ಸಾರಾಂಶ
ಶೃಂಗೇರಿ: ಸನಾತನ ಧರ್ಮದ ಏಳಿಗೆಗಾಗಿ, ಸಂರಕ್ಷಣೆಗಾಗಿ ಜೀವನವಿಡೀ ಶ್ರಮಿಸಿದ ಶ್ರೀ ಶಂಕರಾಚಾರ್ಯರು ಜಗತ್ತು ಕಂಡ ಶ್ರೇಷ್ಠ ತತ್ವಜ್ಞಾನಿ. ಸನಾತನ ಧರ್ಮ, ಪರಂಪರೆ ಉಳಿಸಿ, ಬೆಳೆಸುವ ಮಹತ್ತರ ಜವಾಬ್ದಾರಿ ಶಂಕರ ತತ್ವ ಅನುಯಾಯಿಗಳ ಮೇಲಿದೆ ಎಂದು ಹೇರೂರು ಕಾಮಧೇನು ಗೋ ಸೇವಾ ಕೇಂದ್ರದ ಅಧ್ಯಕ್ಷ ನಾಗೇಶ್ ಅಂಗೀರಸ ಹೇಳಿದ್ದಾರೆ.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಶ್ರೀ ಶಂಕರಾಚಾರ್ಯರು ಸನಾತನ ಧರ್ಮದ ಪ್ರಚಾರಕ್ಕಾಗಿ ದೇಶದ್ದುಗಲಕ್ಕೂ ಸಂಚರಿಸಿ ಪ್ರಚಾರ ಮಾಡಿದರು. ದೇಶದ ಅಖಂಡತೆ ಎತ್ತಿ ಹಿಡಿದರು. ಅಸ್ಪೃಷ್ಯತೆ,ಪಾಶ್ಚಿಮಾತ್ಯ ಧರ್ಮ ಸಂಸ್ಕೃತಿ ಗಳ ಹಾವಳಿ, ರಾಷ್ಟ್ರೀಯ ಭದ್ರತೆ, ಏಕತೆಗೆ ಧಕ್ಕೆ ತರುತ್ತಿದೆ.ಭಾಷೆ, ಗಡಿ, ಜಲ, ಜಾತಿಗಳ ವಿಚಾರಗಳು, ದೇಶವನ್ನು ಮತ್ತೆ ಒಡೆಯುವ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ದೇಶ ಒಗ್ಗೂಡಿಸುವ ಧರ್ಮ, ಸಂಸ್ಕೃತಿ ಪರಂಪರೆ ಉಳಿಸುವ ಬೆಳೆಸುವ ಕೆಲಸ ನಡೆಯಬೇಕಿದೆ. ಶಂಕರಾಚಾರ್ಯ ಜಯಂತಿ ಕೇವಲ ದಿನಾಚರಣೆಗೆ ಸೀಮಿತವಾಗಿರಬಾರದು. ಶಂಕರ ತತ್ವ ಅನುಯಾಯಿಗಳು ಶ್ರೀ ಶಂಕರರ ತತ್ವಗಳನ್ನು ಪ್ರಚಾರ ಮಾಡುವ ಕೆಲಸ ಮಾಡಬೇಕು. ನಿಜವಾದ ಅದ್ವೈತಿಗಳಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
12 ಶ್ರೀ ಚಿತ್ರ 2-ನಾಗೇಶ್‌ಅಂಗೀರಸ