಡಬೇಕು. ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಮಾತಿಗೂ, ಕೃತಿಗೂ ಸಾಕಷ್ಟು ವ್ಯತ್ಯಾಸವಿದೆ. ರಾಮಚಂದ್ರ, ನಾನು ಜನರ ಮಧ್ಯೆ ಇದ್ದು 5 ಚುನಾವಣೆಗಳಲ್ಲಿ ಗೆದ್ದು- ಸೋತು ಸೇವೆ ಮಾಡಿದ್ದೇವೆ. ಕ್ಷೇತ್ರದಲ್ಲಿ ಉಸಿರುಗಟ್ಟಿದ ವಾತಾವರಣವಿದೆ. ಇನ್ನೂ 3 ವರ್ಷ ಅಧಿಕಾರವಿದೆ. ನಿಮ್ಮ ವರ್ತನೆ ಬದಲಿಸಿಕೊಳ್ಳಿ. ನೀವು ಸಹ ಪಕ್ಷೇತರರಾಗಿ ಚುನಾವಣೆಗೆ ನಿಲ್ಲಿ, ನಾನೂ ನಿಲ್ಲುತ್ತೇನೆ. ಯಾರು ಗೆಲ್ಲುತ್ತಾರೊ ನೋಡೋಣ ಎಂದು ಸವಾಲು ಹಾಕಿದರು.ಜನರ ಮನಸ್ಸನ್ನು ಗೆದ್ದಿದೇನೆ:
ಸರ್ಕಾರಿ ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಎದುರೇ ನನ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅವರಿಗೆ ಮುಜುಗರ ಉಂಟಾಗುವಂತೆ ಮಾತನಾಡಿದ್ದು ವಿಡಿಯೋಗಳಲ್ಲಿ ನೋಡಿದ್ದೇನೆ. ಕ್ಷೇತ್ರದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಶಾಸಕರು ಇದುವರೆಗೂ ಮಾತನಾಡಿಲ್ಲ. ಜನರ ಮನಸ್ಸನ್ನು ನಾನು ಗೆದ್ದಿದೇನೆ, ತಾಂತ್ರಿಕವಾಗಿ ನೀವು ಗೆದ್ದಿದ್ದೀರಿ ಅಷ್ಟೆ ಎಂದರು.ಪಪಂ ಅಧ್ಯಕ್ಷ ಕೆ.ಎಸ್. ನವೀನಕುಮಾರ್, ಸದಸ್ಯರಾದ ಕಾಯಿ ರೇವಣ್ಣ, ಶಿವಕುಮಾರ ಸ್ವಾಮಿ, ಮುಖಂಡರಾದ ಕ್ಯಾಂಪ್ ರೇವಣ್ಣ, ಬನ್ನಿಹಟ್ಟಿ ರೇವಣ್ಣ, ಸಿದ್ದೇಶ್, ರಾಜು, ಬೋರಣ್ಣ, ಸೂರಲಿಂಗಪ್ಪ, ಓಬಳೇಶ್, ಕುಬೇರಪ್ಪ, ಮಾರಪ್ಪ, ಬಾಲರಾಜ್ ಇದ್ದರು.
- - -(ಬಾಕ್ಸ್) * ₹600 ಕೋಟಿ ಬಗ್ಗೆ ಶ್ವೇತಪತ್ರ ಹೊರಡಿಸಿ ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ. ₹600 ಕೋಟಿ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಿ. ನೀವು ಅಭಿವೃದ್ಧಿ ಕೆಲಸ ಮಾಡಿ. ನಾನು ಮತ್ತು ಎಸ್.ವಿ.ರಾಮಚಂದ್ರ ಬೆಂಬಲಿಸುತ್ತೇವೆ. ಸ್ಥಳೀಯವಾಗಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸುವ ಕೆಲಸ ಮಾಡಿ. ಭದ್ರಾ ಮೇಲ್ದಂಡೆ ಯೋಜನೆ ಯಾವ ಹಂತದಲ್ಲಿದೆ, ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಮಾತನಾಡಿದ್ದೀರಾ? ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಏನಾಗುತ್ತಿದ್ದೆ ಕೇಳಿದ್ದೀರಾ ಎಂದು ಎಚ್.ಪಿ.ರಾಜೇಶ್ ಪ್ರಶ್ನಿಸಿದರು.
- - -
(ಟಾಪ್ ಕೋಟ್) ಜಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿದವರು ಯಾರು? ಪಕ್ಷ ಸಂಘಟನೆ ಮಾಡಿದವರು ಯಾರು ಎಂದು ಜನರಿಗೆ ಗೊತ್ತು. ನೀವು ಹೇಗೆ ಟಿಕೆಟ್ ತಂದಿದ್ದೀರಿ ಎಂದು ಗೊತ್ತು. ವರಿಷ್ಠರಿಗೆ ಮ್ಯಾನೇಜ್ ಮಾಡಿ ಟಿಕೆಟ್ ತಂದಿದ್ದೀರಿ. ನಾನು ಕಾಂಗ್ರೆಸ್‌ನಲ್ಲಿದ್ದಾಗ ಪ್ರತಿ ಹಳ್ಳಿಗೆ ಹೋಗಿ ಗ್ಯಾರಂಟಿ ಕಾರ್ಡ್ ಹಂಚಿ ಬಂದಿದ್ದೇನೆ. ನೀವು ವಾಮಮಾರ್ಗದಲ್ಲಿ ಟಿಕೆಟ್ ತಂದಿದ್ದೀರಿ. - ಎಚ್.ಪಿ.ರಾಜೇಶ್, ಮಾಜಿ ಶಾಸಕ- - -
-13ಜೆಎಲ್ಆರ್ಚಿತ್ರ2:ಮಾಜಿ ಶಾಸಕ ಎಚ್.ಪಿ.ರಾಜೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.